Karnataka crimes: ದರೋಡೆಗೆ ಸಂಚು ಹಾಕಿದ್ದ ರೌಡಿ ಶೀಟರ್‌ನ ಐವರು ಸಹಚರರ ಸೆರೆ

Published : Jun 19, 2023, 07:53 AM IST
Karnataka crimes: ದರೋಡೆಗೆ ಸಂಚು ಹಾಕಿದ್ದ ರೌಡಿ ಶೀಟರ್‌ನ ಐವರು ಸಹಚರರ ಸೆರೆ

ಸಾರಾಂಶ

ಮಾರಕಾಸ್ತ್ರಗಳೊಂದಿಗೆ ಸಾರ್ವಜನಿಕರ ಸುಲಿಗೆ ಮಾಡಲು ಹೊಂಚು ಹಾಕಿ ಕುಳಿತಿದ್ದ ಐವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಜೂ.19) ಮಾರಕಾಸ್ತ್ರಗಳೊಂದಿಗೆ ಸಾರ್ವಜನಿಕರ ಸುಲಿಗೆ ಮಾಡಲು ಹೊಂಚು ಹಾಕಿ ಕುಳಿತಿದ್ದ ಐವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಈ ಐವರು ಆರೋಪಿಗಳು ಕುಖ್ಯಾತ ರೌಡಿ ಶೀಟರ್‌ ಮಹೇಶ್‌(Rowdy sheeter mahesh) ಅಲಿಯಾಸ್‌ ಸಿದ್ದಾಪುರ ಮಹೇಶ್‌ನ ಸಹಚರರಾಗಿದ್ದಾರೆ. ಬಂಧಿತರಿಂದ ಫಾರ್ಚೂನರ್‌ ಕಾರು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಶನಿವಾರ ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಪಕ್ಕದ ಬಿಟಿಎಸ್‌ ಸರ್ವಿಸ್‌ ರಸ್ತೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರ ಸುಲಿಗೆ ಮಾಡಲು ಹೊಂಚು ಹಾಕಿ ಕುಳಿತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ರೌಡಿಯ ಮಚ್ಚಿನ ಹಿಡಿಕೆ ಏಟಿಗೆ ವ್ಯಕ್ತಿ ಸಾವು

ಆರೋಪಿಗಳು ಕಳೆದ ವರ್ಷ ಬನಶಂಕರಿ ಮೆಟ್ರೋ ರೈಲು ನಿಲ್ದಾಣದ ಬಳಿ ರೌಡಿ ಶೀಟರ್‌ ಮದನ್‌ ಅಲಿಯಾಸ್‌ ಪಿಟೀಲ್‌ ಎಂಬಾತನನ್ನು ಕೊಲೆ ಮಾಡಿದ್ದ ರೌಡಿ ಶೀಟರ್‌ ಸಿದ್ದಾಪುರ ಮಹೇಶ್‌ನ ಸಹಚರರಾಗಿದ್ದಾರೆ. ಆರೋಪಿಗಳು ಸಾರ್ವಜನಿಕರ ಸುಲಿಗೆ ಮಾಡುವ ಜತೆಗೆ ಸಿದ್ದಾಪುರ ಮಹೇಶ ಎದುರಾಳಿ ಗುಂಪಿನ ವಿಲ್ಸನ್‌ ಗಾರ್ಡನ್‌ ನಾಗ ಅಥವಾ ಆತನ ಸಹಚರರು ಸಿಕ್ಕರೆ ಅವರ ಮೇಲೆ ದಾಳಿ ಮಾಡುವ ಉದ್ದೇಶ ಹೊಂದಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್‌ ವೇಷಧರಿಸಿ ವಸೂಲಿ ಮಾಡುತ್ತಿದ್ದವನ ಬಂಧನ

ಕೊಪ್ಪಳ (ಜೂ.19) : ಪೊಲೀಸ್‌ ವೇಷ ಧರಿಸಿ ಹಣ ವಸೂಲಿ ಮಾಡುತ್ತಿದ್ದ ಓರ್ವನನ್ನು ಕೊಪ್ಪಳ ಪೊಲೀಸಲು ಬಂಧಿಸಿದ್ದಾರೆ. ಬಂಧಿತನನ್ನು ಗದಗ ಜಿಲ್ಲೆಯ ಗಂಗಾಪುರ ಗ್ರಾಮದ ನಿವಾಸಿ ಸಂಜಯ ಎಂದು ಗುರುತಿಸಲಾಗಿದೆ.

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳ ಮನೆ ಮೇಲೆ ಪೊಲೀಸರ ದಾಳಿ: ಮಾರಕಾಸ್ತ್ರ ಪತ್ತೆ

ರಾಷ್ಟ್ರೀಯ ಹೆದ್ದಾರಿ 67ರಲ್ಲಿ ನಿಂತಿರುತ್ತಿದ್ದ ಈತ ರಸ್ತೆಯಲ್ಲಿ ಬೈಕ್‌ನಲ್ಲಿ ಸಂಚಾರ ಮಾಡುವವರನ್ನು ತಡೆದು, ವಿಚಾರಣೆ ನಡೆಸುತ್ತಿದ್ದ. ಅವರು ಭಯಗೊಂಡಂತೆ ಕಂಡರೆ ಅವರಿಂದ ಹಣ ಕೀಳುತ್ತಿದ್ದ. ಬೋಚನಳ್ಳಿ ಗ್ರಾಮದ ಹನುಮೇಶ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ನಿಲ್ಲಿಸಿ, ವಿಚಾರಣೆ ಮಾಡಿದ್ದಾನೆ. ಇಲ್ಲಿ ಗಂಧದ ಕಟ್ಟಿಗೆ ಕಳ್ಳತನವಾಗಿದೆ.ನಾನು ಅರಣ್ಯ ಇಲಾಖೆಯ ಸಿಬ್ಬಂದಿ. ಸಾಹೇಬರ ಬಳಿ ಬನ್ನಿ ಎಂದು ಕರೆದುಕೊಂಡು ಹೋಗಿ, ಮಾರ್ಗಮಧ್ಯದಲ್ಲಿ .49 ಸಾವಿರ ನಗದು ಹಾಗೂ 2 ಬಂಗಾರದ ಉಂಗುರ ದೋಚಿದ್ದಾರೆ ಎನ್ನಲಾಗಿದೆ. ಹನುಮೇಶ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು. ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು