
ಚಿಕ್ಕಬಳ್ಳಾಪುರ (ಮೇ.10): ಮ್ಯಾಟ್ರಿಮನಿಯಲ್ಲಿ ವಿಚ್ಚೇದಿತ ಮತ್ತು ವಿಧವೆ ಮಹಿಳೆಯರಿಗೆ ಮದುವೆ ಆಸೆ ತೋರಿಸಿ ಲಕ್ಷ ಲಕ್ಷ ಎಗರಿಸಿ ಕೊನೆಗೂ ಮದುವೆಯೂ ಆಗದೆ ಕೈಕೊಟ್ಟು ವಿಧವೆಯನ್ನ ದಿಕ್ಕು ತಪ್ಪಿಸಿದ ಆಸಾಮಿಯನ್ನ ಪೊಲೀಸರು ಹಡೆಮುರಿ ಕಟ್ಟಿ ಎಳೆದು ತಂದಿದ್ದಾರೆ. ಬಂಧಿತ ವ್ಯಕ್ತಿಯನ್ನು ಇ.ಸುರೇಶ್ ನಾಯ್ಡು ಬಿನ್ ಯತಿರಾಜುಲು (61) ಎಂದು ತಿಳಿದು ಬಂದಿದೆ.
ನಗರದ ಮಹಿಳೆಯೊಬ್ಬರು ಡೈವೊರ್ಸಿ ಮಾಟ್ರಿಮನಿ ಎಂಬ ಆಪ್ ಇನ್ ಸ್ಟಾಲ್ ಮಾಡಿಕೊಂಡು ತಮ್ಮ ಡಿಟೈಲ್ ಅಪ್ ಲೋಡ್ ಮಾಡಿದ ವಿವರಗಳನ್ನ ಪಡೆದು ಅಲ್ಲಿದ್ದ ಮೊಬೈಲ್ ನಂಬರ್ ಸಂಗ್ರಹಿಸಿದ ಇ.ಸುರೇಶ್ ನಾಯ್ಡು ಬಿನ್ ಯತಿರಾಜುಲು ಎಂಬ ಸುಮಾರು 61 ವರ್ಷದ ವ್ಯಕ್ತಿ ತಾನು ಬೆಂಗಳೂರು ನಿವಾಸಿ ನಾನು ಹೆಂಡತಿಯನ್ನು ಕಳೆದುಕೊಂಡು ತಾನು ವಿಚ್ಛೇದಿತನಾಗಿದ್ದು, ನೀವು ಸಹ ವಿಧವೆಯಾಗಿರುವುದರಿಂದ ನಿಮ್ಮನ್ನು ಮದುವೆಯಾಗಿ ಹೊಸ ಜೀವನ ನೀಡುತ್ತೇನೆಂದು ನಂಬಿಸಿ, ನಂತರದಲ್ಲಿ ಸೈಟ್ ಖರೀದಿಸಲು ಹಣ ಬೇಕಾಗಿರುತ್ತೆಂದು ಆಕೆಯ ಕಡೆಯಿಂದ ಆಗಾಗ ಒಟ್ಟು 2,80,000 ರೂಗಳನ್ನು ಹಣ ಪಡೆದು ನಂತರ ಮದುವೆ ಪ್ರಸ್ಥಾಪವನ್ನೆ ಮಾಡದೆ ಸುಮ್ಮನಾಗಿಬಿಟ್ಟಿದನು.
ಇನ್ನು ಆತನಿಗೆ ಹಣ ನೀಡಿದ್ದ ವಿಧವೆ ತನ್ನ ಮಗಳ ಕಾಲೇಜು ಪೀಸ್ ಕಟ್ಟಲು ಹಣ ವಾಪಸ್ ಕೇಳಿದಕ್ಕೆ ಆರೋಪಿಯು ನಿನಗೆ ಯಾವುದೇ ಹಣ ವಾಪಸ್ಸು ನೀಡುವುದಿಲ್ಲ ಹಾಗೂ ನಿನ್ನನ್ನು ಮದುವೆಯೂ ಸಹ ಆಗುವುದಿಲ್ಲವೆಂದು ಕೈ ಕೊಟ್ಟಿದ್ದಾನೆ. ತನಗೆ ನಂಬಿಸಿ ಮೋಸ ಮಾಡಿರುವ ಸುರೇಶ್ ನಾಯ್ಡು ವಿರುದ್ಧ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಹುಡುಕಾಟ ಪ್ರಾರಂಭಿಸಿದ ಚಿಕ್ಕಬಳ್ಳಾಪುರ ಪೊಲೀಸರು ಬೆಂಗಳೂರಿನ ಬ್ರಿಗೇಡ್ ಲೇಕ್ ಪ್ರಂಟ್ ಅಪಾರ್ಟ್ ಮೆಂಟ್, ಮಹಾದೇವಪುನಿ, ಬೆಂಗಳೂರು ನಗರದಲ್ಲಿ ಬಂಧಿಸಿದ್ದು
ಜಾತಿಗಣತಿ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆಗೆ ನಿರ್ಧಾರ
ವಿಚಾರಣೆ ನಡೆಸಿದಾಗ ಈತನು ಚಿಕ್ಕಬಳ್ಳಾಪುರದ ಒಬ್ಬಕೆಗೆ ಮಾತ್ರವಲ್ಲ, ತಮಿಳುನಾಡು ಮೂಲದ ಮಲೇಷ್ಯಾ ದೇಶದ ಕೊಲಾಲಂಪುರ ನಗರದಲ್ಲಿ ವಾಸವಾಗಿರುವ ಮಹಿಳೆಯೊಬ್ಬರಿಗೆ, ಬೆಂಗಳೂರಿನ ಯಶವಂತಪುರ ನಗರದಲ್ಲಿ ವಾಸವಾಗಿರುವ ಮಹಿಳೆಯೊಬ್ಬರಿಗೂ ಇದೆ ರೀತಿ ಮೋಸ ಮಾಡಿರುವುದಾಗಿ ತಿಳಿದು ಬಂದಿದೆ ಚಿಕ್ಕಬಳ್ಳಾಪುರ ಸಿಇಎನ್ ಡಿವೈ ಎಸ್ ಪಿ ರವಿಕುಮಾರ್ ನೇತೃತ್ವದಲ್ಲಿ ಅಪರಾದ ತಂಡ ರಚಿಸಿಕೊಂಡು ಸುರೇಶ್ ನಾಯ್ಡುರನ್ನು ದಸ್ತಗಿರಿ ಮಾಡಿ, ಆತನಿಂದ ರೆಡ್ ಮಿ ಮೊಬೈಲ್ ನ್ನ ವಶಪಡಿಸಿಕೊಂಡು, ಚಿಕ್ಕಬಳ್ಳಾಪುರ ಕ್ಕೆ ಎಳೆದು ತಂದಿದ್ದು, ಆಸಾಮಿಯನ್ನ ಜೈಲಿಗೆ ಕಳಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ