ಕಳೆದ 1 ತಿಂಗಳಿಂದ ಸ್ವಯಂ ರಕ್ಷಣೆಗಾಗಿ ಮಾರ್ಷಿಯಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದೆ ಎಂದು ಸಂತ್ರಸ್ಥ ಬಾಲಕಿ ಹೇಳಿಕೊಂಡಿದ್ದಾಳೆ. ಆದರೆ, ಕ್ಯಾಂಪಸ್‌ನವರು ಯಾವ ತರಬೇತಿಯನ್ನೂ ನಡೆಸುತ್ತಿರಲಿಲ್ಲ ಎಂದು ಬಿಎಲ್‌ಡಬ್ಲ್ಯೂ ವಕ್ತಾರ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ (Uttar Pradesh) ಮತ್ತೊಂದು ಅತ್ಯಾಚಾರ ಪ್ರಕರಣ ವರದಿಯಾಗಿದೆ. ವಾರಾಣಸಿಯಲ್ಲಿ (Varanasi) ಸೋಮವಾರ ಸಂಜೆ ದಲಿತ ಬಾಲಕಿ (Dalit Community Girl) ಮೇಲೆ ಅತ್ಯಾಚಾರ ಮಾಡಲಾಗಿದೆ ಎಂಬ ಆರೋಪ ದಾಖಲಾಗಿದೆ. ಬನಾರಸ್ ಲೋಕೋಮೋಟೀವ್ ವರ್ಕ್ಸ್ (Banaras Locomotive Campus) ಕ್ಯಾಂಪಸ್‌ನಲ್ಲಿ ಸಂತ್ರಸ್ಥೆ ಬಾಲಕಿಯನ್ನು ಆಕೆಯ ಮಾರ್ಷಿಯಲ್ ಆರ್ಟ್ಸ್ ತರಬೇತುದಾರನೇ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ಥೆ ಮಾಂಡುಅಡಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದ್ದು, ಬಳಿಕ ಆರೋಪಿ ಮಾರ್ಷಿಯಲ್ ಆರ್ಟ್ಸ್ ತರಬೇತುದಾರನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಆರೋಪಿ ತರಬೇತುದಾರನ ವಿರುದ್ಧ ಸೆಕ್ಷನ್ 376 ಕಾಯ್ದೆಯಡಿ ಹಾಗೂ ಎಸ್‌ಸಿ / ಎಸ್‌ಟಿ ಕಾಯ್ದೆಯಡಿ (SC / ST Act) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದೂ ವರದಿಯಾಗಿದೆ.
ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆ ಉತ್ತರ ಪ್ರದೇಶದ ಸೋನಭದ್ರ (Sonbhadra) ಜಿಲ್ಲೆಗೆ ಸೇರಿದವಳಾಗಿದ್ದು, ಆಕೆ ತನ್ನ ಗೆಳತಿಯರ ಜತೆಗೆ ವಾರಾಣಸಿ ಮಾಂಡುಅಡಿ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಆರೋಪಿಯನ್ನು ವಾರಾಣಸಿ ಜಿಲ್ಲೆಯ ಕಂಡ್ವಾ ಪ್ರದೇಶದ ವಿನೋದ್ ವಿಶ್ವಕರ್ಮ ಎಂದು ಗುರುತಿಲಾಗಿದೆ. ತನ್ನ ಸ್ವಯಂ ರಕ್ಷಣೆಗಾಗಿ ಬಾಲಕಿ ಕಳೆದ 1 ತಿಂಗಳಿಂದ ಮಾರ್ಷಿಯಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದರು ಎಂದೂ ವರದಿಗಳು ಹೇಳುತ್ತವೆ.
ಇದನ್ನು ಓದಿ: Pune Crime: ಯುವತಿ ಮೇಲೆ ಲೈಂಗಿಕ ದೌರ್ಜನ್ಯ; ಫುಡ್ ಡೆಲಿವರಿ ಏಜೆಂಟ್ ಬಂಧನ
ಬಾಲಕಿ ನೀಡಿರುವ ದೂರಿನಲ್ಲಿ ಏನಿದೆ..?
ವಿನೋದ್ ವಿಶ್ವಕರ್ಮ ಅವರು ಸೋಮವಾರ ಸಂಜೆ 6: 30ಕ್ಕೆ ಬನಾರಸ್ ಲೋಕೋಮೋಟೀವ್ ವರ್ಕ್ಸ್ ಕ್ಯಾಂಪಸ್‌ನ ಸೂರ್ಯ ಸರೋವರದ ಬಳಿ ಸಂಜೆ 6:30ರ ವೇಳೆ ತನಗೆ ಹಾಗೂ ಇಬ್ಬರು ಇತರೆ ವಿದ್ಯಾರ್ಥಿಗಳಿಗೆ ಮಾರ್ಷಿಯಲ್ ಆರ್ಟ್ಸ್ ತರಬೇತಿ ನೀಡುತ್ತಿದ್ದರು. ಆದರೆ, ಬಳಿಕ ಮಳೆ ಆರಂಭವಾದ ಹಿನ್ನೆಲೆ ತರಬೇತುದಾರ ಇತರೆ ವಿದ್ಯಾರ್ಥಿಗಳಿಗೆ ಮನೆಗೆ ಹೋಗಲು ಹೇಳಿದರು. ಹಾಗೂ, ತನ್ನನ್ನು ಅವರೇ ಮನೆಗೆ ಡ್ರಾಪ್ ಕೊಡುವುದಾಗಿ ಹೇಳಿದರು ಎಂದು ಸಂತ್ರಸ್ಥೆ ಬಾಲಕಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ನಂತರ, ಸಂಜೆ 7:30 ರ ವೇಳೆಗೆ, ವಿನೋದ್ ತನ್ನನ್ನು ಸರೋವರದ ಬಳಿಯ ಪೊದೆಯೊಂದರ ಹಿಂದೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದರು. ಇದರಿಂದ ಗಾಬರಿಗೊಂಡ ಬಾಲಕಿ, ಅತ್ಯಚಾರದ ಬಳಿಕ ಮನೆಗೆ ಹೋಗಿದ್ದಾರೆ. ಅಲ್ಲದೆ, ತನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಆದರೂ, ಧೈರ್ಯ ತೆಗೆದುಕೊಂಡು ವಕೀಲರೊಬ್ಬರನ್ನು ಸಂಪರ್ಕಿಸಿದೆ. ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಎಫ್‌ಐಆರ್ (FIR) ಸಲ್ಲಿಸಿದೆ ಎಂದೂ ಸಂತ್ರಸ್ಥೆ ಹೇಳಿಕೊಂಡಿದ್ದಾಳೆ.
ಇನ್ನು, ಅತ್ಯಾಚಾರ ಆರೋಪಕ್ಕೆ ಸಂಬಂಧ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ‘’ಎಫ್‌ಐಆರ್ ಆಧಾರದ ಮೇಲೆ ವಾರಾಣಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ’’ ಎಂದು ಮಾಂಡುಅಡಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ರಾಜೀವ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: Uttar Pradesh: ಫಲಿಸಲಿಲ್ಲ ಚಿಕಿತ್ಸೆ; ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ದಲಿತ ಬಾಲಕಿ ಸಾವು
ನಾವು ಟ್ರೈನಿಂಗ್ ಕ್ಯಾಂಪ್ ನಡೆಸುತ್ತಿರಲಿಲ್ಲ..!
ಆದರೆ, ಅತ್ಯಾಚಾರ ಆರೋಪಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಿದ ಬನಾರಸ್ ಲೋಕೋಮೋಟೀವ್ ವರ್ಕ್ಸ್ ವಕ್ತಾರ ರಾಜೇಶ್ ಕುಮಾರ್, ಬನಾರಸ್ ಲೋಕೋಮೋಟೀವ್ ವರ್ಕ್ಸ್ ನಮ್ಮ ಕ್ಯಾಂಪಸ್‌ನಲ್ಲಿ ಯಾವುದೇ ತರಬೇತಿ ಕ್ಯಾಂಪ್ ಅನ್ನು ನಡೆಸುತ್ತಿಲ್ಲ. ಈ ಘಟನೆ ಬಗ್ಗೆ ಬನಾರಸ್ ಲೋಕೋಮೋಟೀವ್ ವರ್ಕ್ಸ್ ಆಡಳಿತ ಈ ಕುರಿತು ಎಚ್ಚೆತ್ತುಕೊಂಡಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ, ಈ ಕ್ಯಾಂಪಸ್‌ನಲ್ಲಿರುವ ಹಾಗೂ ಘಟನೆ ವರದಿಯಾಗಿರುವ ಸೂರ್ಯ ಸರೋವರದ ಬಳಿ ಹೊರಗಿನವರು ಬೆಳಗ್ಗೆ ವಾಕ್ ಮಾಡಲು ಹಾಗೂ ಸಂಜೆ ವ್ಯಾಯಾಮ ಮಾಡಲು ಬರುತ್ತಾರೆ ಎಂದೂ ರಾಜೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.