
ಯಾದಗಿರಿ (ಜ.2): ನೂರಾರು ವರ್ಷಗಳಿಂದ ಮುಸಲ್ಮಾನರು ಶವ ಹೂಳುತ್ತಿದ್ದ ಸ್ಮಶಾನ ಜಾಗವನ್ನು ತನ್ನದೆಂದು ವ್ಯಕ್ತಿಯೊಬ್ಬರು ಧ್ವಂಸ ಮಾಡಿದ ಘಟನೆ ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ನಡೆದಿದೆ.
ಪಂಪಣ್ಣಗೌಡ ಎಂಬಾತನಿಂದ ಮುಸಲ್ಮಾನರ ಸ್ಮಶಾನ ಧ್ವಂಸಗೊಳಿಸಿ ಕೃತ್ಯ. ಜಮೀನು ತನಗೆ ಸೇರಿದ್ದೆಂದು, ಇಲ್ಲಿ ಯಾರೂ ಹೂಳುವಂತಿಲ್ಲ ಎಂದು ಎಚ್ಚರಿಕೆ ನೀಡಿ ಧ್ವಂಸಗೊಳಿಸಿರುವ ಪಂಪಣ್ಣಗೌಡ.
ಸ್ಮಶಾನ ಜಾಗದಲ್ಲಿ ಮುಸಲ್ಮಾನರು ಮೃತವ್ಯಕ್ತಿಗಳನ್ನು ಹೂಳುತ್ತಿರುವುದು ನಿನ್ನೆ ಮೊನ್ನೆಯಿಂದಲ್ಲ, ನೂರಾರು ವರ್ಷಗಳಿಂದ ಹೂಳುತ್ತಿದ್ದಾರೆ. ಈ ಜಾಗವನ್ನು ಮುಸಲ್ಮಾನರ ಸ್ಮಶಾನಕ್ಕೆ ಪಂಪನಗೌಡ ಕುಟುಂಬಸ್ಥರು ದಾನವಾಗಿ ನೀಡಿದ್ದರೆಂದು ಹೇಳಲಾಗಿದೆ. ಆದರೆ ಇದೀಗ ಜಮೀನನ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆ ವಾಪಸ್ ಜಮೀನು ಪಡೆಯಲು ಮುಂದಾಗಿರೋ ಪಂಪನಗೌಡ. ಜೆಸಿಬಿ ಮೂಲಕ ನೂರಾರು ಗೋರಿಗಳು ನೆಲಸಮಗೊಳಿಸಲಾಗಿದೆ.
ಯಾದಗಿರಿ: ಅನ್ನಭಾಗ್ಯ ಅಕ್ಕಿ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!
ಮುಸ್ಲಿಂ ಸಮುದಾಯದಿಂದ ಆಕ್ರೋಶ:
ನೂರಾರು ವರ್ಷಗಳಿಂದ ಹೂಳ್ತಿದ್ದ ಮುಸ್ಲಿಂರು ಇದೀಗ ಇದ್ದಕ್ಕಿದ್ದಂತೆ ಜೆಸಿಬಿ ಮೂಲಕ ಗೋರಿಗಳನ್ನು ಧ್ವಂಸಗೊಳಿಸಿರುವುದು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಪಂಪನಗೌಡ ನಮ್ಮ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ. ಆತನ ವಿರುದ್ಧ ಸೂಕ್ತ ಕ್ರಮ ಆಗಬೇಕು ಎಂದು ಆಗ್ರಹಿಸಿರುವ ಮುಸ್ಲಿಂ ಸಮುದಾಯ. ಈ ಘಟನೆ ಸಂಬಂಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯಾದಗಿರಿ: ಮತದಾರಳ ಹಕ್ಕು ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಪತಿ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ