ಬೆತ್ತಲೆಯಾಗಿ ಸೂರ್ಯನಿಗೆ ಮೈಯೊಡ್ಡಿದ್ದ ಮಾಡೆಲ್.. ಮಾಡಬಾರದ್ದ ಮಾಡಿದ ಪೇದೆ!

By Suvarna News  |  First Published Dec 9, 2020, 9:19 PM IST

ಬೆತ್ತಲೆ ಸನ್ ಬಾತ್ ಮಾಡುತ್ತಿದ್ದ ಮಾಡೆಲ್/ ಹೆಲಿಕಾಪ್ಟರ್ ಬಳಸಿ ವಿಡಿಯೋ ಮಾಡಿದ ಪೊಲೀಸ್ ಪೇದೆ/ ಮಾಡೆಲ್ ರಿಂದ ಮಾನನಷ್ಟ ಮೊಕದ್ದಮೆ/ ಇಂಗ್ಲೆಂಡಿನ ಸುದ್ದಿ ದೊಡ್ಡ ಮಟ್ಟದ ಚರ್ಚೆ


ಲಂಡನ್(ಡಿ. 09) ಇದೊಂದು ವಿಚಿತ್ರ ರೀತಿಯ ಪ್ರಕರಣ. ಇಂಗ್ಲೆಂಡಿನ ಮಾಡೆಲ್ ಮಾಡಿರುವ ಆರೋಪ ದೊಡ್ಡ ಮಟ್ಟದ ಸುದ್ದಿ ಮಾಡುತ್ತಿದೆ.

ನನ್ನ ತೋಟದಲ್ಲಿ ನಾನು ಬೆತ್ತಲೆಯಾಗಿ ಸನ್ ಬಾತ್ ಮಾಡುತ್ತಿದ್ದಾಗ ಪೇದೆಯೊಬ್ಬ ಹೆಲಿಕಾಪ್ಟರ್ ಬಳಸಿ ವಿಡಿಯೋ ಮಾಡಿದ್ದಾನೆ ಎಂದು ಮಾಡೆಲ್ ಟ್ರೇಸಿ ಡಿಕ್ಸನ್ ದೂರು ನೀಡಿದ್ದಾರೆ.

Tap to resize

Latest Videos

undefined

ಇಂಗ್ಲೆಂಡಿನ ಯಾರ್ಕ್ ಷೈರ್ ವಾಸಿ ಮಾಡೆಲ್ ತಮ್ಮ ತೋಟದಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿದ್ದರಂತೆ.   ಈ ವೇಳೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಪೇದೆ ಅತ್ಯಾಧುನಿಕ ಕ್ಯಾಮರಾ ಬಳಸಿ ಶೂಟ್ ಮಾಡಿದ್ದಾನೆ. ನನ್ನ ಜತೆ ವಿದ್ಯಾಭ್ಯಾಸ ಮಾಡುತ್ತಿದ್ದು ಈಗ ಪೊಲೀಸ್ ಹುದ್ದೆಯಲ್ಲಿರುವ ಆಡ್ರಿಯನ್ ಪೊಗ್ಮೋರ್ ಈ ಕೆಲಸ ಮಾಡಿದ್ದಾನೆ ಎಂದು ಮಾಡೆಲ್ ಆರೋಪಿಸಿದ್ದಾರೆ. ಜತೆಗೆ ಎರಡು ಕೋಟಿ ರೂ. ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾಳೆ.

ಸಿನಿಮಾಕ್ಕಾಗಿ ಪೂರ್ಣ ಬೆತ್ತಲಾದ ನಟಿಮಣಿಯರು

ಸಹಪಾಠಿಯಾಗಿದ್ದುಕೊಂಡು ಎಷ್ಟು ವರ್ಷದಿಂದ ನನ್ನನ್ನು ಹಿಂಬಾಲಿಸುತ್ತಿದ್ದನೋ ಗೊತ್ತಿಲ್ಲ.  ಕಳ್ಳರನ್ನು ಹಿಡಿಯಲು ಸರ್ಕಾರ ಕೊಟ್ಟ ಸೌಲಭ್ಯವನ್ನು ತನ್ನ ಮೋಜಿಗೆ ಬಳಸಿದ್ದಾನೆ ಎಂದು ಮಾಡೆಲ್ ಹೇಳಿದ್ದಾರೆ. ವಿಚಾರಣೆ ವೇಳೆ ಪೇದೆ ತಾನು  ವಿಡಿಯೋ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. 

 

click me!