ಡ್ರಗ್ಸ್ ಮಾಫಿಯಾ, 24 ಗಣ್ಯರ ಹೆಸರು ಬಾಯ್ಬಿಟ್ಟ ಸಂಜನಾ!

By Suvarna News  |  First Published Sep 9, 2020, 7:21 AM IST

24 ಗಣ್ಯರ ಹೆಸರು ಬಾಯ್ಬಿಟ್ಟ ಸಂಜನಾ| ನಾನೊಬ್ಬಳೇ ಅಲ್ಲ, ಚಿತ್ರರಂಗ ಇನ್ನೂ ಅನೇಕರು ಡ್ರಗ್ಸ್‌ ಸೇವಿಸ್ತಾರೆ| ಸಿಸಿಬಿ ಬಳಿ ಚಿತ್ರನಟಿ ತಪ್ಪೊಪ್ಪಿಗೆ| ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಪಬ್‌, ಕ್ಲಬ್‌, ಹೋಟೆಲ್‌ಗಳಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ಆಹ್ವಾನ ಬರುತ್ತಿತ್ತು


ಬೆಂಗಳೂರು(ಸೆ.09): ‘ನಾನು ಡ್ರಗ್ಸ್‌ ಸೇವಿಸುತ್ತೇನೆ. ನಾನೊಬ್ಬಳೇ ಅಲ್ಲ ಕನ್ನಡ ಚಲನಚಿತ್ರ ರಂಗದ ಕೆಲವು ನಟಿಯರು ವ್ಯಸನಿಗಳು. ನಾನು ತಪ್ಪು ಮಾಡಿದ್ದೇನೆ’ ಎಂದು ನಟಿ ಸಂಜನಾ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.

"

Tap to resize

Latest Videos

undefined

ಮಾದಕ ವಸ್ತು ಜಾಲ ಪ್ರಕರಣ ಸಂಬಂಧ ಸೋಮವಾರ ಬೆಳಗ್ಗೆ ನಟಿ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ ಸಿಸಿಬಿ ಅಧಿಕಾರಿಗಳು, ಬಳಿಕ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆ ತಂದು ವಿಚಾರಣೆಗೊಳಪಡಿಸಿದರು. ಆ ವೇಳೆ ತಮ್ಮ ಡ್ರಗ್ಸ್‌ ವ್ಯಸನ, ಸ್ನೇಹಿತರು ಹಾಗೂ ಪಾರ್ಟಿಗಳ ಮೋಜು ಮಸ್ತಿ ಬಗ್ಗೆ ಸಂಜನಾ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

‘2006ರಲ್ಲಿ ‘ಗಂಡ ಹೆಂಡತಿ’ ಚಲನಚಿತ್ರದ ಮೂಲಕ ಕನ್ನಡ ಚಲನಚಿತ್ರ ರಂಗ ಪ್ರವೇಶಿಸಿದೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆ ಸೇರಿ ಸುಮಾರು 47 ಸಿನಿಮಾಗಳಲ್ಲಿ ನಟಿಸಿದ್ದೇನೆ. ದೊಡ್ಡ ನಟರ ಜತೆ ಮಿಂಚಿದ್ದೇನೆ. ನಾನೊಬ್ಬಳು ಪಂಚಭಾಷಾ ತಾರೆಯಾಗಿ ಖ್ಯಾತಿ ಪಡೆದಿದ್ದೇನೆ. ಕೆಲವರ ಸಹವಾಸದಿಂದ ಕೆಟ್ಟಹೆಸರು ಪಡೆಯುವಂತಾಗಿದೆ. ಜಾಹೀರಾತು ಕ್ಷೇತ್ರದಲ್ಲಿ ಸಹ ಗುರುತಿಸಿಕೊಂಡಿದ್ದು, ಹಲವು ಉತ್ಪನ್ನಗಳಿಗೆ ರೂಪದರ್ಶಿಯಾಗಿದ್ದೆ’ ಎಂದು ಸಂಜನಾ ಹೇಳಿರುವುದಾಗಿ ತಿಳಿದು ಬಂದಿದೆ.

ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಪಬ್‌, ಕ್ಲಬ್‌, ಹೋಟೆಲ್‌ಗಳಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ಆಹ್ವಾನ ಬರುತ್ತಿತ್ತು. ಈ ಪಾರ್ಟಿಯಲ್ಲಿ ನನಗೆ ರಾಹುಲ್‌, ವೀರೇನ್‌ ಖನ್ನಾ, ಫೃಥ್ವಿ ಶೆಟ್ಟಿಸೇರಿದಂತೆ ಹಲವರು ಪರಿಚಿತರಾದರು. ಶ್ರೀಲಂಕಾದ ಕ್ಯಾಸಿನೋಗೂ ಸಹ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೇನೆ. ನಾನೊಬ್ಬಳೇ ಮಾತ್ರವಲ್ಲ ಕನ್ನಡ ಚಲನಚಿತ್ರ ರಂಗದ ಹಲವು ಖ್ಯಾತನಾಮ ನಟರು ಕೂಡಾ ಕ್ಯಾಸಿನೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸರ್ಕಾರ ಸಮಾರಂಭಗಳಿಗೂ ಆಹ್ವಾನ ಬರುತ್ತಿತ್ತು ಎಂದು ಸಂಜನಾ ಹೇಳಿದ್ದಾರೆ ಎನ್ನಲಾಗಿದೆ.

ನನಗೆ ಗೊತ್ತಿರುವ 24 ಮಂದಿ ಡ್ರಗ್‌ ವ್ಯಸನಿಗಳು:

ನನಗೆ ರಾಜಕಾರಣಿಗಳು ಹಾಗೂ ಉದ್ಯಮಿಗಳು ಪರಿಚಿತರು. ಪಾರ್ಟಿಗಳಲ್ಲಿ ಮದ್ಯ ಸೇವನೆ ಸಹಜವಾಗಿತ್ತು. ಮೊದ ಮೊದಲು ನನಗೆ ಡ್ರಗ್ಸ್‌ ಚಟ ಇರಲಿಲ್ಲ. ರಾಹುಲ್‌ ಹಾಗೂ ಆತನ ಗೆಳೆಯರ ಸ್ನೇಹವಾದ ಬಳಿಕ ವ್ಯಸನ ಶುರುವಾಯಿತು. ಪಾರ್ಟಿಗಳ ಸಂಭ್ರಮದಲ್ಲಿ ನಾನು ಡ್ರಗ್ಸ್‌ ಸೇವಿಸಿದ್ದೇನೆ. ನನಗೆ ಗೊತ್ತಿರುವಂತೆ ಸುಮಾರು ನಟ-ನಟಿಯರು ಡ್ರಗ್ಸ್‌ ಸೇವಿಸುತ್ತಾರೆ. ಈ ಪಾರ್ಟಿಗಳಿಂದ ನನಗೆ ಡ್ರಗ್ಸ್‌ ಸೆಳೆತ ಪ್ರಾರಂಭವಾಯಿತು. ಮನೆಯಲ್ಲಿ ನಡೆದ ಪಾರ್ಟಿಗಳಿಗೆ ಡ್ರಗ್ಸ್‌ ಬಳಕೆಯಾಗಿದೆ ಎಂದು ಸಂಜನಾ ಹೇಳಿದ್ದಾರೆ ಎನ್ನಲಾಗಿದೆ.

ನನಗೆ ಪರಿಚಯ ಇರುವವರ ಪೈಕಿ 24 ಮಂದಿ ಡ್ರಗ್ಸ್‌ ವ್ಯಸನಿಗಳಿದ್ದಾರೆ. ನಾನು ರಾಹುಲ್‌, ವೀರೇನ್‌, ರಂಕಾ, ನಿಯಾಜ್‌ ಸೇರಿ ಕೆಲವರ ಸ್ನೇಹ ಮಾಡಿ ತಪ್ಪು ಮಾಡಿದೆ. ಬೆಂಗಳೂರು ಮಾತ್ರವಲ್ಲದೆ ವಿದೇಶಗಳಲ್ಲಿ ರಾಹುಲ್‌ ಹಾಗೂ ವೀರೇನ್‌ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ನಾನು ತಪ್ಪದೆ ಭಾಗವಹಿಸುತ್ತಿದ್ದೇನೆ. ನನಗೆ ಅವರು ಆತ್ಮೀಯ ಸ್ನೇಹಿತರು. ಈ ಗೆಳೆತನದಲ್ಲೇ ನಡೆದ ಸಂಭ್ರಮ ಕೂಟಗಳಲ್ಲಿ ಅರಿಯದೆ ಡ್ರಗ್ಸ್‌ ಸೇವಿಸಿದೆ ಎಂದು ಸಂಜನಾ ಗೋಳಾಡಿದ್ದಾಳೆ ಎನ್ನಲಾಗಿದೆ. ಅಲ್ಲದೆ, ಡ್ರಗ್‌ ವ್ಯಸನಿಗಳ ಪಟ್ಟಿಯನ್ನು ಸಹ ನೀಡಿದ್ದಾಳೆ ಎನ್ನಲಾಗಿದೆ.

click me!