ಇಂಟರ್‌ನೆಟ್ ಬಳಕೆದಾರರನ್ನು ಟಾರ್ಗೆಟ್ ಮಾಡಿ ಆನ್ ಲೈನ್ನಲ್ಲಿ ವೇಶ್ಯಾವಾಟಿಕೆ ಹೆಸರಿನಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ದಂಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು, (ಫೆ.04): ಹನಿಟ್ರ್ಯಾಪ್ ಮಾಡುತ್ತಿದ್ದ ಖತರ್ನಾಕ್ ದಂಪತಿಯನ್ನು ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.
ಆನ್ ಲೈನ್ನಲ್ಲಿ ವೇಶ್ಯಾವಾಟಿಕೆಗೆ ಯುವತಿಯರನ್ನ ಕಳಿಸುವುದಾಗಿ ದಂಪತಿ ಪೊಸ್ಟ್ ಹಾಕುತ್ತಿದ್ದು, ನಂಬರ್ ಗಳು ಹಾಗೂ ಫೋಟೊಗಳನ್ನ ಅಪ್ಲೋಡ್ ಮಾಡುತ್ತಿದ್ದರು.
undefined
ತೀಟೆ ತಿರಿಸಿಕೊಂಡು ವರಸೆ ಬದಲಿಸಿದ: ವಿದ್ಯಾರ್ಥಿನಿ ಜತೆ ಲೆಕ್ಚರರ್ ಪುತ್ರನ ಕಾಮಪುರಾಣ
ನಂತರ ಬಂದ ಗಿರಾಕಿಗಳಿಂದ ಹಣವನ್ನು ಪಡೆದು ಯುವತಿಯರನ್ನ ಕಳಿಸುತ್ತಿದ್ದರು. ಬಳಿಕ ಆ ಸ್ಥಳಕ್ಕೆ ಹೋಗಿ ಗಿರಾಕಿಗಳಿಗೆ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು.
ದೂರುದಾರನಿಂದ 94000 ಹಣವನ್ನ ಗೂಗಲ್ ಪೇ ಮಾಡಿಸಿಕೊಂಡಿದ್ದ ಕಿರಣ್ ರಾಜ್ ಮತ್ತು ಭಾಸ್ವತಿ ದತ್ತಾ ನಂತರ 150 ಗ್ರಾಂ ಚಿನ್ನಾಭರಣವನ್ನ ದೋಚಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.