
ಬೆಂಗಳೂರು (ಡಿ.15) ತಂತ್ರಜ್ಞಾನ ಬೆಳೆದೆಂತೆಲ್ಲ ಬೆಳೆದಂತೆಲ್ಲ ಸೈಬರ್ ವಂಚನೆ ಪ್ರಕರಣಗಳು ಸಹ ಹೆಚ್ಚಳವಾಗುತ್ತಿವೆ. ಪೊಲೀಸರು ತಾಂತ್ರಿಕವಾಗಿ ಎಷ್ಟೇ ಅಪ್ಡೇಟ್ ಆಗಿದ್ದರೂ ವಂಚಕರು ಒಂದು ಹೆಜ್ಜೆ ಮುಂದಿದ್ದಾರೆ ಎಂಬುದು ವಂಚನೆಯಿಂದ ಸಾಬೀತಾಗಿದೆ. ಇದೀಗ ಸೈಬರ್ ವಂಚನೆಯಲ್ಲಿ ದೊಡ್ಡ ಸದ್ದು ಮಾಡುತ್ತಿದೆ ಡಿಜಿಟಲ್ ಅರೆಸ್ಟ್. ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆಗೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆ ಮೂಲಕ ಕೇವಲ 15 ದಿನದ ಅಂತರದಲ್ಲಿ 7 ಜನರಿಗೆ ಬರೋಬ್ಬರಿ 3 ಕೋಟಿ ರೂ. ವಂಚಿಸಿರುವ ಖದೀಮರು. ವಂಚನೆ ಸ್ವರೂಪ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಈ ಪ್ರಕರಣ ಸಂಬಂಧ ಅಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ.
ಹುಡುಗಿ ಹೆಸರಲ್ಲಿ ಫೇಸ್‌ಬುಕ್; ಬರೋಬ್ಬರಿ ₹6.87 ಲಕ್ಷ ರೂ.ವಂಚಿಸಿದ ಭೂಪ!
ಏನಿದು ಡಿಜಿಟಲ್ ಅರೆಸ್ಟ್?
ಡಿಜಿಟಲ್ ಅರೆಸ್ಟ್ ಎಂಬುದು ಇದೀಗ ಸೈಬರ್ ವಂಚನೆಯಲ್ಲೇ ಭಾರೀ ಸದ್ದು ಮಾಡ್ತಿದೆ. ಈ ಹಿಂದೆ ನಾನಾ ತಂತ್ರಗಳ ಮೂಲಕ ಜನರಿಗೆ ವಂಚಿಸುತ್ತಿದ್ದ ಖದೀಮರು. ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳುತ್ತಿದ್ದಂತೆ ಎಚ್ಚೆತ್ತ ಸೈಬರ್ ಕಳ್ಳರು ಹೊಸ ಹೊಸ ಮಾರ್ಗಗಳನ್ನು ಶೋಧಿಸುತ್ತಿದ್ದಾರೆ. ಇದೀಗ ಡಿಜಿಟಲ್ ಅರೆಸ್ಟ್ ಎಂಬುದು ಸೈಬರ್ ವಂಚಕರಿಗೆ ಸುಲಭದಲ್ಲಿ ಹಣ ಮಾಡಲು ಹೊಸ ಮಾರ್ಗವಾಗಿದೆ.
ಹೇಗೆ ವಂಚಿಸಿಲಾಗುತ್ತೆ?
ಖದೀಮರು ಮೊದಲು ಅಜ್ಞಾತಸ್ಥಳದಲ್ಲಿ ಪೊಲೀಸರು, ತನಿಖಾ ಸಂಸ್ಥೆಯವ ಹೆಸರು ಹೇಳಿಕೊಂಡು ಕರೆಮಾಡುತ್ತಾರೆ. ನಿಮ್ಮ ಆಧಾರ್ ಕಾರ್ಡ್ ದಾಖಲೆಗಳನ್ನು ಬಳಸಿ ಅಪರಾಧ ಮಾಡಲಾಗಿದೆ. ಈ ಬಗ್ಗೆ ನಮಗೆ ದೂರು ಬಂದಿದೆ. ನೀವು ವಿಚಾರಣೆಗೆ ಹಾಜರಾಗಬೇಕು ಇಲ್ಲವಾದರೆ ಅರೆಸ್ಟ್ ಮಾಡುವ ಬಗ್ಗೆ ಬೆದರಿಕೆಯೊಡ್ಡುತ್ತಾರೆ. ಪೊಲೀಸರಿಂದ ಕರೆ ಬಂದರೆ ಮೊದಲೇ ಹೆದರಿಬಿಡುವ ಬಡಪಾಯಿ ಜನರು, ಇದನ್ನೇ ಬಂಡವಾಳವಾಗಿ ಬಳಸಿಕೊಂಡು ಬ್ಲಾಕ್ ಮೇಲ್ ಮಾಡಲು ಶುರು ಮಾಡ್ತಾರೆ. ವಿಚಾರಣೆಯಿಂದ ವಿನಾಯಿತಿ ಬೇಕಾದ್ರೆ ಹಣ ಹಾಕುವಂತೆ ಬೇಡಿಕೆ ಮುಂದಿಡ್ತಾರೆ.
ಬ್ರಿಗೇಡ್ ರೋಡ್ ಗೆ ಹೊಸ ವರ್ಷ ಸಂಭ್ರಮಾಚರಣೆಗೆ ಹೋಗುವ ಕಪಲ್ಸ್ ಗಳಿಗೆ ಸಿಹಿ ಸುದ್ದಿ; ಪ್ರತ್ಯೇಕ ಜಾಗ ವ್ಯವಸ್ಥೆ!
ಇವರು ನಿಜವಾಗಲು ತನಿಖಾ ಸಂಸ್ಥೆಯವರು, ಪೊಲೀಸರೇ ಎಂದು ನಂಬುವಷ್ಟು ಕರಾರುವಕ್ಕಾಗಿ ಮಾತಾಡಿ ವಂಚಿಸುವ ಖದೀಮರು. ಇದೇ ರೀತಿ ಸುಮಾರು ಏಳು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಹಣ ಕಳೆದುಕೊಂಡ ಜನರು ಪೊಲೀಸ್ ಠಾಣೆಗಳಿಗೆ ದೂರು ನೀಡಲು ಬರುವವರ ಸಂಖ್ಯೆ ಹೆಚ್ಚಳವಾಗ್ತಿದೆ. ಇತ್ತೀಚೆಗೆ ಹೆಚ್ ಎಸ್ ಆರ್ ಲೇಔಟ್ ಮೂಲದ ವೃದ್ದ ದಂಪತಿಗೆ 1ಕೋಟಿ 97 ಲಕ್ಷ ವಂಚಿಸಿರುವ ವಂಚಕರು. ಅದೇ ರೀತಿ ಕಳೆದ 15 ದಿನಗಳ ಅಂತರದಲ್ಲಿ ಅಗ್ನೇಯ ವಿಭಾಗ ಒಂದರಲ್ಲೆ ಬರೋಬ್ಬರಿ ಮೂರು ಕೋಟಿ ವಂಚಿಸಿರುವ ಸೈಬರ್ ಖದೀಮರು. ಪೊಲೀಸರ ಹೆಸರಲ್ಲೇ ವಂಚನೆಗೆ ಇಳಿದಿರುವ ಖದೀಮರ ಖತರ್ನಾಕ್ ಐಡಿಯಾಗಳಿಗೆ ಪೊಲೀಸರೇ ಬೆಚ್ಚಿಬಿಳುವಂತಾಗಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ