ಬೆಂಗಳೂರಿನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದವರನ್ನ ತಡೆದು ಸುಲಿಗೆ ಮಾಡಲು ಮುಂದಾಗಿದ್ದ ಕಾಂಗ್ರೆಸ್ ಮುಖಂಡ ಸೇರಿ ಇಬ್ಬರನ್ನ ಆರ್ ಎಂ ಸಿ ಯಾರ್ಡ್ ಪೊಲೀಸರು ಬಂಧನ ಮಾಡಿದ್ದಾರೆ.
ವರದಿ: ಹರೀಶ್ ರಾಮಸ್ವಾಮಿ ಏಷಿಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜೂ.22): ಬೆಂಗಳೂರಿನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದವರನ್ನ ತಡೆದು ಸುಲಿಗೆ ಮಾಡಲು ಮುಂದಾಗಿದ್ದ ಕಾಂಗ್ರೆಸ್ ಮುಖಂಡ ಸೇರಿ ಇಬ್ಬರನ್ನ ಆರ್ ಎಂ ಸಿ ಯಾರ್ಡ್ ಪೊಲೀಸರು ಬಂಧನ ಮಾಡಿದ್ದಾರೆ. ಸುಂಕದಕಟ್ಟೆಯ ಸ್ಥಳೀಯ ಕಾಂಗ್ರೆಸ್ ಮುಖಂಡ ಪ್ರಶಾಂತ್ ಹಾಗೂ ಸೋಮುಗೌಡ ಎಂಬುವ ಇಬ್ಬರನ್ನ ಬಂಧನ ಮಾಡಲಾಗಿದೆ.
undefined
ಕಳೆದ 21 ನೇ ತಾರೀಖು ಬೆಳಗ್ಗೆ ಮಾಗಡಿಯಲ್ಲಿ ಗೋಮಾಂಸ ಖರೀದಿ ಮಾಡಿದ್ದ ಉಮೇಶ್ ಹಾಗೂ ಖಾಜಾ ಮೊಯಿನುದ್ದೀನ್ ಎಂಬ ಇಬ್ಬರು ಸ್ಕಾರ್ಪಿಯೋ ವಾಹನದಲ್ಲಿ ಶಿವಾಜಿ ನಗರಕ್ಕೆ ಸಾಗಿಸುತ್ತಿದ್ದರು. ಈ ವೇಳೆ ತುಮಕೂರು ರಸ್ತೆಯಲ್ಲಿ ಈ ಇಬ್ಬರನ್ನ ತಡೆದಿದ್ದ ಪ್ರಶಾಂತ್ ಹಾಗೂ ಸೋಮುಗೌಡ ತಮ್ಮ ಗ್ಯಾಂಗ್ ನೊಂದಿಗೆ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಮೊದಲು ತಮ್ಮ ಇನ್ನೋವಾ ಕಾರಿಗೆ ತಮ್ಮ ಸ್ಕಾರ್ಪಿಯೋ ಕಾರು ಟಚ್ ಆಗಿ ಡ್ಯಾಮೇಜ್ ಆಗಿದೆ.
ದುಷ್ಕರ್ಮಿಗಳನ್ನು ಬಂಧಿಸಿ ನ್ಯಾಯ ಕೊಡಿಸಿ, ಇಲ್ಲವೇ ನಮ್ಮ ಕುಟುಂಬಕ್ಕೆ ದಯಾಮರಣ ನೀಡಿ: ಅಬ್ದುಲ್ ಕಬೀರ್
ಹೀಗಾಗಿ ಹಣ ಕಟ್ಟಿ ಕೊಡುವಂತೆ ಹೇಳಿದ್ದು, ನಂತರ ಕಾರಿನಲ್ಲಿ ದನದ ಮಾಂಸ ಇದ್ದು 2 ಲಕ್ಷ ಹಣ ಕೊಡುವಂತೆ ಡಿಮಾಂಡ್ ಮಾಡಿದ್ದಾರೆ. ನಂತರ ಇಬ್ಬರನ್ನೂ ಇನ್ನೋವಾ ಕಾರಿಗೆ ಹತ್ತಿಸಿ ಹಲ್ಲೆ ಮಾಡಿದ್ದಾಗಿ ಖಾಜಾ ಮೋಯಿನುದ್ದೀನ್ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಆರ್ ಎಂ ಸಿ ಯಾರ್ಡ್ ಪೊಲೀಸರು ಪೊಲೀಸರು ಪ್ರಶಾಂತ್ ಹಾಗೂ ಸೋಮುಗೌಡನನ್ನ ಬಂಧಿಸಿದ್ದಾರೆ.
ಇನ್ನೂ ಪ್ರಶಾಂತ್ ಸುಂಕದಕಟ್ಟೆಯ ನಿವಾಸಿಯಾಗಿದ್ದು, ಕಾಂಗ್ರೆಸ್ ಪಕ್ಷದ ಗುರುತಿಸಿಕೊಂಡಿದ್ದ. ಈ ಬಾರಿಯ ಕಾರ್ಪೋರೇಟರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂಬುದಾಗಿ ತಿಳಿದು ಬಂದಿದೆ. ಸದ್ಯ ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದ ಹಿನ್ನಲೆ ಉಮೇಶ ಹಾಗೂ ಖಾಜಾ ಮೋಯಿನುದ್ದೀನ್ ಮೇಲೆಯೂ ಪ್ರಕರಣ ದಾಖಲಿಸಿರುವ ಪೊಲೀಸರು ಅವರನ್ನ ಬಂಧನ ಮಾಡಿದ್ದಾರೆ.
ಗುಂಡ್ಯ: ಚಿನ್ನದಂಗಡಿ ಶುಭಾರಂಭದ ದಿನವೇ ಮಾಲೀಕ ಶವವಾಗಿ ಪತ್ತೆ!
ಸದ್ಯ ಎರೆಡೂ ವಾಹನಗಳನ್ನ ವಶಕ್ಕೆ ಪಡೆದಿರುವ ಪೊಲೀಸರು ಎರೆಡು ಪ್ರತ್ಯೇಕ ಪ್ರಕರಣ ದಾಖಲಿಸಿ ಗೋಮಾಂಸವನ್ನ ನಾಶಪಡಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಇದೇ ರೀತಿ ತುಮಕೂರು ರಸ್ತೆಯಲ್ಲಿ ಗೋಮಾಂಸ ಸಾಗಿಸುವವರ ಮೇಲೆ ಹಲವು ಸ್ಥಳೀಯ ಮುಖಂಡರು ವಸೂಲಿ ಮಾಡುತ್ತಿದ್ದಾರೆ ಎಂಬುವ ವಿಚಾರವು ತಿಳಿದು ಬಂದಿದೆ. ಈ ಕುರಿತು ಆರ್ ಎಂ ಸಿ ಯಾರ್ಡ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ..