
ರಾಮನಗರ(ಮೇ.16): ಖಾಸಗಿ ಫೋಟೋ - ವಿಡಿಯೋಗಳನ್ನು ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಿರುವ ವೈದ್ಯನ ವಿರುದ್ಧ ಮಹಿಳೆಯೊಬ್ಬರು ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿನಾಯಕನಗರ ಬಡಾವಣೆ ನಿವಾಸಿ ಪರಸಪ್ಪ ಖಾಸಗಿ ಫೋಟೋ - ವಿಡಿಯೋಗಳನ್ನು ಇಟ್ಟುಕೊಂಡು ತನ್ನನ್ನು ತೇಜೋವಧೆ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ಆತನ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವಂತೆ ಮಹಿಳೆ ಕೋರಿದ್ದಾರೆ.
ಮದುವೆ ದಿನವೇ ಹೆಂಡತಿಯ ಮಾಜಿ ಪ್ರಿಯಕರ ಕಳುಹಿಸಿದ ಬೆತ್ತಲೆ ವೀಡಿಯೋ ಶೇರ್ ಮಾಡಿದ ಗಂಡ!
ಆ ಮಹಿಳೆ ವಾಸವಿದ್ದ ಮನೆಯ ಗ್ರೌಂಡ್ ಫ್ಲೋರ್ ಅನ್ನು ವೈದ್ಯ ಎಂದು ಹೇಳಿಕೊಂಡಿದ್ದ ಕೊಪ್ಪಳ ಮೂಲದ ಪರಸಪ್ಪನಿಗೆ ಬಾಡಿಗೆಗೆ ನೀಡಿದ್ದರು. ಅದೇ ಬಡಾವಣೆಯಲ್ಲಿ ಆತ ಕ್ಲಿನಿಕ್ ಇಟ್ಟುಕೊಂಡಿದ್ದ. ಮಹಿಳೆಯ ಕೈಯಲ್ಲಿ ಗಂಟು ಆಗಿದ್ದಾಗಲೂ ಆತನಿಂದಲೇ ಚಿಕಿತ್ಸೆ ಪಡೆದಾಗ ಇಬ್ಬರಲ್ಲಿ ಆತ್ಮೀಯತೆ ಬೆಳೆದಿದೆ. ಆಗಿನಿಂದ ವೈದ್ಯ ಮನೆಗೆ ಬಂದು ಹೋಗುತ್ತಿದ್ದ. ಖಾಸಗಿ ಫೋಟೋ, ವಿಡಿಯೋಗಳನ್ನು ತನ್ನ ಅರಿವಿಗೆ ಬಾರದಂತೆ ತೆಗೆದುಕೊಂಡಿದ್ದಾನೆ. ಆ ಫೋಟೋ - ವಿಡಿಯೋ ತೋರಿಸಿ ಹಣ, ಒಡವೆ ಪಡೆದಿದ್ದಾನೆ. ಹಣ ನೀಡದಿದ್ದಾಗ ವೈದ್ಯ ಕೆಲ ಖಾಸಗಿ ಫೋಟೋಗಳನ್ನು ಮಹಿಳೆಯ ಪತಿ ಮತ್ತು ಸಂಬಂಧಿಕರಿಗೆ ಕಳುಹಿಸಿ ಬೆದರಿಕೆ ಹಾಕಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ