Suicide Case: ಸಂತೋಷ್ ಪಾಟೀಲ್ ಸಾವಿಗೆ ಕಾರಣವಾದ ವಿಷ ಯಾವುದು ಗೊತ್ತಾ ?

By Govindaraj SFirst Published Apr 16, 2022, 3:26 PM IST
Highlights

ಗುತ್ತಿಗೆದಾರ ಸಂತೋಷ್ ಪಾಟೀಲ್ ನಿಗೂಢ ಸಾವು ಅನೇಕ ಅನುಮಾನಗಳನ್ನು ಹುಟ್ಟಿಸುತ್ತಿದೆ. ಇದೊಂದು ಆತ್ಮಹತ್ಯೆ ಪ್ರಕರಣದಂತೆ ಕಂಡುಬಂದರೂ, ರಾಜಕೀಯ ಪ್ರೇರಿತ ಸಾವು ಎಂಬ ಕಾರಣಕ್ಕೆ ನಾನಾ ಆಯಾಮಗಳನ್ನು ಪಡೆದುಕೊಂಡಿದೆ.

ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್ 

ಉಡುಪಿ (ಏ.16): ಗುತ್ತಿಗೆದಾರ ಸಂತೋಷ್ ಪಾಟೀಲ್ (Santosh Patil) ನಿಗೂಢ ಸಾವು (Suicide Case) ಅನೇಕ ಅನುಮಾನಗಳನ್ನು ಹುಟ್ಟಿಸುತ್ತಿದೆ. ಇದೊಂದು ಆತ್ಮಹತ್ಯೆ ಪ್ರಕರಣದಂತೆ ಕಂಡುಬಂದರೂ, ರಾಜಕೀಯ ಪ್ರೇರಿತ ಸಾವು ಎಂಬ ಕಾರಣಕ್ಕೆ ನಾನಾ ಆಯಾಮಗಳನ್ನು ಪಡೆದುಕೊಂಡಿದೆ. ಸಂತೋಷ್ ಪಾಟೀಲ್ ವಿಷ ಸೇವಿಸಿ (Poison) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಹಾದಿಯಲ್ಲಿ ಸದ್ಯ ತನಿಖೆ ಸಾಗಿದೆ. ಹಾಗಾದರೆ ಈ ನಿಗೂಢ ಸಾವಿಗೆ ಕಾರಣವಾದ ಆ ವಿಷ ಯಾವುದು? ಈ ವಿಷಯವನ್ನು ಸಂತೋಷ್ ಖರೀದಿಸಿದ್ದು ಎಲ್ಲಿ?  ಇಂಟರೆಸ್ಟಿಂಗ್ ಮಾಹಿತಿಗಳು ಇಲ್ಲಿವೆ.

Latest Videos

ಅದೊಂದು ಅಪಾಯಕಾರಿ ವಿಷ: ಸಂತೋಷ್ ಮೃತದೇಹ ಪತ್ತೆಯಾದ ದಿನವೇ, ಆತನ ಸಾವಿಗೆ ಕಾರಣ ಎನ್ನಲಾದ ವಿಷದ ಬಾಟಲಿ ಕೂಡ ಸಿಕ್ಕಿತ್ತು. ಪಾಟೀಲ್ ಶವ ಬೆಡ್ಡಿನ ಮೇಲೆ ಬಾಯಿತುಂಬಾ ನೊರೆಯ ಸಹಿತ ಬಿದ್ದಿದ್ದರೆ, ಪಕ್ಕದಲ್ಲೇ ಇದ್ದ ಡಸ್ಟ್ ಬಿನ್‌ನಲ್ಲಿ ವಿಷದ ಬಾಟಲ್ ಇತ್ತು. ಗೆಳೆಯರ ಜೊತೆ ಹೋಗಿ ತಂದಿದ್ದ ಜ್ಯೂಸ್‌ಗೆ ವಿಷವನ್ನು ಬೆರೆಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವ ಅಂಶ. ಇಷ್ಟಕ್ಕೂ ಆ ವಿಷ ಯಾವುದು ಗೊತ್ತಾ? ಮೊನಸಿಲ್ (Monocil). ಹೌದು, ಶೇ.36 ರಷ್ಟು ಮೋನೋಕ್ರೋಟೋಫೋಸ್ ಅಂಶಗಳನ್ನೊಳಗೊಂಡ ಕೆ ದ್ರವ ಸೇವಿಸಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಂಡುಬರುತ್ತಿದೆ. ಇದೊಂದು ಅಪಾಯಕಾರಿ ವಿಷವಾಗಿದ್ದು ಗಿಡಗಳಿಗೆ ಹುಳುಬಾಧೆ ಉಂಟಾಗದಂತೆ ತಡೆಯಲು ಇದನ್ನು ಬಳಸಲಾಗುತ್ತದೆ.

Chikkamagaluru: ಸಂತೋಷ್ ಪಾಟೀಲ್ ಸಾಯುವ ಮುನ್ನ ಕಾಫಿನಾಡಿನಲ್ಲಿ ವಾಸ್ತವ್ಯ!

ಮಹಾ ದುರಂತಕ್ಕೆ ಕಾರಣವಾಗಿದ್ದ ವಿಷ: ಕೆಲವರ್ಷಗಳ ಹಿಂದೆ ಈ ವಿಷದ ಪರೋಕ್ಷ ಪರಿಣಾಮದಿಂದ ಬಿಹಾರದಲ್ಲಿ 23 ಮಕ್ಕಳು ಸತ್ತಿದ್ದರಂತೆ. ಈ ಕೀಟನಾಶಕದ ಬಾಟಲಿಗಳಿಗೆ ಹಾಕಲಾಗಿದ್ದ ಸಾಸಿವೆ ಎಣ್ಣೆಯನ್ನು ಬಳಸಿ ಆಹಾರ ತಯಾರಿಸಲಾಗಿತ್ತು. ಅದನ್ನು ತಿಂದಿದ್ದ 23 ಮಕ್ಕಳು ಅಸುನೀಗಿ ಭಾರಿ ದುರಂತ ಸಂಭವಿಸಿತ್ತು!

ವಿಷ ಖರೀದಿಸಿದ್ದು ಎಲ್ಲಿಂದ?: ಪ್ರಾರಂಭಿಕ ತನಿಖೆಯಲ್ಲಿ ಉಡುಪಿಯಲ್ಲಿ ಈ  ವಿಷ ಖರೀದಿಸಿರುವ ಯಾವುದೇ ಕುರುಹು ಸಿಕ್ಕಿಲ್ಲ. ಒಂದೋ ಬೆಳಗಾವಿಯಿಂದ ಹೊರಡುವಾಗಲೇ ಸಂತೋಷ್ ಪಾಟೀಲ್ ವಿಷ ಖರೀದಿಸಿರ ಕು ಅಥವಾ ಚಿಕ್ಕಮಗಳೂರಿನಲ್ಲಿ ಈ ಬಾಟಲಿ ಖರೀದಿಸಿರುವ ಸಾಧ್ಯತೆಯೂ ಇದೆ. ಹೆಚ್ಚಾಗಿ ಕಬ್ಬು ಬೆಳೆಯುವ ಪ್ರದೇಶದಲ್ಲಿ ಮೋನೋಸಿಲ್ ಲಭ್ಯವಾಗುತ್ತದೆ. ಸಂತೋಷ್ ಪಾಟೀಲ್ ಉಡುಪಿಗೆ ಬರುವಾಗಲೇ ಬಾಟಲಿ ತಂದಿರುವ ಸಾಧ್ಯತೆ ಇದೆ. 100ml ತೂಕದ ಈ ಬಾಟಲ್ಲಿ ಯನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಡಿಜಿಪಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ: ಪ್ರಕರಣದ ಗಂಭೀರತೆಯನ್ನು ಅರಿತು ಸ್ವತಹ ಎಡಿಜಿಪಿ ಪ್ರತಾಪರೆಡ್ಡಿ ಇಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಇಂತಹ ಹೈಪ್ರೊಫೈಲ್ ಪ್ರಕರಣದಲ್ಲಿ, ಅತ್ಯುತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಎಡಿಜಿಪಿ ಪ್ರತಾಪ್ ರೆಡ್ಡಿ, ರಾಷ್ಟ್ರದ ಗಮನ ಸೆಳೆದ ಉಡುಪಿ ಜಿಲ್ಲೆಯಲ್ಲಿ ನಡೆದ ಮಣಿಪಾಲ ರೇಪ್ ಕೇಸ್, ಹಾಗೂ ಹೋಮ ಕುಂಡ ಹತ್ಯೆಯ ಸಂದರ್ಭದಲ್ಲೂ ಮಾರ್ಗದರ್ಶನ ಮಾಡಿದ್ದರು. ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪರೆಡ್ಡಿ, ಏಳು ತನಿಖಾ ತಂಡಗಳನ್ನು ಮಾಡಿ ರಾಜ್ಯದ ವಿವಿಧ ಭಾಗಗಳಿಗೆ ಕಳುಹಿಸಲಾಗಿದೆ ಎಂದರು.

ಸಂತೋಷ್ ಪಾಟೀಲ್ ಪ್ರಕರಣದಲ್ಲಿ ನಿರ್ದೇಶನಗಳನ್ನು ನೀಡಲು ಬಂದಿದ್ದೇನೆ.ತನಿಖೆಯನ್ನು ಸಮರ್ಪಕವಾಗಿ ರೀತಿಯಲ್ಲಿ ಮಾಡಲಾಗುವುದು.ಹಂತಹಂತವಾಗಿ ಪರಿಶೀಲನೆ ನಡೆಸಿ ಮಾಹಿತಿಗಳನ್ನು ನೀಡುತ್ತೇವೆ. ಸಮರ್ಪಕವಾಗಿ ಮತ್ತು ಸಮಗ್ರವಾಗಿ ತನಿಖೆಯನ್ನು ಮಾಡಲಾಗುವುದು.ಎಫ್ ಎಸ್ ಎಲ್,  ಫೋರೆನ್ಸಿಕ್ ಸಾಯನ್ಸ್ ಲ್ಯಾಬರೋಟರಿ ವರದಿ ಬರಬೇಕು.ಡಾಕ್ಟರ್ಸ್ ರಿಪೋರ್ಟ್‌ ಗಳು ಇನ್ನು ಬರಬೇಕಾಗಿದೆ. ಎಲ್ಲಾ ಹಂತದ ವರದಿಗಳನ್ನು ಪರಿಶೀಲನೆ ಮಾಡಬೇಕು.ಮರಣೋತ್ತರ ವರದಿ ಬಗ್ಗೆ ಈ ಹಂತದಲ್ಲಿ ಯಾವುದನ್ನು ಹೇಳಲು ಸಾಧ್ಯವಿಲ್ಲ.

ಸಂತೋಷ್‌ ಆತ್ಮಹತ್ಯೆ ಕೇಸ್‌: ಎರಡೂ ಪಕ್ಷಗಳಿಗೆ ಮಾತನಾಡುವ ನೈತಿಕತೆ ಇಲ್ಲ: ಭಾಸ್ಕರ್ ರಾವ್

ಎಫ್‌ಎಸ್ಎಲ್ ಒಂದು ಒಂದು ಸ್ವತಂತ್ರವಾದ ಸಂಸ್ಥೆ. ಅವರು ಅವರ ವರದಿಗಳನ್ನು ಕೊಡುತ್ತಾರೆ. ಎಫ್‌ಎಸ್ಎಲ್ ವರದಿ ಶೀಘ್ರ ಕೊಡುವಂತೆ ಪೊಲೀಸ್ ಇಲಾಖೆಯಿಂದ ಕೋರಿದ್ದೇವೆ. ಎಡಿಜಿಪಿ ಆಗಿ ನಾನು ತನಿಖಾ ಅಧಿಕಾರಿಗಳನ್ನು ಮತ್ತು ತಂಡಗಳನ್ನು ಮೇಲುಸ್ತುವಾರಿ ಮಾಡುತ್ತೇನೆ. ನನ್ನ ನಿರ್ದೇಶನದಂತೆ ತನಿಖಾ ತಂಡಗಳು ಕೆಲಸ ಮಾಡುತ್ತವೆ. ಪ್ರಕರಣವನ್ನು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು.ಪ್ರತಿಯೊಂದು ಆಯಾಮಗಳನ್ನು ಕೂಡ ನಾವು ಪರಿಶೀಲನೆ ಮಾಡಬೇಕಾಗುತ್ತದೆ. ಸಮರ್ಪಕವಾಗಿ ತನಿಖೆ ಮಾಡುತ್ತೇವೆ ಎಂದು ಆಶ್ವಾಸನೆ ಕೊಡುತ್ತೇನೆ ಎಂದರು.

click me!