ದುಷ್ಕರ್ಮಿಗಳನ್ನು ಬಂಧಿಸಿ ನ್ಯಾಯ ಕೊಡಿಸಿ, ಇಲ್ಲವೇ ನಮ್ಮ ಕುಟುಂಬಕ್ಕೆ ದಯಾಮರಣ ನೀಡಿ: ಅಬ್ದುಲ್ ಕಬೀರ್

ನಮ್ಮ ಸಹೋದರನ ಕೊಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ನ್ಯಾಯ ಕೊಡಿಸಿ, ಇಲ್ಲವೇ ನಮ್ಮ ಕುಟುಂಬಕ್ಕೆ ದಯಾಮರಣ ನೀಡಿ ಎಂದು ಅನ್ವರ್ ಸಹೋದರ ಅಬ್ದುಲ್ ಕಬೀರ್ ಒತ್ತಾಯಿಸಿದ್ದಾರೆ.

Chikkamagaluru BJP leader anwar murder case his brother request for family Euthanasia kananda news gow

ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜೂ.22): ನಮ್ಮ ಸಹೋದರನ ಕೊಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ನ್ಯಾಯ ಕೊಡಿಸಿ, ಇಲ್ಲವೇ ನಮ್ಮ ಕುಟುಂಬಕ್ಕೆ ದಯಾಮರಣ ನೀಡಿ ಎಂದು ಅನ್ವರ್ ಸಹೋದರ ಅಬ್ದುಲ್ ಕಬೀರ್ ಒತ್ತಾಯಿಸಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರಿಂದ ಅಂದಿನ ಬಿಜೆಪಿ ಸರ್ಕಾರ ಪ್ರಕರಣದ ತನಿಖೆಯನ್ನು ಸಿಒಡಿಗೆ ನೀಡಿತ್ತು. ಸದ್ಯ ಸಿಐಡಿಯವರು ತನಿಖೆ ನಡೆಸುತ್ತಿದ್ದರೂ ಆರೋಪಿಗಳ ಸುಳಿವು ಮಾತ್ರ ಇದುವರೆಗೂ ಪತ್ತೆಯಾಗಿಲ್ಲ ಎಂದು ದೂರಿದರು.

ಪ್ರಕರಣ ಹಿನ್ನೆಲೆ:
ಜೂನ್ 22. 2018. ಚಿಕ್ಕಮಗಳೂರಿನ ಬಿಜೆಪಿ ಮುಖಂಡ ಅನ್ವರ್ ಗೌರಿಕಾಲುವೆಯ ಗುಡ್ಮಾರ್ನಿಂಗ್ ಶಾಪ್ ಬಳಿ ಕೊಲೆಯಾಗಿದ್ದರು. ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಕೂಡ ಆಗಿದ್ದ ಅನ್ವರ್ನನ್ನ ದುಷ್ಕರ್ಮಿಗಳು ಡ್ರ್ಯಾಗನ್ನಿಂದ ದೇಹದ ಆರು ಕಡೆ ಚುಚ್ಚಿ ಕೊಲೆಗೈದಿದ್ರು. ಮರುದಿನ ಚಿಕ್ಕಮಗಳೂರಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದಿನ ಎಸ್ಪಿ ಅಣ್ಣಾಮಲೈ ಪರಿಸ್ಥಿತಿ ನಿಯಂತ್ರಿಸುವಲ್ಲಿ ಗೆದ್ರು, ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಸೋತಿದ್ರು. ತನಿಖೆ ನಡೆಯುತ್ತಿದೆ, ಅನುಮಾನ ಬಂದಿದೆ, ಗೊತ್ತಾಗಿದೆ, ಬಂಧಿಸ್ತೀವಿ ಎಂದು ಹೇಳುತ್ತಲೇ ವರ್ಗಾವಣೆಯಾದ್ರು. ಕೊಲೆಗಾರರನ್ನ ಬಂಧಿಸಲೇ ಇಲ್ಲ. ಆಮೇಲೆ ಎರಡ್ಮೂರು ಎಸ್ಪಿಗಳು ಬಂದ್ರೂ ಆರೋಪಿಗಳು ಮಾತ್ರ ಸಿಕ್ಲೇ ಇಲ್ಲ.

Mangaluru: ನಿರ್ಲಕ್ಷ್ಯದಿಂದ ರಸ್ತೆ ದಾಟಿದ್ದ ಮಹಿಳೆ ವಿರುದ್ಧ, ಹೀರೋ ಆಗಿದ್ದ ಬಸ್ ಚಾಲಕನ

ಆರೋಪಿಗಳನ್ನ ಬಂಧಿಸುವಂತೆ ಚಿಕ್ಕಮಗಳೂರು ನಗರದ ಗಾಂಧಿ ಪ್ರತಿಮೆ ಎದುರು ಕುಟುಂಬಸ್ಥರು ಉಪವಾಸನೂ ಕೂತಿದಾಯ್ತು. 2019ರಲ್ಲಿ ಪ್ರಕರಣವನ್ನ ಸಿಬಿಐ ಅಥವಾ ಎಸ್ಐಟಿಗೆ ವಹಿಸುವಂತೆ ಪಟ್ಟು ಹಿಡಿದಾಗ ಅನ್ವರ್ ಕೊಲೆ ಪ್ರಕರಣ ಸಿಐಡಿಗೆ ಹಸ್ತಾಂತರವಾಯ್ತು. ಇಷ್ಟಾದ್ರೂ ಪ್ರಕರಣದಲ್ಲಿ ಯಾವುದೇ ಮಹತ್ವದ ಬೆಳವಣಿಗೆಗಳು ನಡೆದಿಲ್ಲ, ಇದರಿಂದ ಕುಟುಂಬಸ್ಥರರು ಇದೀಗ ನೂತನ ಸರ್ಕಾರಕ್ಕೆ ಮನವಿಯನ್ನು ಮಾಡುತ್ತಿದ್ದಾರೆ. ಕಾಫಿನಾಡನ್ನ ಬೆಚ್ಚಿಬೀಳಿಸಿದ ಕೊಲೆಗೆ ಬರೋಬ್ಬರಿ 5 ವರ್ಷ 1 ತಿಂಗಳಾಯ್ತು. ಪ್ರಕರಣ ಭೇದಿಸೋ ವಿಫಲವಾಗಿರುವ ಹಿನ್ನಲೆಯಲ್ಲಿ ತಾಳ್ಮೆ ಕಳೆದುಕೊಂಡರು ಕುಟುಂಬಸ್ಥರು ದಯಾಮರಣಕ್ಕೂ ಸಿದ್ದರಾಗಿದ್ದಾರೆ.

ಪದೇ ಪದೇ ವರ್ಗಾವಣೆ : 
ಪ್ರಕರಣದ ತನಿಖಾಧಿಕಾರಿಗಳನ್ನು ಪದೇಪದೇ ವರ್ಗಾವಣೆ ಮಾಡುತ್ತಿರುವುದರಿಂದ ತನಿಖೆ ವಿಳಂಬವಾಗುತ್ತಿದೆ ಎಂದರು. ಹಿಂದೆ ನಮ್ಮದೇ ಸರಕಾರ ಅಧಿಕಾರದಲ್ಲಿತ್ತು. ಈ ವೇಳೆ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರಿಂದಾಗಿ ಪ್ರಕರಣದ ತನಿಖೆಯನ್ನು ಸರಕಾರ ಸಿಐಡಿಗೆ ಒಪ್ಪಿಸಿದೆ. ಆದರೂ ನಮ್ಮದೇ ಸರಕಾರ ಇದ್ದರೂ ಪ್ರಕರಣದ ತನಿಖೆ ಸಮರ್ಪಕವಾಗಿ ನಡೆಯದಿರುವುದರ ಬಗ್ಗೆ ಬೇಸರವಿದೆ.

ಗುಂಡ್ಯ: ಚಿನ್ನದಂಗಡಿ ಶುಭಾರಂಭದ ದಿನವೇ ಮಾಲೀಕ ಶವವಾಗಿ ಪತ್ತೆ!

ಈ ಪ್ರಕರಣ ಸಂಬಂಧ ಕ್ಷೇತ್ರದ ಸಂಸದೆ ಶೋಭಾ ಅವರಿಗೆ ಎರಡು ಬಾರಿ ಮನವಿ ನೀಡಿದ್ದೇವೆ, ಆದರೆ ಅವರು ನಿರ್ಲಕ್ಷ್ಯವಹಿಸಿದ್ದಾರೆ. ಹಿಂದಿನ ಬಿಜೆಪಿ ಸರಕಾರದಿಂದಲೂ ನಮಗೆ ಸಿಕ್ಕಿಲ್ಲ ಎಂದು ಆರೋಪಿಸಿದರು. ಈ ಹಿಂದೆ ತನಿಖಾಧಿಕಾರಿಗಳು, ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ, ತನಿಖೆ ಶೇ.90ರಷ್ಟು ಪೂರ್ಣಗೊಂಡಿದೆ ಎಂದು ಹೇಳುತ್ತಿದ್ದರು. ಆದರೆ 5 ವರ್ಷ ಕಳೆದರೂ ತನಿಖೆ ಪೂರ್ಣಗೊಳ್ಳದಿರುವುದರ ಬಗ್ಗೆ ರಾಜಕೀಯ ಒತ್ತಡ ಇರುವ ಶಂಕೆ ಎಂದು ಆರೋಪಿಸಿದ್ದಾರೆ.

ತನಿಖಾಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲೇ ಅವರನ್ನು ವರ್ಗಾವಣೆ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ ಪೊಲೀಸ್ ಇಲಾಖೆ ಕೂಡಲೇ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವ ಮೂಲಕ ನಮಗೆ ನ್ಯಾಯ ನೀಡಬೇಕು. ಇಲ್ಲವೇ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳು ನಮ್ಮ ಇಡೀ ಕುಟುಂಬಕ್ಕೆ ದಯಾಮರಣ ಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios