ಡ್ರಗ್ಸ್ ಕೇಸ್‌; ಅನಿಕಾ ಸಂಪರ್ಕವಿದ್ದ ಮಾಜಿ ಗೃಹ ಸಚಿವರ ಪುತ್ರ  ಅರೆಸ್ಟ್

Published : Oct 29, 2020, 04:41 PM ISTUpdated : Oct 29, 2020, 04:42 PM IST
ಡ್ರಗ್ಸ್ ಕೇಸ್‌; ಅನಿಕಾ ಸಂಪರ್ಕವಿದ್ದ ಮಾಜಿ ಗೃಹ ಸಚಿವರ ಪುತ್ರ  ಅರೆಸ್ಟ್

ಸಾರಾಂಶ

ಡ್ರಗ್ಸ್ ಪ್ರಕರಣ/ ಕೇರಳದ ಮಾಜಿ ಗೃಹ ಸಚಿವ, ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ ಪುತ್ರ ಬಿನೀಶ್ ಕೊಡಿಯೇರಿ ಬಂಧನ/ ಬೆಂಗಳೂರಿನಲ್ಲಿ ಬಂಧಿಸಿ ವಿಚಾರಣೆ/  ಡ್ರಗ್ಸ್ ಪ್ರಕರಣದಲ್ಲಿ ಮೊದಲು ಬಂಧನಕ್ಕೊಳಗಾದ ಅನಿಕಾ ಡಿ ಜತೆ ಸಂಪರ್ಕದಲ್ಲಿದ್ದ

ಬೆಂಗಳೂರು( ಅ. 29) ಡ್ರಗ್ಸ್ ಪ್ರಕರಕಣ ಒಂದಾದ ಮೇಲೆ ಒಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಕೇರಳದ ಮಾಜಿ ಗೃಹ ಸಚಿವ, ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ ಪುತ್ರ ಬಿನೀಶ್ ಕೊಡಿಯೇರಿಯನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದು, ಸದ್ಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಕಸ್ಟಡಿಯಲ್ಲಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಅನಿಕಾ ಡಿ., ರವೀಂದ್ರನ್ ಆರ್. ಎ. ಜೊತೆ ಅನೂಪ್ ಜೊತೆ ಬಿನೀಶ್ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಆಧಾರದಲ್ಲಿ ಬಂಧನವಾಗಿದೆ. ಕಮ್ಮನಹಳ್ಳಿಯಲ್ಲಿ ಅನೂಪ್ ಆರಂಭಿಸಿದ್ದ ರೆಸ್ಟೋರೆಂಟ್ ಮೇಲೆ ಬಿನೀಶ್ 50 ಲಕ್ಷ ರೂ.  ಹೂಡಿಕೆ ಮಾಡಿದ್ದರು ಎಂಬುದು ಮತ್ತೊಂದು ಪ್ರಮುಖ ಅಂಶ.

ರಾಗಿಣಿ ಜತೆ ನಂಟು; ಭೀತಿಯಿಂದ ಜಾಮೀನು ಪಡೆದ ಕಾಂಗ್ರೆಸ್ ನಾಯಕ

ಸತತ ನಾಲ್ಕು ಗಂಟೆಗಳ ಕಾಲ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಆರೋಪಿ ಬಿನೀಶ್ ಕೊಡಿಯೇರಿಯನ್ನು ಸಿಟಿ ಸಿವಿಲ್ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ.

ಅನಿಕಾ ಡಿ. ಬಂಧನದ ನಂತರ ತೆರೆದುಕೊಂಡ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಅವರ  ಬಂಧನವಾಗಿದೆ.  ಉಳಿದ ಆರೋಪಿಗಳನ್ನು ಸಿಸಿಬಿ ವಿಚಾರಣೆ ನಡೆಸಿದೆ. ಇದೀಗ ಪ್ರಕರಣವನನ್ನು ಸಿಸಿಬಿ ಮತ್ತು ಎನ್ ಸಿಬಿ ವಿವಿಧ ಹಂತದಲ್ಲಿ ವಿಚಾರಣೆ ನಡೆಸುತ್ತಿದ್ದು ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ಸಹ ಮಧ್ಯ ಪ್ರವೇಶ ಮಾಡಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!