
ಉಪ್ಪಿನಂಗಡಿ(ನ.20): ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕನನ್ನು ಸಹ ಪ್ರಯಾಣಿಕರ ಸಹಕಾರದಿಂದ ಪೊಲೀಸರಿಗೊಪ್ಪಿಸಿದ ಘಟನೆ ಶನಿವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ನೆಲ್ಯಾಡಿಯಿಂದ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯ ಬಳಿ ನಿಂತಿದ್ದ ಪೆರ್ನೆ ಗ್ರಾಮದ ನಿವಾಸಿ ಅಶ್ರಫ್ (45) ಎಂಬಾತ ಲೈಂಗಿಕ ಕಿರುಕುಳ ನೀಡುತ್ತಿದ್ದನೆಂದು ಆಪಾದಿಸಲಾಗಿದೆ. ಲೈಂಗಿಕ ಕಿರುಕುಳದಿಂದ ಕಂಗೆಟ್ಟವಿದ್ಯಾರ್ಥಿನಿ ಕಾಮುಕನ ಕೃತ್ಯದ ಬಗ್ಗೆ ಬಸ್ ಕಂಡೆಕ್ಟರ್ ಬಳಿ ದೂರಿದಾಗ ಬಸ್ ಕಂಡೆಕ್ಟರ್ ಹಾಗೂ ಸಹಪ್ರಯಾಣಿಕರು ಆರೋಪಿ ಅಶ್ರಫ್‌ನನ್ನು ಹಿಡಿದು ಪೊಲೀಸರಿಗೊಪ್ಪಿಸಿದರು.
ಇದು ನಿಜಕ್ಕೂ ದುರಂತ: ಬೆಂಗಳೂರಿನಲ್ಲಿ ಬಾಂಬೆ ಮಾದರಿಯ ವೇಶ್ಯಾವಾಟಿಕೆ
ಆರೋಪಿ ಅಶ್ರಫ್ ವಿವಾಹಿತನಾಗಿದ್ದು ಮೂವರು ಮಕ್ಕಳ ತಂದೆಯಾಗಿದ್ದಾನೆ. ವೃತ್ತಿಯಲ್ಲಿ ಲಾರಿ ಚಾಲಕನಾಗಿರುವ ಈತ ಬಸ್‌ನಲ್ಲಿ ಸಹಪ್ರಯಾಣಿಕರ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದನಾದರೂ, ಬಸ್ಸನ್ನು ನೇರವಾಗಿ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ ಕಾರಣ ಆರೋಪಿಯನ್ನು ಸುಲಲಿತವಾಗಿ ಪೊಲೀಸರು ವಶಕ್ಕೆ ಪಡೆಯಲು ಸಾಧ್ಯವಾಯಿತು. ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ