ಪ್ರತಿ ತಿಂಗಳು ಕೊಡಬೇಕಿದ್ದ ಹಣದಲ್ಲಿ ಕೆಲವೊಬ್ಬರಿಗೆ ನೀಡಿದ್ದು, ಇನ್ನೂ ಕೆಲವರಿಗೆ ನೀಡದೇ ಸ್ಕೀಂದಲ್ಲಿ ಸಂಗ್ರಹಿಸಿದ ಲಕ್ಷಾಂತರ ಹಣ ತಗೆದುಕೊಂಡು ಪರಾರಿಯಾಗಿದ್ದ ಬಂಧಿತ ಆರೋಪಿಗಳು.
ಜಮಖಂಡಿ(ಸೆ.10): ನಗರದಲ್ಲಿ ಸ್ಕೀಂ ಹಣ ಸಂಗ್ರಹಿಸಿ ಜನರಿಗೆ ಮೋಸ ಮಾಡಿ ಲಕ್ಷಾಂತರ ಹಣ ತಗೆದುಕೊಂಡು ಪರಾರಿಯಾಗಿದ್ದ ದಂಪತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಮೈತ್ರಿಗಲ್ಲಿಯ ನಿವಾಸಿ ಚಂದ್ರಿಕಾ ನಾರಾಯಣ ಯಾದವ (47), ಗಂಡ ನಾರಾಯಣ ವಸಂತ ಯಾದವ (48) ಎಂಬ ದಂಪತಿ ಕಳೆದ 4 ವರ್ಷದಿಂದ ಬಾಡಿಗೆ ಮನೆಯಲ್ಲಿದ್ದು, ಜನರಲ್ಲಿ ಬಿಸಿ (ಸ್ಕೀಂ) ಹಣದ ಪದ್ಧತಿ ಪರಿಚಯಿಸಿ ₹4-5 ಸಾವಿರ ಹಣ ವಸೂಲಿ ಮಾಡಿಕೊಂಡು ಹಣ ವಸೂಲಿ ಮಾಡುತ್ತಿದ್ದರು. ಪ್ರತಿ ತಿಂಗಳು ಕೊಡಬೇಕಿದ್ದ ಹಣದಲ್ಲಿ ಕೆಲವೊಬ್ಬರಿಗೆ ನೀಡಿದ್ದು, ಇನ್ನೂ ಕೆಲವರಿಗೆ ನೀಡದೇ ಸ್ಕೀಂದಲ್ಲಿ ಸಂಗ್ರಹಿಸಿದ ಲಕ್ಷಾಂತರ ಹಣ ತಗೆದುಕೊಂಡು ಪರಾರಿಯಾಗಿದ್ದರು.
undefined
ಬಾಗಲಕೋಟೆ ಪೋಲಿಸರ ಕಾರ್ಯಾಚರಣೆ: ಬೈಕ್ ಕದಿಯುತ್ತಿದ್ದ ಖತರ್ನಾಕ್ ಖದೀಮರ ಬಂಧನ
ಈ ಘಟನೆಯ ಬಗ್ಗೆ ವಿದ್ಯಾ ಹೆರಕಲ್ ಎಂಬುವರು ಪೋಲೀಸರಿಗೆ ದೂರು ನೀಡಿ, ಪ್ರಕರಣ ದಾಖಲಿಸಿದ ಆಧಾರದ ಮೇಲೆ ಬಿಸಿ ಹಣವನ್ನು ತಗೆದುಕೊಂಡು ತಮ್ಮ ಸ್ವಂತಕ್ಕೆ ಮತ್ತು ಗಂಡನ ಮೋಜು-ಮಸ್ತಿಗೆ ಬಳಸಿಕೊಂಡಿದ್ದು, ಹುಬ್ಬಳ್ಳಿ-ಧಾರವಾಡ ತಮ್ಮ ಸಂಬಂಧಿಕರ ಮನೆಗೆ ಹೋಗಿ ತಲೆಮರೆಸಿಕೊಂಡು ಪರಾರಿಯಾಗಿದ್ದನ್ನು ಖಚಿತ ಪಡಿಸಿಕೊಂಡ ಶಹರ ಪೋಲಿಸರ ತಂಡ ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ. ಶಹರ ಠಾಣೆ ಎಸೈ ಜೆ.ಟಿ.ಮಾನೆ, ಎಎಸೈ ಎಚ್.ಎಸ್.ಮೆಂಡಿಗಾರ, ಪ್ರಕಾಶ ಕಾಖಂಡಕಿ, ಮಲ್ಲು ಕೋಲಾರ, ಪರಸು ಮಾಳಿ ತನಿಖಾ ತಂಡ ತನಿಖೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.