ಅಮ್ಮ ಬಹಳ ಕೆಟ್ಟವಳು ಎನ್ನುತ್ತಾ FIR ದಾಖಲಿಸಿದ 6ರ ಕಂದ!

Published : Mar 24, 2021, 05:28 PM IST
ಅಮ್ಮ ಬಹಳ ಕೆಟ್ಟವಳು ಎನ್ನುತ್ತಾ FIR ದಾಖಲಿಸಿದ 6ರ ಕಂದ!

ಸಾರಾಂಶ

ಅಮ್ಮನ ಕ್ರೌರ್ಯಕ್ಕೆ ನಲುಗಿದ ಕಂದ| ಹೆತ್ತವ್ವನ ವಿರುದ್ಧ ದೂರು| ಗಂಡನ ಕೋಪ ಕಂದನ ಮೇಲೆ

ಇಂಧೋರ್(ಮಾ.24):  ಮಧ್ಯಪ್ರದೇಶದ ಇಂಧೋರ್‌ನ ಆರು ವರ್ಷದ ಕಂದನ ಕತೆ ಯಾವತ್ತೂ ಜಗಳವಾಡುವ ದಂಪತಿ, ತಮ್ಮ ನಡತೆ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡಲಿದೆ. ಇಲ್ಲೊಂದು ಮಗು ತನ್ನ ತಾಯಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದೆ. ಈ ಪುಟ್ಟ ಕಂದ ತನ್ನ ದೂರಿನಲ್ಲಿ ತಂದೆ ತಾಯಿ ಯಾವತ್ತೂ ಜಗಳಬವಾಡುತ್ತಾರೆ. ಜಗಳದ ಬಳಿಕ ತನ್ನ ತಾಯಿ ತನಗೆ ಯಾವತ್ತೂ ಥಳಿಸುತ್ತಾರೆ ಎಂದು ದೂರಿದೆ.

ಗಂಡನ ಮೇಲಿನ ಕೋಪ ಮಗುವಿನ ಮೇಲೆ'

ಇಂಧೋರ್‌ನ ಮಕ್ಕಳ ಸಹಾಯವಾಣಿಗೆ ದೂರು ಬಂದ ಬಳಿಕ ಈ ಮಗುವನ್ನು ರಕ್ಷಿಸಲಾಗಿದೆ. ಈ ಮಗುವಿನ ದೇಹದಲ್ಲಿ ಗಂಭೀರ ಗಾಯಗಳು ಕಂಡು ಬಂದಿವೆ. ಪೊಲೀಸರು ಈ ಮಗುವನ್ನು ರಕ್ಷಿಸಲು ಹೋದ ಸಂದರ್ಭದಲ್ಲಿ ಅದು ಅಳುತ್ತಿತ್ತು. ಯಾಕೆಂದರೆ ಕೆಲ ಸಮಯದ ಮೊದಲು ಮಹಿಳೆ ಆ ಮಗುವಿಗೆ ಥಳಿಸಿದ್ದಳು. ಸದ್ಯ ಮಹಿಳೆ ವಿರುದ್ಧ ಮಕ್ಕಳ ಮೇಲಿನ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆಗೆ ಚಿನ್ನ ಪುಟ್ಟ ವಿಚಾರಗಳಿಗೆ ಸಿಕ್ಕಾಪಟ್ಟೆ ಕೋಪ ಬರುತ್ತಿತ್ತಂತೆ. ಹೀಗಾಗಿ ಆಕೆ ಗಂಡನ ಮೇಲಿನ ಕೋಪವನ್ನು ಮಗುವಿಗೆ ಥಳಿಸಿ ತೀರಿಸುತ್ತಿದ್ದಳು.

ಗಂಡ ಹೊರ ಹೋಗುತ್ತಿದ್ದಂತೆಯೇ ಮಗುವಿಗೆ ಥಳಿತ

ಸ್ಥಳಕ್ಕೆ ತಲುಪಿದ ಪೊಲೀಸರು ಮೊದಲು ತಾಯಿ ಹಾಗೂ ಮಗುವಿಗೆ ಅರ್ಥೈಸಲು ಯತ್ನಿಸಿದ್ದಾರೆ. ಆದರೆ  ಆ ಮಹಿಳೆ ಏನೂ ಕೇಳಲು ಸಿದ್ಧವಿರಲಿಲ್ಲ. ಹೀಗಾಗಿ ದೂರು ದಾಖಲಿಸಿಕೊಂಡ ಪೊಲೀಸರು ಮಗುವನ್ನು ಆಶ್ರಮಕ್ಕೆ ಸೇರಿಸಿದ್ದಾರೆ. ಮಗುವಿಗೆ ಚಿಕಿತ್ಸೆ ನಿಡಿದ ಬಳಿಕ ಕೌನ್ಸೆಲಿಂಗ್ ನಡೆಸಲಾಗಿದೆ. ಈ ವೇಳೆ ಆ ಕಂದ ನಡೆದೆಲ್ಲಾ ವಿಚಾರ ಬಾಯ್ಬಿಟ್ಟಿದ್ದಾರೆ.

ಇನ್ನು ಗಂಡ ತನ್ನ ಹೆಮಡತಿ ವರ್ತನೆ ಬಗ್ಗೆ ತಿಳಿಸಿದ್ದಾನೆ. ತಾನು ಎಂಟು ವರ್ಷದ ಹಿಂದೆ ಪ್ರಯಾಳನ್ನು ಮಗುವೆಯಾಗಿದ್ದೆ. ಆಕೆ ಹಣ ಸಿಕ್ಕಾಪಟ್ಟೆ ಖರ್ಚು ಮಾಡುತ್ತಾಳೆ. ಆದರೆ ನಾವು ಮಧ್ಯಮ ವರ್ಗದವರು. ಹಣವನ್ನು ಯೋಚಿಸಿ ವ್ಯಯಿಸುತ್ತೇವೆ. ಹೀಗಿರುವಾಗ ಈ ವಿಚಾರವಾಗೇ ಜಗಳವಾಗುತ್ತಿತ್ತು. ನಾನು ಆಕೆಗೆ ಹಲವಾರು ಬಾರಿ ಅರ್ಥೈಸಿದೆ ಆದರೆ ಆಕೆ ಅರ್ಥ ಮಾಡಿಕೊಳ್ಳುತ್ತಿರಲಿಲ್ಲ ಎಂದಿದ್ದಾನೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!