ಬೆಂಗ್ಳೂರಲ್ಲಿ ಜೋಡಿ ಕೊಲೆ: ನಗ್ನಸ್ಥಿತಿಯಲ್ಲಿ ಮೃತದೇಹ ಪತ್ತೆ

Kannadaprabha News   | Asianet News
Published : Apr 09, 2021, 08:20 AM ISTUpdated : Apr 09, 2021, 09:17 AM IST
ಬೆಂಗ್ಳೂರಲ್ಲಿ ಜೋಡಿ ಕೊಲೆ: ನಗ್ನಸ್ಥಿತಿಯಲ್ಲಿ ಮೃತದೇಹ ಪತ್ತೆ

ಸಾರಾಂಶ

ಪ್ರಾಧ್ಯಾಪಕರೊಬ್ಬರ ತಾಯಿ, ಅವರ ಸ್ನೇಹಿತ ಚಾಕುವಿನಿಂದ ಇರಿದು ಹತ್ಯೆ| ಮುಂಬಾಗಿಲ ಬೀಗ ಮುರಿದು ಮನೆ ಪ್ರವೇಶ| ಬೆಂಗಳೂರಿನ ಸಂತೃಪ್ತಿ ನಗರದಲ್ಲಿ ನಡೆದ ಘಟನೆ| ರಾತ್ರಿ ಏನೋ ಅನಾಚಾರ ನಡೆದು ಈ ಕೃತ್ಯ ಎಸಗಿರುವ ಸಾಧ್ಯತೆ| 

ಬೆಂಗಳೂರು(ಏ.09): ಜೆ.ಪಿ.ನಗರದ ಏಳನೇ ಹಂತದ ಸಮೀಪ ಮನೆಯೊಂದರಲ್ಲಿ ಖಾಸಗಿ ಕಾಲೇಜಿನ ಪ್ರಾಧ್ಯಾಪಕರೊಬ್ಬರ ತಾಯಿ ಹಾಗೂ ಅವರ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಂದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ಸಂತೃಪ್ತಿ ನಗರದ ನಿವಾಸಿಗಳಾದ ಮಮತಾ ಬಸು (73) ಹಾಗೂ ಅವರ ಪರಿಚಿತ ದೇವಬ್ರತಾ ಬೆಹೇರಾ (43) ಹತ್ಯೆಯಾದ ದುರ್ದೈವಿಗಳು. ಮನೆ ಮುಂಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿದ ದುಷ್ಕರ್ಮಿಗಳು, ಮೊದಲ ಮಹಡಿಯಲ್ಲಿ ಮಲಗಿದ್ದ ಮಮತಾರನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ. ಬಳಿಕ ಕೆಳ ಮಹಡಿಯಲ್ಲಿ ನಿದ್ರೆಗೆ ಜಾರಿದ್ದ ಬೆಹೇರಾ ಅವರನ್ನು ಹತ್ಯೆಗೈದು ಪರಾರಿಯಾಗಿದ್ದಾರೆ. ಮೃತರ ಮನೆಗೆ ಗುರುವಾರ ಬೆಳಗ್ಗೆ ಕೆಲಸದಾಳು ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯರಾತ್ರಿ ಮನೆಗೆ ನುಗ್ಗಿದವರು ಯಾರು?

ಪಶ್ಚಿಮ ಬಂಗಾಳ ಮೂಲದ ದೇವ ದೀಪ್‌ ಬಸು ಅವರು, ಖಾಸಗಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ತಮ್ಮ ಪತ್ನಿ ಮತ್ತು ಮಕ್ಕಳ ಜತೆ ಸಂತೃಪ್ತಿ ನಗರದಲ್ಲಿ ಅವರು ನೆಲೆಸಿದ್ದಾರೆ. ಕೌಟುಂಬಿಕ ಕಲಹ ಕಾರಣಕ್ಕೆ ಮೂರು ವರ್ಷಗಳಿಂದ ಬಸು ಅವರ ತಾಯಿ ಮಮತಾ ಪ್ರತ್ಯೇಕವಾಗಿ ವಾಸವಾಗಿದ್ದರು. ಪ್ರತಿ ದಿನ ತಾಯಿ ಮನೆಗೆ ಹೋಗಿ ಅವರು ಬರುತ್ತಿದ್ದರು. ಇತ್ತೀಚಿಗೆ ನಗರಕ್ಕೆ ಬಂದಿದ್ದ ಒಡಿಶಾ ಮೂಲದ ಗೆಳೆಯ ದೇವಬ್ರತಾ ಬೆಹೇರಾನನ್ನು ತಾಯಿ ಮನೆಯಲ್ಲೇ ವಾಸ್ತವ್ಯಕ್ಕೆ ಬಸು ವ್ಯವಸ್ಥೆ ಮಾಡಿದ್ದರು.

ಅನೈತಿಕ ಸಂಬಂಧಕ್ಕೆ ಅಡ್ಡಿ: ಹೆತ್ತ ಮಕ್ಕಳನ್ನೇ ಕೊಂದ ತಾಯಿಗೆ ಕಠಿಣ ಶಿಕ್ಷೆ

ತಾಯಿ ಮತ್ತು ಸ್ನೇಹಿತ ಜತೆ ಬುಧವಾರ ರಾತ್ರಿ 9.30ರವರೆಗೆ ಇದ್ದು ಬಸು ಮನೆಗೆ ಮರಳಿದ್ದರು. ಆನಂತರ ಮೊದಲ ಮಹಡಿಯಲ್ಲಿ ಮಮತಾ ಹಾಗೂ ಕೆಳ ಮಹಡಿಯ ಕೋಣೆಯಲ್ಲಿ ದೇವರಥ್‌ ಮಲಗಿದ್ದರು. ಮಧ್ಯರಾತ್ರಿ ಅವರ ಮನೆ ಬೀಗ ಮುರಿದು ಒಳ ಪ್ರವೇಶಿಸಿರುವ ದುಷ್ಕರ್ಮಿಗಳು, ಚಾಕುವಿನಿಂದ ಇರಿದು ಇಬ್ಬರನ್ನು ಹತ್ಯೆಗೈದು ಮನೆಯಲ್ಲಿದ್ದ ಒಡವೆ ಹಾಗೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಪ್ರತಿದಿನದಂತೆ ಬುಧವಾರ ಬೆಳಗ್ಗೆ 9 ಸುಮಾರಿಗೆ ಮನೆ ಕೆಲಸದಾಳು ಬಂದಿದ್ದಾಳೆ. ಮನೆ ಬಾಗಿಲು ಸ್ವಲ್ಪ ತೆರೆದಿದ್ದರಿಂದ ಒಳ ಪ್ರವೇಶಿಸಿದ ಕೆಲಸದಾಳು, ಮಮತಾ ಅವರನ್ನು ಕೂಗಿದ್ದಾಳೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೊನೆಗೆ ಮಮತಾ ಅವರ ಕೋಣೆಗೆ ಹೋದಾಗ ರಕ್ತದ ಮಡುವಿನಲ್ಲಿ ಮೃತದೇಹ ಕಂಡು ಆಕೆ ಕೂಗಿಕೊಂಡಿದ್ದಾಳೆ. ಈ ಚೀರಾಟ ಕೇಳಿದ ನೆರೆಹೊರೆಯವರು ಜಮಾಯಿಸಿದ್ದಾರೆ. ಬಳಿಕ ಮಾಹಿತಿ ಪಡೆದು ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು, ತಪಾಸಣೆ ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದ್ದಾರೆ. ಈ ಸಂಬಂಧ ಮೃತರ ಪುತ್ರ ನೀಡಿದ ದೂರಿನ ಮೇರೆಗೆ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆತ್ತಲೆಯಾಗಿ ಮಲಗಿದ್ದ ಬೆಹೇರಾ

ಮನೆಯಲ್ಲಿ ನಗ್ನಸ್ಥಿತಿಯಲ್ಲಿ ಬೆಹೇರಾ ಮೃತದೇಹ ಪತ್ತೆಯಾಗಿದೆ. ರಾತ್ರಿ ಸೆಕೆಗೆ ಆತ ಬಟ್ಟೆ ಕಳಚಿ ಬೆತ್ತಲೆಯಾಗಿ ಮಲಗಿದ್ದಾಗ ಹತ್ಯೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ನಗರದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಉದ್ಯೋಗ ಸಿಕ್ಕಿದ ಹಿನ್ನೆಲೆಯಲ್ಲಿ ಒಡಿಶಾದಿಂದ ಬೆಹೇರಾ ಬಂದಿದ್ದರು ಎನ್ನಲಾಗಿದೆ.

ಯುವಕನ ಬರ್ಬರ ಕೊಲೆ: ರೌಡಿಗಳ ಅಟ್ಟಹಾಸಕ್ಕೆ ನಲುಗಿದ ಕಲಬುರಗಿ..!

ಪರಿಚಿತರ ಕೈವಾಡ?

ವೃದ್ಧೆ ಮನೆಯಲ್ಲಿ ಏಕಾಂಗಿಯಾಗಿ ನೆಲೆಸಿದ್ದಾರೆ ಎಂದು ಅಂದಾಜಿಸಿ ದರೋಡೆಗೆ ಬಂದವರು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹತ್ಯೆ ಎಸಗಿದ ಬಳಿಕ ಮನೆಯ ಡಿವಿಆರ್‌ ಅನ್ನು ಸಹ ದೋಚಿದ್ದಾರೆ. ಮನೆಯಲ್ಲಿ ಹಣ, ಲ್ಯಾಪ್‌ಟಾಪ್‌, ಎಟಿಎಂ ಕಾರ್ಡ್‌ಗಳು ಮತ್ತು ಒಡವೆ ಕಳ್ಳತನವಾಗಿದೆ ಎಂದು ಮೃತರ ಪುತ್ರ ಹೇಳಿದ್ದಾರೆ. ಆದರೆ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಪರಿಚಿತರೇ ಕೃತ್ಯ ನಡೆದಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಒಬ್ಬನಿಂದಲೇ ಕೃತ್ಯ?

ಈ ಜೋಡಿ ಕೊಲೆಯನ್ನು ಒಬ್ಬನೇ ಎಸಗಿರುವ ಬಗ್ಗೆ ಕೂಡಾ ಗುಮಾನಿ ಇದೆ. ಮನೆಗೆ ಬಲವಂತವಾಗಿ ಪ್ರವೇಶಿಸಿದಂತೆ ಕಂಡು ಬಂದಿಲ್ಲ. ರಾತ್ರಿ ಏನೋ ಅನಾಚಾರ ನಡೆದು ಈ ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?