
ಅಲ್ವಾರ್ (ಮಾ. 24) ಮಹಿಳೆಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸಿದ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಪ್ರಕರಣ ದಾಖಲಾಗಿದೆ.
ಕಂಠಪೂರ್ತಿ ಮದ್ಯ ಕುಡಿದಿದ್ದ ಪೊಲೀಸ್ ಮಹಿಳೆ ಮನೆಗೆ ನುಗ್ಗಿದ್ದಾಬೆ. ಭಿವಾಡಿಯಲ್ಲಿಕೆಲಸ ಮಾಡುತ್ತಿದ್ದ ಕಾನ್ಸ್ಟೇಬಲ್ ಮಹಿಳೆಗೆ ಕಿರುಕುಳ ನೀಡಿದ್ದಾನೆ. ಪೊಲೀಸ್ ಕಾನ್ಸ್ಟೇಬಲ್ ನನ್ನು ಕೆಲಸದಿಂದ ಅಮಾನತು ಮಾಡಲಾಗಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಪಿ ನರೇಶ್ ಕುಮಾರ್ ಮಹಿಳೆ ಜತೆ ಸೇರಿ ನ್ಯೂರೋ ಸೆಂಟರ್ ಒಂದನ್ನು ಪಾರ್ಟನರ್ ಶಿಪ್ ನಲ್ಲಿ ಹೊಂದಿದ್ದ. ಸೋಮವಾರ ನ್ಯೂರೋ ಸೆಂಟರ್ ಗೆ ಆರೋಪಿ ಹೋಗಿದ್ದಾನೆ. ಮದ್ಯ ಸೇವನೆ ಮಾಡಿಕೊಂಡು ಅಲ್ಲಿಗೆ ಹೋಗಿದ್ದಕ್ಕೆ ಮಹಿಳೆ ಪ್ರಶ್ನೆ ಮಾಡಿದ್ದಾಳೆ.
ಗರ್ಲ್ ಫ್ರೆಂಢ್ ಜತೆ ಮಾತನಾಡಿದ್ದಕ್ಕೆ ಇದೆಂಥಾ ಶಿಕ್ಷೆ
ತನ್ನ ವಿಧವಾ ಸಹೋದರಿಯ ಸೆಂಟರ್ ನ್ನು ಮಹಿಳೆ ನೋಡಿಕೊಳ್ಳುತ್ತಿದ್ದಳು . ಮಹಿಳೆ ಬಳಿ ತನ್ನ ಶೇರ್ ವಾಪಸ್ ಕೊಡುವಂತೆ ತಗಾದೆ ತೆಗೆದಿದ್ದಾನೆ. ಇದಾದ ಮೇಲೆ ಸಂಜೆ ಮಹಿಳೆ ಮನೆಗೆ ದಾಳಿ ಮಾಡಿದ್ದಾನೆ. ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಬೆದರಿಕೆ ಹಾಕಿದ ಕಾರಣಕ್ಕೆ ಈಗ ಕೆಲಸ ಕಳೆದುಕೊಂಡಿದ್ದಾನೆ.
ಜಿಮ್ ತರಬೇತುದಾರನೊಬ್ಬ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಪ್ರಕರಣ ಪುಣೆಯ ಕೊಂಡ್ವಾ ಪ್ರದೇಶದಿಂದ ವರದಿಯಾಗಿತ್ತು. ಬಾಕ್ಸಿಂಗ್ ಕಲಿಸುವ ನೆಪದಲ್ಲಿ ಮೈಕೈ ಮುಟ್ಟಿದ್ದ ಆರೋಪಿ ಮೇಲೆ ಮಹಿಳೆ ದೂರು ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ