GST Fraud: 4521 ಕೋಟಿ ರೂ. ನಕಲಿ GST ಇನ್‌ವೈಸ್... ಎಂಥಾ ಕಿರಾತಕ!

By Kannadaprabha News  |  First Published Jan 15, 2022, 3:56 AM IST

* 4,521 ಕೋಟಿ ಮೌಲ್ಯದ ನಕಲಿ ಇನ್‌ವಾಯ್ಸ್ ಸೃಷ್ಟಿಸಿದ್ದ ವ್ಯಕ್ತಿ ಸೆರೆ
* ಜಿಎಸ್‌ಟಿ ಅಧಿಕಾರಿಗಳಿಂದ ಕಾರಾರ‍ಯಚರಣೆ,  ಜ.13ರಂದು ಮಾಸ್ಟರ್‌ಮೈಂಡ್‌ ಸೆರೆ
* ಸರಾಗವಾಗಿ ನಕಲಿ ಇನ್ ವಾಯ್ಸ್ ಸಿದ್ಧಮಾಡುತ್ತಿದ್ದ


ನವದೆಹಲಿ(ಜ. 15) ಸರಕು ಮತ್ತು ಸೇವಾ ತೆರಿಗೆ (GST) ಅಡಿಯಲ್ಲಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ITC) ಪ್ರಯೋಜನವನ್ನು ಪಡೆಯಲು ಸಿಂಡಿಕೇಟ್‌ ನಡೆಸುತ್ತಿದ್ದ ಮತ್ತು 4,521 ಕೋಟಿ ರು. ನಕಲಿ ಇನ್‌ವಾಯ್ಸ್  (ಸರಕು  ಪಟ್ಟಿ)ಗಳನ್ನು ನೀಡಿದ್ದ ವ್ಯಕ್ತಿಯೊಬ್ಬನನ್ನು ಜಿಎಸ್‌ಟಿ ಅಧಿಕಾರಿಗಳು ಬಂಧಿಸಿದ್ದಾರೆ (Arrest) ಎಂದು ಶುಕ್ರವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಪರಿಶೀಲನೆ ವೇಳೆ ಈ ಸಿಂಡಿಕೇಟ್‌ 636 ಸಂಸ್ಥೆಗಳನ್ನು ನಿರ್ವಹಿಸುತ್ತಿತ್ತು ಎಂಬುದು ಬಯಲಾಗಿದೆ. ಅಲ್ಲದೆ ಈ ಸಂಸ್ಥೆಗಳಿಂದ ಕೇವಲ ಇನ್‌ವಾಯ್ಸ್ ಗಳನ್ನು ಮಾತ್ರ ನೀಡಿದ್ದೇವೆ. ಯಾವುದೇ ಸರಕುಗಳನ್ನು ಸರಬರಾಜು ಮಾಡಿಲ್ಲ ಎಂದು ಪ್ರಕರಣದ ಮಾಸ್ಟರ್‌ಮೈಂಡ್‌ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.

Tap to resize

Latest Videos

ITR e-Verification: 2019-20ನೇ ಆರ್ಥಿಕ ಸಾಲಿನ ITR ಇ-ದೃಢೀಕರಣ ಅಂತಿಮ ಗಡುವು ಫೆ.28ಕ್ಕೆ ವಿಸ್ತರಣೆ

ಆರೋಪಿಗಳು ಸುಮಾರು 4521 ಕೋಟಿ ರು. ತೆರಿಗೆ ವಿಧಿಸಬಹುದಾದ ಇನ್‌ವಾಯ್‌್ಸಗಳನ್ನು ಬಿಡುಗಡೆ ಮಾಡಿದ್ದಾರೆ. ತನಿಖೆಯ ಸಂದರ್ಭದಲ್ಲಿ, ಈ ಸಂಸ್ಥೆಗಳ ಲೆಡ್ಜರ್‌ನಲ್ಲಿ ಲಭ್ಯವಿರುವ ಐಟಿಸಿಯನ್ನು ಹಿಂತಿರುಗಿಸುವ ಮೂಲಕ 4.52 ಕೋಟಿ ರು.ಗಳಷ್ಟುಜಿಎಸ್‌ಟಿಯನ್ನು ಠೇವಣಿ ಮಾಡಲಾಗಿದೆ. ಜೊತೆಗೆ ಈವರೆಗೆ, ಈ ಸಂಸ್ಥೆಗಳ ವಿವಿಧ ಬ್ಯಾಂಕ್‌ ಖಾತೆಗಳಲ್ಲಿದ್ದ ಸುಮಾರು 7 ಕೋಟಿ ರು.ಗಳನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದೆ.

ಈ ನಕಲಿ ಸಂಸ್ಥೆಗಳ ಹಿಂದಿನ ಮಾಸ್ಟರ್‌ಮೈಂಡ್‌ ಸೆರೆಗೆ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯದ (ಡಿಜಿಜಿಐ) ಅಧಿಕಾರಿಗಳು ಜನವರಿ 6ರಂದು ದೆಹಲಿಯಲ್ಲಿ ಶೋಧ ನಡೆಸಿದ್ದರು. ನಂತರ ಜನವರಿ 10ರಂದು ಕೋಲ್ಕತಾದ ವಿವಿಧ ಕಡೆಗಳನ್ನು ಕಾರಾರ‍ಯಚರಣೆ ನಡೆಸಿದ್ದರು. ಅಂತಿಮವಾಗಿ ಜ.13ರಂದು ಪ್ರಕರಣದ ಮಾಸ್ಟರ್‌ಮೈಡನ್ನು ಬಂಧಿಸಲಾಗಿದೆ.

ವಿಸ್ತರಣೆ ತಿಳಿದುಕೊಳ್ಳಿ:   ಉದ್ಯಮಗಳಿಗೆ 2020-21ನೇ ಆರ್ಥಿಕ ಸಾಲಿನ ವಾರ್ಷಿಕ ಸರಕು ಮತ್ತು ಸೇವಾ ತೆರಿಗೆ (GST) ರಿಟರ್ನ್ಸ್ (returns)ಸಲ್ಲಿಕೆ ಮಾಡೋ ಗಡುವನ್ನು ಪರೋಕ್ಷ ತೆರಿಗೆಗಳು ಹಾಗೂ ಕಸ್ಟಮ್ಸ್ ಕೇಂದ್ರೀಯ ಮಂಡಳಿ (CBIC) ಫೆಬ್ರವರಿ 28ರ ತನಕ ವಿಸ್ತರಿಸಿದೆ. ಈ ಹಿಂದೆ ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31ಕೊನೆಯ ದಿನಾಂಕವಾಗಿತ್ತು. ಟ್ವೀಟ್ ಮೂಲಕ ಸಿಬಿಐಸಿ ಈ ಮಾಹಿತಿ ನೀಡಿದೆ.

ಸರಕು ಮತ್ತು ಸೇವಾ ತೆರಿಗೆ (GST) ಅಡಿಯಲ್ಲಿ ನೋಂದಣಿಯಾಗಿರೋ ತೆರಿಗೆದಾರರು  ಸಲ್ಲಿಕೆ ಮಾಡೋ ವಾರ್ಷಿಕ ರಿಟರ್ನ್ ಗೆ GSTR-9 ಎಂದು ಕರೆಯಲಾಗುತ್ತದೆ. ವಿವಿಧ ತೆರಿಗೆಗಳಡಿಯಲ್ಲಿ ಖರೀದಿಸಿದ ಹಾಗೂ ಮಾರಾಟ ಮಾಡಿದ ಸರಕು ಅಥವಾ ಸೇವೆಗಳ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ.   GSTR-9C ಅನ್ನೋದು GSTR-9 ಹಾಗೂ ಅಡಿಟ್ ಆಗಿರೋ ವಾರ್ಷಿಕ ಹಣಕಾಸು ಸ್ಟೇಟ್ ಮೆಂಟ್ ಗಳ ಸಮನ್ವಯವಾಗಿದೆ. ವಾರ್ಷಿಕ 2ಕೋಟಿ ರೂ.ಗಿಂತಲೂ ಅಧಿಕ ವಹಿವಾಟು ನಡೆಸೋ ಉದ್ಯಮಗಳು ವಾರ್ಷಿಕ GST ರಿಟರ್ನ್ಸ್  ಅಂದ್ರೆ GSTR-9 ಸಲ್ಲಿಸೋದು ಕಡ್ಡಾಯ. ಇನ್ನು  5ಕೋಟಿ ರೂ.ಗಿಂತ ಅಧಿಕ ವಹಿವಾಟು ನಡೆಸೋ ಉದ್ಯಮಗಳು ಮಾತ್ರ GSTR-9C ಸಲ್ಲಿಸಬೇಕು. 

46ನೇ ಜಿಎಸ್ ಟಿ ಮಂಡಳಿ ಸಭೆ ಡಿಸೆಂಬರ್ 31ರಂದು ದೆಹಲಿಯಲ್ಲಿ ನಡೆಯಲಿದೆ. ಈ ಸಭೆಯು ಡಿಸೆಂಬರ್ 31ರಂದು ಬಜೆಟ್ ಪೂರ್ವಭಾವಿಯಾಗಿ ಕೇಂದ್ರ ವಿತ್ತ ಸಚಿವರೊಂದಿಗೆ ರಾಜ್ಯ ಹಣಕಾಸು ಸಚಿವರುಗಳ ಸಭೆಯ ಮುಂದುವರಿದ ಭಾಗವಾಗಿರುತ್ತದೆ. ಸಚವರುಗಳ ಸಮಿತಿಯು ಸರಕು ಮತ್ತು ಸೇವೆಗಳ ದರಗಳಿಗೆ ಸಂಬಂಧಿಸಿ ಜಿಎಸ್ ಟಿ ಮಂಡಳಿಗೆ ವರದಿ ನೀಡಲಿದೆ. 

ಜಿಎಸ್ ಟಿ ಎಂದರೇನು?: ವಸ್ತುಗಳ ಉತ್ಪಾದನೆ, ಮಾರಾಟ, ಬಳಕೆ ಮತ್ತು ಸೇವೆಗಳ ಮೇಲೆ ವಿಧಿಸೋ ರಾಷ್ಟ್ರೀಯ ಮಟ್ಟದ ತೆರಿಗೆಗೆ ಸರಕು ಮತ್ತು ಸೇವಾ ತೆರಿಗೆ ಎಂದು ಕರೆಯುತ್ತಾರೆ. ಇದು ದೇಶದ ಅತಿ ದೊಡ್ಡ ಸೇವಾ ತೆರಿಗೆಗಳಲ್ಲೊಂದು. ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಅಥವಾ ಸೇವೆಗಳನ್ನು ಪಡೆದುಕೊಳ್ಳುವಾಗ ಪ್ರತಿ ಹಂತದಲ್ಲಿಯೂ ಈ ತೆರಿಗೆಯನ್ನು ವಿಧಿಸಲಾಗುತ್ತದೆ. 

ಒಂದು ವಸ್ತುವಿನ ಮಾರಾಟಗಾರ ತನ್ನ ಮಾಸಿಕ ಮಾರಾಟ ರಿಟರ್ನ್‌ನಲ್ಲಿ (monthly sales return)ಇನ್ ವಾಯ್ಸ್ (Invoice)ಮಾಹಿತಿ ಬಹಿರಂಗಪಡಿಸದಿದ್ರೆ  ಖರೀದಿದಾರ ಆ ವಸ್ತುವಿಗೆ ಪಾವತಿಸಿದ ತೆರಿಗೆ ಮೇಲೆ ಯಾವುದೇ ಕ್ರೆಡಿಟ್(Credit) ಪಡೆಯಲು ಸಾಧ್ಯವಾಗೋದಿಲ್ಲ. ಇನ್ನು ನಿಯಮಗಳನ್ನು ಉಲ್ಲಂಘನೆ ಮಾಡಿ ಸರಕುಗಳನ್ನು ಸಂಗ್ರಹಿಸಿದ ಅಥವಾ ಸಾಗಾಟ ಮಾಡಿದ ಆರೋಪದಲ್ಲಿ  ದಾಳಿ ನಡೆಸಿದ ಆಧಿಕಾರಿಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಉದ್ಯಮಗಳು ಶೇ.25ರಷ್ಟು ದಂಡ ವಿಧಿಸೋ ನಿಯಮ ಕೂಡ ಜನವರಿ 1ರಿಂದ ಜಾರಿಗೆ ಬಂದಿದೆ.

click me!