ಕುಡಿದ ಮತ್ತಲ್ಲಿ ಕಾರು ಚಾಲನೆ; ಹಿಟ್ ಅಂಡ್ ರನ್‌ಗೆ ಡೆಲಿವರಿ ಬಾಯ್ ದುರ್ಮರಣ!

Published : Jun 19, 2023, 10:02 AM ISTUpdated : Jun 19, 2023, 12:07 PM IST
ಕುಡಿದ ಮತ್ತಲ್ಲಿ ಕಾರು ಚಾಲನೆ; ಹಿಟ್ ಅಂಡ್ ರನ್‌ಗೆ ಡೆಲಿವರಿ ಬಾಯ್ ದುರ್ಮರಣ!

ಸಾರಾಂಶ

ನಗರದಲ್ಲಿ ಹಿಟ್ ಅಂಡ್ ರನ್‌ಗೆ ಮತ್ತೊಂದು ಜೀವ ಬಲಿಯಾಗಿರುವ ಘಟನೆ ಮೈಸೂರು ರಸ್ತೆಯ ನಾಯಂಡಹಳ್ಳಿ ಸಮೀಪದ ವಿಶ್ವಪ್ರಿಯ ಅಪಾರ್ಟ್‌ಮೆಂಟ್ ಮುಂಭಾಗ ನಡೆದಿದೆ.

ಬೆಂಗಳೂರು (ಜೂ.19) ನಗರದಲ್ಲಿ ಹಿಟ್ ಅಂಡ್ ರನ್‌ಗೆ ಮತ್ತೊಂದು ಜೀವ ಬಲಿಯಾಗಿರುವ ಘಟನೆ ಮೈಸೂರು ರಸ್ತೆಯ ನಾಯಂಡಹಳ್ಳಿ ಸಮೀಪದ ವಿಶ್ವಪ್ರಿಯ ಅಪಾರ್ಟ್‌ಮೆಂಟ್ ಮುಂಭಾಗ ನಡೆದಿದೆ.

ಹೆಚ್‌ಡಿ ಕೋಟೆ  ಮೂಲದ ಪ್ರಸನ್ನಕುಮಾರ ಮೃತ ದುರ್ದೈವಿ. ಅಂಜನಾನಗರದ ಸ್ವಾತಿ ರೆಸ್ಟೋರೆಂಟ್ ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ಪ್ರಸನ್ನ ಕುಮಾರ್. 

ಇನ್ನು ಆರೋಪಿ ವಿನಾಯಕ ವಿಜಯನಗರ ನಿವಾಸಿಯಾಗಿದ್ದು, ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯುಟಿವ್ ಆಗಿದ್ದ. ಕಂಪನಿಯಲ್ಲಿ ವರ್ಕ್ ಶಾಪ್ ಮುಗಿದ ಬಳಿಕ ಇನ್ಸೆಂಟೀವ್ ನೀಡಲಾಗಿತ್ತು. ಅದೇ ಹಣದಿಂದ ವೀಕೆಂಡ್ ಅಂತಾ ಗೆಳೆಯರೊಂದಿಗೆ ರಾತ್ರಿ ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದಿದ್ದ ಆರೋಪಿ.

ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ : ಬೈಕ್ ಸವಾರನನ್ನು ಬಲಿ ಪಡೆದ ಲಾರಿ!

 ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿದ್ದಾನೆ. ಸ್ನೇಹಿತ ಸಾಗರ್ ಹಾಗೂ ಮೂವರು ಯುವತಿಯರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಚಾಲಕ ವಿನಾಯಕ್.  ರಾತ್ರಿ 1.45 ರ ಸುಮಾರಿಗೆ ಸ್ನೇಹಿತ ಸಾಗರನನ್ನ ಡ್ರಾಪ್ ಮಾಡಲು ಹೋಗುತ್ತಿದ್ದ ವೇಳೆ ನಡೆದಿರುವ ಅಪಘಾತ. ಕಾರಿನ ಮುಂದೆ ಹೋಗ್ತಿದ್ದ ಪ್ರಸನ್ನ ಕುಮಾರ್ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ.  ಡಿಕ್ಕಿ ರಭಸಕ್ಕೆ ಸುಮಾರು 50 ಮೀಟರ್ ಹಾರಿ ಬಿದ್ದಿದ್ದ ಪ್ರಸನ್ನ ಕುಮಾರ್. ಬೈಕ್  ಸಹ ರಸ್ತೆಯಲ್ಲೆ ಉಜ್ಜಿಕೊಂಡು ಹೋಗಿದ್ದ ಕಾರು. ಬೈಕ್‌ ಡಿಕ್ಕಿ ಹೊಡೆದರೂ ಸೌಜನ್ಯಕ್ಕೂ ಕಾರು ನಿಲ್ಲಿಸದೇ ಕಾರಿನೊಂದಿಗೆ ಎಸ್ಕೇಪ್ ಆಗಿದ್ದ ವಿನಾಯಕ. ಅಪಘಾತ ಮಾಡಿ ಕಾರು ನಿಲ್ಲಿಸದೇ ಹೋಗ್ತಿದ್ದನ್ನ ಕಂಡು ಕಾರು ಬೆನ್ನತ್ತಿ ಕಾರು ಅಡ್ಡಗಟ್ಟಿದ ಸಾರ್ವಜನಿಕರು. ಅಪಘಾತ ಪ್ರತ್ಯಕ್ಷ ನೋಡಿದ ಸಾರ್ವಜನಿಕರು ಆಕ್ರೋಶಗೊಂಡು ಆರೋಪಿ ವಿನಾಯಕನನ್ನು  ಕಾರಿನಿಂದ ಹೊರಗೆಳೆದು ಹಲ್ಲೆ ಮಾಡಲು ಮುಂದಾಗಿದ್ದಾರೆ. ಕಾರು ಜಖಂಗೊಳಿಸಿದ್ದಾರೆ. 

ಸದ್ಯ ಕಾರು ಚಾಲಕ ವಿನಾಯಕ್ ನನ್ನ ವಶಕ್ಕೆ ಪಡೆದಿರೋ ಬ್ಯಾಟರಾಯನಪುರ ಸಂಚಾರಿ ಪೊಲೀಸ್ರು ತನಿಖೆ ವೇಳೆ ವಿನಾಯಕ್ ಕುಡಿದು ಕಾರು ಚಾಲನೆ ಮಾಡಿರೋದು ಧೃಡಪಟ್ಟಿದೆ.

ಹಿಟ್ ಅಂಡ್ ರನ್: ತುಳು ಸ್ಟ್ಯಾಂಡ್ ಅಪ್ ಕಾಮಿಡಿ ಯೂಟ್ಯೂಬರ್ ಬಂಧನ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ