ದರ್ಶನ್ ತೂಗುದೀಪಗೆ ಮನೆ ಊಟ ಸಿಗ್ಲಿಲ್ಲ, ಮತ್ತೊಂದು ವಾರ ಸೆಂಟ್ರಲ್ ಜೈಲಿನ ಊಟವೇ ಗತಿ.!

By Sathish Kumar KH  |  First Published Jul 19, 2024, 5:21 PM IST

ನಟ ದರ್ಶನ್ ತೂಗುದೀಪ ಮನೆಯ ಊಟ ಬೇಕೆಂದು ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್‌ಮುಂದಿಟ್ಟು ಇತ್ಯರ್ಥ ಮಾಡಿಕೊಳ್ಳುವಂತೆ ಹೈಕೋರ್ಟ್ ಆದೇಶಿದಿದೆ. ಈ ಬೆನ್ನಲ್ಲಿಯೇ ದರ್ಶನ್‌ಗೆ ಮತ್ತೊಂದು ವಾರ ಜೈಲಿನ ಊಟ ಖಾಯಂ ಆಗಿದೆ.


ಬೆಂಗಳೂರು (ಜು.19): ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ನಟ ದರ್ಶನ್‌ಗೆ ಜೈಲೂಟದಿಂದ ಅನಾರೋಗ್ಯ ಉಂಟಾಗಿದ್ದು, ಮನೆ ಊಟ ನೀಡುವಂತೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಆದರೆ, ಈಗ ಹೈಕೋರ್ಟ್ ನ್ಯಾಯಮೂರ್ತಿಗಳು ಊಟದ ಬಗ್ಗೆ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಸಲ್ಲಿಸಿ ಜು.26ರೊಳಗೆ ಆದೇಶ ಪಡೆದುಕೊಳ್ಳುವಂತೆ ಆದೇಶಿಸಲಾಗಿದೆ. ಈ ಮೂಲಕ ಮನೆ ಊಟದ ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ಜೈಲೂಟವೇ ಫಿಕ್ಸ್ ಆಗಿದೆ.

ನಟ ದರ್ಶನ್ ತೂಗುದೀಪ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ 25ಕ್ಕೂ ಅಧಿಕ ದಿನಗಳನ್ನು ಕಳೆದಿದ್ದಾರೆ. ಆದರೆ, ಜೈಲೂಟದಿಂದ ಅನಾರೋಗ್ಯ ಉಂಟಾಗುತ್ತಿದೆ ಎಂದು ಹೇಳಿಕೊಂಡಿದ್ದ ದರ್ಶನ್‌ಗೆ ವಕೀಲರು ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿ ಮನೆ ಊಟ ಕೊಡುವದಕ್ಕೆ ಅವಕಾಶ ಕೇಳಿದ್ದರು. ಆದರೆ, ವಾದ ಪ್ರತಿವಾದ ಆಲಿಸಿದ ಹೈಕೋರ್ಟ್‌ ಪೀಠದ ಮುಂದೆ ಮನೆ ಊಟ ಕೊಡುವಂತೆ ಆದೇಶಿಸಿದ ಇತರೆ ಪ್ರಕರಣಗಳನ್ನು ಕೇಳಿದಾದ ಸ್ಪಷ್ಟ ಮಾಹಿತಿ ಕೊಡಲು ದರ್ಶನ್ ಪರ ವಕೀಲರು ವಿಫಲವಾದರು. ಈ ವೇಳೆ ಊಟ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್‌ಮುಂದೆ ಅರ್ಜಿ ಸಲ್ಲಿಸಿ ಇತ್ಯರ್ಥ ಮಾಡಿಕೊಳ್ಳುವಂತೆ ಹೈಕೋರ್ಟ್ ನ್ಯಾಯಮೂರ್ತಿಗಳು ಆದೇಶಿಸಿದರು.

Tap to resize

Latest Videos

ಜೈಲಿನಲ್ಲಿರೋ ದರ್ಶನ್‌ಗೆ ಕಾಟೇರ ನಮಸ್ಕಾರ; ಮದುವೆಗೆ ಆಶೀರ್ವಾದ ಪಡೆದ ನಿರ್ದೇಶಕ ತರುಣ್ ಸುಧೀರ

ಇನ್ನು ಅಲ್ಲಿ ನೀಡುವ ತೀರ್ಪು ಎಲ್ಲಾ ಕೈದಿಗಳಿಗೂ ಅನ್ವಯ ಆಗಬಹುದು. ಇದನ್ನು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ತೆಗೆದುಕೊಂಡು ಹೋಗಿ. ಅಲ್ಲಿ ಒಂದು ವಾರದಲ್ಲಿ ತೀರ್ಮಾನ ಆಗಿಬಿಡಬಹುದು. ಇದು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಸೂಕ್ತ. ಜೈಲಿನ ಮ್ಯಾನ್ಯುಯಲ್ ಸೆಕ್ಷನ್ 30 ರಲ್ಲಿ ಮನೆಯ ಊಟ ನೀಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ಪ್ರಕಾರ ವಿಚಾರಣಾಧೀನ ಆರೋಪಿ ಮನೆ ಊಟಕ್ಕೆ ಅವಕಾಶ ಹೊಂದಿದ್ದಾರೆ. ಮನೆಯ ಊಟ, ದಿನ ಪತ್ರಿಕೆ, ಹಾಸಿಗೆ ದಿಂಬನ್ನು ಪಡೆಯಲು ಅವಕಾಶ ಇದೆ. ಆದರೆ ಕೊಲೆ ಆರೋಪಿಗಳಿಗೂ, ಇತರ ಆರೋಪಿಗಳಿಗೂ ವ್ಯತ್ಯಾಸ ಇದೆ. ಆದರೆ, ಸಮಯದ ನಿಬಂಧನೆಗಳನ್ನು ಇಟ್ಟುಕೊಂಡು ಅವಕಾಶ ನೀಡಬಹುದು. ಕೆಲ ಸಮಯ ಎಂದು ಗುರುತಿಸಿ ಅವಕಾಶವನ್ನು ನೀಡಬಹುದಾಗಿದೆ ಎಂದು ನ್ಯಾಯಮೂರ್ತಿ ಕೃಷ್ಣಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. 

ವಿಚಾರಣಾಧೀನ ಆರೋಪಿಗಳಿಗೆ ಇರುವ ಎಲ್ಲಾ ಮೂಲಭೂತ ಹಕ್ಕುಗಳು ದರ್ಶನ್‌ಗೂ ಕೂಡ ಇರುತ್ತದೆ. ಮೂಲಭೂತ ಹಕ್ಕು ಅನ್ನೋದಾದರೆ ಸವಿವರವಾದ ವಾದ ಮಂಡನೆ ಆಗಬೇಕಾಗುತ್ತದೆ. ಸೆಕ್ಷನ್ 30ಗೆ ಇರುವ ವ್ಯಾಪ್ತಿ ವ್ಯಾಖ್ಯಾನ ಎಲ್ಲವನ್ನೂ ಕೋರ್ಟ್ ತೀರ್ಮಾನಿಸಬೇಕಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅರ್ಜಿ ಹಾಕಬಹುದು. ಒಂದು ವಾರದ ಒಳಗೆ ಇತ್ಯರ್ಥ ಆಗುತ್ತದೆ. ಅಲ್ಲಿ ಏನಾದ್ರೂ ಸಮಸ್ಯೆ ಆದರೆ ಹೈಕೋರ್ಟ್ ಗೆ ಬರಬಹುದು ಎಂದು ನ್ಯಾಯಮೂರ್ತಿಗಳು ಆದೇಶಿಸಿದರು.

Darshan: ನಟ ದರ್ಶನ್‌ಗೆ ಡಬಲ್ ಶಾಕ್..! ಇನ್ನೂ 14 ದಿನ ನ್ಯಾಯಾಂಗ ಬಂಧನದಲ್ಲಿ, ಮತ್ತೆ ಮುಂದುವರೆದ ಜೈಲೂಟ!

ಏನಿದು ಪ್ರಕರಣ? ಯಾವುದು ರಿಟ್ ಅರ್ಜಿ?: 
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಆತನ ಸ್ನೇಹಿತೆ ಪವಿತ್ರಾಗೌಡ ಸೇರಿದಂತೆ ಒಟ್ಟು 17 ಜನರು ಜೈಲು ಸೇರಿದ್ದಾರೆ. ಈ ಪೈಕಿ 13 ಜನರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರೆ, 4 ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೆ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಜೈಲೂಟದಿಂದ ಫುಡ್ ಪಾಯ್ಸನ್ ಆಗುತ್ತಿದ್ದು, ಮನೆ ಊಟ, ಮನೆಯಿಂದ ಹಾಸಿಗೆ ಹಾಗೂ ಓದಲು ಪುಸ್ತಕ ನೀಡಬೇಕು. ಆದರೆ, ಜೈಲಿನ ಅಧಿಕಾರಿಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದ ವಿಚಾರಣಾಧೀನ ಕೈದಿಯ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ನಟ ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ನಿನ್ನೆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠವು ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇಂದು ಪುನಃ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ಪೀಠವು, ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅರ್ಜಿ ಹಾಕಿ ಜು.26ರ ಒಳಗೆ ಇತ್ಯರ್ಥಪಡಿಸಿಕೊಳ್ಳುವಂತೆ ಆದೇಶ ಹೊರಡಿಸಿದ್ದಾರೆ. ಅಲ್ಲಿ ತೀರ್ಮಾನ ಆಗದಿದ್ದರೆ ಹೈಕೋರ್ಟ್‌ಗೆ ಬರುವಂತೆ ಸೂಚನೆ ನೀಡಿದ್ದಾರೆ.

click me!