ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.14) : ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸಲು ಬೆಳೆಸಿದ್ದ ಅಡಿಕೆ ಸಸಿಗಳನ್ನು ಕಡಿದು ನಾಶ ಮಾಡಿದ ಕಿಡಿಗೇಡಿಗಳು. 200ಕ್ಕೂ ಅಧಿಕ ಅಡಿಕೆ ಸಸಿಗಳ ನಾಶದಿಂದ ಕಂಗಾಲಾದ ದಿಟ್ಟ ಮಹಿಳೆಯ ಜೀವನ. ಆಕೆಯು ಪಟ್ಟ ಕಷ್ಟವನ್ನು ಕೇಳಿದ್ರೆ ಎಂಥವರಿಗಾದರೂ ಕಣ್ಣಂಚಿನಲ್ಲೂ ನೀರು ಬರೋದು ಗ್ಯಾರಂಟಿ. ಅಷ್ಟಕ್ಕೂ ಆ ಮಹಿಳೆಗೆ ಆಗಿರೋ ನೋವಾದ್ರು ಏನು ಅಂತೀರಾ ಮುಂದೆ ಓದಿ.
ಬೆಳೆ ವಿಮೆ ತುಂಬಿದ್ದು ಹೆಕ್ಟೇರ್‌ಗೆ 2,500, ಪರಿಹಾರ ಬಂದಿದ್ದು 700 ರೂ: ಕಂಗಾಲಾದ ಅನ್ನದಾತ..!
ಶ್ರಮವಹಿಸಿ ಬೆಳೆಸಿದ್ದ ಅಡಿಕೆ ಫಸಲಿಗೆ ಬರ್ತಿದ್ದಸಸಿಗಳನ್ನು ನೆಲಸಮ ಕಡಿದು ರಾಶಿ ಹಾಕಿರೋದು ಒಂದ್ಕಡೆಯಾದ್ರೆ, ತಮ್ಮ ಜಮೀನಿನಲ್ಲಿದ್ದ ಅಡಿಕೆ ಮರಗಳನ್ನು ದುಷ್ಕರ್ಮಿಗಳು ಈ ರೀತಿ ಮಾಡಿ ಬಿಟ್ರಲ್ಲ ಎಂದು ನೋವಿನಿಂದ ಕುಸಿದು ಹೋಗಿದ್ದಾಳೆ ಆ ರೈತ ಮಹಿಳೆ. ಈ ದೃಶ್ಯಗಳಿಗೆ ಸಾಕ್ಷಿ ಯಾಗಿದ್ದು, ಚಿತ್ರದುರ್ಗ(Chitradurga) ಜಿಲ್ಲೆ ಹೊಳಲ್ಕೆರೆ(holalkere) ತಾಲ್ಲೂಕಿನ ಕುಡಿನೀರುಕಟ್ಟೆ(Kudineeru Katte) ತಾಂಡ ಗ್ರಾಮ. ಹೌದು ತನ್ನ ಗಂಡ ತೀರಿದ ಬಳಿಕ ಸೀತಾಭಾಯಿ(SeetaBhayi) ಸ್ವಂತ ಬಲದಿಂದ ಮಕ್ಕಳನ್ನು ಸಾಕಿ ಸಲುಹಿ, ಜಮೀನಿನಲ್ಲಿ ಒಂದಷ್ಟು ಅಡಿಕೆ ಸಸಿಗಳನ್ನು ಬೆಳೆಸುವ ಮೂಲಕ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವ ದಿಟ್ಟ ತನ ಮೆರೆದಿದ್ದರು. ಇವರ ಏಳಿಗೆಯನ್ನು ಸಹಿಸಲಾಗದ ಕಿಡಿಗೇಡಿಗಳು ಸುಮಾರು ೨೦೦ಕ್ಕೂ ಅಧಿಕ ಅಡಿಕೆ ಸಸಿಗಳನ್ನು ಕಡಿದು ಹಾಕುವ ಮೂಲಕ ಲಕ್ಷಾಂತರ ಮೌಲ್ಯದ ಅಡಿಕೆ ಬೆಳೆ ನಾಶ ಮಾಡಿದ್ದಾರೆ. ಅಂತವರನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಲಿ ಎಂಬುದು ಜಮೀನ ಮಾಲೀಕರ ಆಗ್ರಹ
ಹಾಸನ: ರಸ್ತೆ ನಿರ್ಮಾಣಕ್ಕೆ ಹಾಕಿದ ಮಣ್ಣು ರೈತರ ಹೊಲಕ್ಕೆ: ನೂರಾರು ಎಕರೆ ಬೆಳೆ ನಾಶ
ಏಕಾಏಕಿ ದುಷ್ಕರ್ಮಿಗಳು ಎರಡು ಎಕರೆ ಜಮೀನಿಗೆ ರಾತ್ರೋರಾತ್ರಿ ನುಗ್ಗಿ ಅಡಿಕೆ ಸಸಿಗಳನ್ನು ಕಡಿದು ನೆಲಸಮ ಮಾಡಿರೋದು ನೋವಿನ ಸಂಗತಿ. ಅಡಿಕೆ ಸಸಿಗಳನ್ನು ಬೆಳೆಸುವ ವೇಳೆ ಸೀತಾಭಾಯಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಜೀವನ ಸಾಗಿಸಲೆಂದೇ ಕೂಲಿನಾಲಿ ಮಾಡಿ ಅಡಿಕೆ ತೋಟವನ್ನು ಮಾಡಿದ್ರು. ಆದ್ರೆ ಕಿಡಿಗೇಡಿಗಳು ಅವರ ಬೆಳವಣಿಗೆಯನ್ನು ಸಹಿಸಲಾಗದೇ ಈ ರೀತಿ ದುಷ್ಕೃತ್ಯ ಮೆರೆದಿದ್ದಾರೆ. ಈ ದುಷ್ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ಆರೋಪಿಗಳನ್ನುಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು. ಆಮೂಲಕ ರೈತ ಮಹಿಳೆಗೆ ನ್ಯಾಯ ಒದಗಿಸಬೇಕೆಂಬುದು ಸ್ಥಳೀಯರ ಒತ್ತಾಯ
ಒಟ್ಟಾರೆಯಾಗಿ ಜೀವನಕ್ಕಾಗಿ ಕಷ್ಟಪಟ್ಟು ಜಮೀನಿನಲ್ಲಿ ನಾಲ್ಕಾರು ಅಡಿಕೆ ಸಸಿಗಳನ್ನು ಬೆಳೆಸಿದ್ರೆ ಕಿಡಿಗೇಡಿಗಳು ಅವನ್ನು ನೆಲಸಮ ಮಾಡಿರೋದು ಖಂಡನೀಯ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ದುಷ್ಕರ್ಮಿಗಳ ಎಡೆಮುರಿ ಕಟ್ಟಿ ರೈತ ಮಹಿಳೆಗೆ ನ್ಯಾಯ ಒದಗಿಸಲಿ.