* ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ಪ್ರತಿದಿನ ಗಂಡನಿಂದ ಟಾರ್ಚರ್
* ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ
* ಪುತ್ರನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ
ಬೆಳಗಾವಿ(ಜ. 28) ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ಗಂಡನಿಂದ ನಿತ್ಯವೂ (Domestic violence)ಕಿರುಕುಳ ತಾಳಲಾರದೆ ಮಹಿಳೆ (Woman) ಮಗನೊಂದಿಗೆ ಕರೆಗೆ ಹಾರಿ ಆತ್ಮಹತ್ಯೆ (suicide) ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಬೊಳಕಡಬಿ ಗ್ರಾಮದಲ್ಲಿ ಪ್ರಕರಣ ನಡೆದಿದೆ. ಸೇವಂತಿ ಪ್ಯಾಟಿ(32) ಪುತ್ರ ಮಹಾಂತೇಶ್ ಪ್ಯಾಟಿ(12) ಜತೆ ಕೆರೆಗೆ ಹಾರಿದ್ದಾರೆ.
ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ಗಂಡ ಬೆಳ್ಳಪ್ಪ ಪ್ರತಿದಿನ ಹಿಂಸೆ ನೀಡುತ್ತಿದ್ದ. ಗುರುವಾರ ಸಂಜೆ ಹೆಂಡತಿ ಮಗನ ಮೇಲೆ ಹಲ್ಲೆ ಮಾಡಿದ್ದ. ಕಿರಿಯ ಮಗನನ್ನು ತಂಗಿಯ ಮನೆಯಲ್ಲಿ ಬಿಟ್ಟು ಬಂದಿದ್ದ. ಇನ್ನೊಂದು ಮಗುವನ್ನು ಗಂಡ ಹೆಂಡತಿ ನೋಡಿಕೊಳ್ಳುತ್ತಿದ್ದರು.
ಬೇರೊಂದು ಮದುವೆ ಆಗ್ತೇನಿ ಮನೆ ಬಿಟ್ಟು ಹೋಗಿ ಅಂತ ಕಿರುಕುಳ ನೀಡಿದ್ದಾನೆ. ಇದರಿಂದ ಮನನೊಂದು ಗ್ರಾಮದ ಹೊರ ವಲಯದ ಕೆರೆಗೆ ಸೇವಂತಿ ಹಾರಿದ್ದಾರೆ. ಶುಕ್ರವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರ ಭೇಟಿ ಎರಡು ಶವಗಳನ್ನ ಹೊರ ತೆಗೆದಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಿಯಕರನಿಗೆ ಪತ್ನಿಯ ಬೆತ್ತಲೆ ಕರೆ... ಮಗನೊಂದಿಗೆ ಸುಸೈಡ್‌ಗೂ ಮುನ್ನ ಅದೊಂದು ವಿಡಿಯೋ ಮಾಡಿದ್ದ!
ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು: ಕರ್ನಾಟಕ ಮಾಜಿ ಸಿಎಂ ಬಿ, ಎಸ್. ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ ಸುಮಾರು 10 ಗಂಟೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪದ್ಮಾವತಿ ಪುತ್ರಿ ಸೌಂದರ್ಯ(30) ಆತ್ಮಹತ್ಯೆ ಮಾಡಿಕೊಂಡಿದ್ದು ಅಂತಿಮ ವಿಧಿ ವಿಧಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬಿ. ಎಸ್ ಯಡಿಯೂರಪ್ಪ ಅವರ ದ್ವಿತೀಯ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ಅವರು ವಸಂತನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜು ಬಳಿಯ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು. 2018ರಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಮರಿಸ್ವಾಮಿ ಅಣ್ಣನ ಮಗ ಡಾ. ನಿರಂಜನ್ ಅವರನ್ನು ಸೌಂದರ್ಯ ಮದುವೆಯಾಗಿದ್ದರು. ಮೃತ ಸೌಂದರ್ಯಗೆ ಒಂದು ಮಗು ಇದೆ. ಬಿಎಸ್ ಯಡಿಯೂರಪ್ಪ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಎಲ್‌ಐಸಿ ಏಜೆಂಟನ್ ಸಂಗ ಬಿಡದ ಪತ್ನಿ: ಪತ್ನಿಯ (Wife) ಅನೈತಿಕ( Extra marital affair) ಸಂಬಂಧದಿಂದ ಬೇಸತ್ತು ಮಗನ (Son) ಜತೆ ಅಪ್ಪ (Father) ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾಗಮಂಗಲ ತಾಲೂಕಿನ ಪಿಟ್ಟೆಕೊಪ್ಪಲು ಸಮೀಪದ ಚನ್ನಾಪುರ ಕೆರೆಗೆ ಮಗುವನ್ನು ಸೊಂಟಕ್ಕೆ ಕಟ್ಟಿಗೊಂಡು ಗಂಡ ಜಿಗಿದಿದ್ದ.
ಗಂಗಾಧರಗೌಡ ತನ್ನ 6 ವರ್ಷದ ಪುತ್ರ ಜಸ್ವಿತ್‌ನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೆ ಪತ್ನಿ ಸಿಂಧು ಹಾಗೂ ಎಲ್‌ಐಸಿ ಏಜೆಂಟ್ ಜಿ.ಸಿ. ನಂಜುಂಡೇಗೌಡ ಕಾರಣ ಎಂದು ಬರೆದಿರುವ ಡೆತ್‌ನೋಟ್ ಘಟನಾ ಸ್ಥಳದಲ್ಲಿ ಪತ್ತೆಯಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರಿಗೆ ಗಂಗಾಧರಗೌಡ ಕೊನೆಯದಾಗಿ ಮಾಡಿದ್ದ ವಿಡಿಯೋ ಸಹ ಲಭ್ಯವಾಗಿತ್ತು.
ಅಕ್ರಮ ಸಂಬಂಧ ಆರೋಪದಿಂದ ಮನನೊಂದು ಆತ್ಮಹತ್ಯೆ: ಮಹಿಳೆಯೋರ್ವರು ಇಬ್ಬರು ಮಕ್ಕಳೊಂದಿಗೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಭದ್ರಾವತಿಯ ಹಂಚಿನ ಸಿದ್ದಾಪುರದಿಂದ ಪ್ರಕರಣ ವರದಿಯಾಗಿತ್ತು.
ಭದ್ರಾವತಿ ತಾಲೂಕಿನ ಯಡೇಹಳ್ಳಿಯ ನಿವಾಸಿ ವೀಣಾ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡವರು. ವೀಣಾ ಹಾಗೂ ಸಂತೋಷ್ ದಂಪತಿಯು ಭದ್ರಾವತಿ ತಾಲೂಕಿನ ಅರಹತೋಳಲು ಗ್ರಾಮದ ಸಂತೋಷ ಹಾಗೂ ಆಶಾ ಎಂಬುವರಿಗೆ 8 ಲಕ್ಷ ರೂ. ಸಾಲ ನೀಡಿದ್ದರು. ಹಣ ವಾಪಾಸ್ ಕೇಳಿದ್ದಕ್ಕೆ ಸಂತೋಷ್ ಹಾಗೂ ಆಶಾ ಎಂಬುವರು ಸೇರಿ ವೀಣಾರಿಗೆ ಬೇರೆಯವರೊಂದಿಗೆ ಅನೈತಿಕ ಸಂಬಂಧವಿದೆ ಎಂದು ಅಪಪ್ರಚಾರ ಮಾಡಿದ್ದರು ಎಂಬ ಆರೋಪ ಇದೆ. ಇದರಿಂದ ಬೇಸತ್ತ ವೀಣಾ 7 ವರ್ಷದ ಮಗಳಾದ ಜಾನ್ನವಿ ಹಾಗೂ ಒಂದು ವರ್ಷದ ದೈವಿಕಾ ಎಂಬ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಹಂಚಿನ ಸಿದ್ದಾಪುರ ಗ್ರಾಮದ ಬಳಿಯ ಭದ್ರಾ ನಾಲೆಗೆ ಹಾರಿದ್ದರು.