ಬಳ್ಳಾರಿ: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

By Kannadaprabha NewsFirst Published Feb 7, 2021, 12:38 PM IST
Highlights

ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ| ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ನಡೆದ ಘಟನೆ| ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 1 ಲಕ್ಷ ಮತ್ತು ಹೊರಗಡೆ 6 ಲಕ್ಷ ಸಾಲ ಮಾಡಿದ್ದ ಮೃತ ರೈತ| ಈ ಕುರಿತು ಕುರುಗೋಡು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ಕುರುಗೋಡು(ಫೆ.07): ಸಾಲದ ಬಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಪಟ್ಟಣದಲ್ಲಿ ಜರುಗಿದೆ.

ಪಟ್ಟಣದ ನಿವಾಸಿ ಬಿ. ರುದ್ರೇಶ್‌ (35) ಅವರು ಫೆ. 4ರಂದು ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ತೀವ್ರ ಅಸ್ವಸ್ಥನಾಗಿದ್ದು, ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಫೆ. 5ರ ಶುಕ್ರವಾರ ಮೃತಪಟ್ಟಿದ್ದಾರೆ.

ಬೇರೆ ಹೆಣ್ಣುಗಳು ಬೇಕು : ಹೆಂಡ್ತಿ ಮುಖ ಕಂಡರಾಗದ ಸಾಫ್ಟ್‌ವೇರ್ ಗಂಡನಿಂದ ಬೇಸತ್ತು ಸೂಸೈಡ್

1.70 ಎಕರೆ ಸ್ವಂತ ಜಮೀನು ಮತ್ತು 6 ಎಕರೆ ಗುತ್ತಿಗೆ ಪಡೆದ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಹಾಕಿದ್ದರು. ಅಕಾಲಿಕ ಮಳೆ ಮತ್ತು ರೋಗಬಾಧೆಯಿಂದ ಬೆಳೆ ಸಂಪೂರ್ಣ ಕೈಕೊಟ್ಟಿದೆ. ಬೆಳೆ ನಿರ್ವಹಣೆಗೆ ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 1 ಲಕ್ಷ ಮತ್ತು ಹೊರಗಡೆ 6 ಲಕ್ಷ ಸಾಲ ಮಾಡಿದ್ದಾರೆ. ಬೆಳೆಗಾಗಿ ಮಾಡಿದ ಸಾಲ ತೀರಿಸುವುದು ಹೇಗೆ ಎಂದು ಚಿಂತಾಕ್ರಾಂತನಾಗಿದ್ದ ಅವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಈ ಕುರಿತು ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!