Bengaluru: ಟೆಕ್ಕಿಗೆ ಯುವತಿಯ ಬೆತ್ತಲೆ ವಿಡಿಯೋ ಕಾಲ್‌ ಆಮಿಷ: 1.1 ಕೋಟಿ ರೂ. ವಂಚನೆ ಮಾಡಿದ ನಕಲಿ 'ವಧು'!

Published : Jul 31, 2023, 10:16 PM IST
Bengaluru: ಟೆಕ್ಕಿಗೆ ಯುವತಿಯ ಬೆತ್ತಲೆ ವಿಡಿಯೋ ಕಾಲ್‌ ಆಮಿಷ: 1.1 ಕೋಟಿ ರೂ. ವಂಚನೆ ಮಾಡಿದ ನಕಲಿ 'ವಧು'!

ಸಾರಾಂಶ

ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಸ್ನೇಹ ಬೆಳೆಸಿದ ಯುವತಿಯೊಬ್ಬಳು ಬ್ರಿಟನ್‌ನಲ್ಲಿರೋ ಬೆಂಗಳೂರು ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ 1.1 ಕೋಟಿ ರೂಪಾಯಿ ಸುಲಿಗೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು (ಜುಲೈ 31, 2023): ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ವಂಚನೆ ಪ್ರಕರಣಗಳು ಹೆಚ್ಚಾಗ್ತಿದೆ. ಅಲ್ಲದೆ, ಆನ್‌ಲೈನ್‌ನಲ್ಲಿ ಬೆತ್ತಲೆ ವಿಡಿಯೋ ಕಾಲ್‌ ಮೂಲಕ ವಂಚಿಸುವ ಕೇಸ್‌ಗಳೂ ಆಗಾಗ್ಗೆ ಬೆಳಕಿಗೆ ಬರುತ್ತಿದೆ. ಇದೇ ರೀತಿ, ಬೆಂಗಳೂರಿನಲ್ಲಿ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. 

ಹೌದು, ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಸ್ನೇಹ ಬೆಳೆಸಿದ ಯುವತಿಯೊಬ್ಬಳು ಬ್ರಿಟನ್‌ನಲ್ಲಿರೋ ಬೆಂಗಳೂರು ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ 1.1 ಕೋಟಿ ರೂಪಾಯಿ ಸುಲಿಗೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ವಿಡಿಯೋ ಕಾಲ್‌ನಲ್ಲಿ ಬೆತ್ತಲೆಯಾದ ಯುವತಿ ಆಮಿಷವೊಡ್ಡಿ ಕೋಟಿ ರೂ. ಗೂ ಹೆಚ್ಚು ಹಣ ಸುಲಿಗೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಈ ಸಂಬಂಧ ತನಿಖೆ ಕೈಗೆತ್ತಿಕೊಂಡ ಬೆಂಗಳೂರಿನ ವೈಟ್‌ಫೀಲ್ಡ್ ಸಿಇಎನ್ ಕ್ರೈಂ ಪೊಲೀಸರು ಮಹಿಳೆಯ ಖಾತೆಯಲ್ಲಿದ್ದ 84 ಲಕ್ಷ ರೂ.ಗಳನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನು ಓದಿ: ತಂದೆಯ ಸಹೋದ್ಯೋಗಿಗಳಿಂದ ಅಪ್ರಾಪ್ತ ಸೋದರಿಯರ ಗ್ಯಾಂಗ್‌ ರೇಪ್: ಗರ್ಭಿಣಿಯಾದ ಬಾಲಕಿಯರು

ಯುನೈಟೆಡ್ ಕಿಂಗ್‌ಡಂನಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಕೆ.ಆರ್‌. ಪುರಂ ನಿವಾಸಿ 41 ವರ್ಷದ ವ್ಯಕ್ತಿ ತರಬೇತಿ ಉದ್ದೇಶಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಇವರು ಮದುವೆಯಾಗಲು ಬಯಸಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡಿದ್ದರು. ಇದನ್ನು ನೋಡಿದ ನಕಲಿ ಪ್ರೊಫೈಲ್ ಹೊಂದಿರುವ ಮಹಿಳೆಯೊಬ್ಬರು ವೆಬ್‌ಸೈಟ್‌ನಲ್ಲಿ ಆತನೊಂದಿಗೆ ಸ್ನೇಹ ಬೆಳೆಸಿದರು. 

ಕೆಲವು ದಿನಗಳ ಕಾಲ ಸಂದೇಶಗಳನ್ನು ವಿನಿಮಯ ಮಾಡಿಕೊಂಡ ನಂತರ, ಇಬ್ಬರೂ ತಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ. ಮಹಿಳೆ ಆತನನ್ನು ಮದುವೆಯಾಗಲು ಆಸಕ್ತಿ ತೋರಿಸಿದರು ಮತ್ತು ತನ್ನ ತಂದೆ ಸತ್ತಿದ್ದಾರೆ ಹಾಗೂ ತನ್ನ ತಾಯಿಯೊಂದಿಗೆ ವಾಸಿಸುತ್ತಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ಜುಲೈ 2 ರಂದು ಆಕೆ ಆತನಿಗೆ ಫೋನ್ ಮೂಲಕ ಕರೆ ಮಾಡಿ ತನ್ನ ತಾಯಿಯ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಿ ಆತನಿಂದ 1,500 ರೂ. ಹಣ ಪಡೆದುಕೊಂಡಿದ್ದಾಳೆ.

ಇದನ್ನೂ ಓದಿ: ಗೋಲ್ಡ್‌ ಮೆಡಲಿಸ್ಟ್‌ ಡಾಕ್ಟರ್‌ಗೆ ಐಸಿಸ್‌ ನಂಟು! ಭಾಷಾ ನಿಪುಣ, 18 ಪುಸ್ತಕಗಳ ಲೇಖಕ ಅರೆಸ್ಟ್

ನಂತರ, ಜುಲೈ 4 ರಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಆಕೆ ವಿಡಿಯೋ ಕಾಲ್ ಮಾಡಿದಳು. ಟೆಕ್ಕಿ ಜೊತೆ ಮಾತನಾಡುತ್ತಿದ್ದಂತೆ ಬಟ್ಟೆ ತೆಗೆದು ಆತನಿಗೆ ತಿಳಿಯದಂತೆ ಕಾಲ್‌ ರೆಕಾರ್ಡ್ ಮಾಡಿದ್ದಾಳೆ. ನಂತರ ಅವಳು ವಿಡಿಯೋ ಕ್ಲಿಪ್ ಅನ್ನು ಅವನಿಗೆ ಕಳುಹಿಸಿದ್ದು, ಅದನ್ನು ಅವನ ಹೆತ್ತವರೊಂದಿಗೆ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಇದಕ್ಕೆ ಬೆದರಿದ ಆತ, ಮಹಿಳೆ ನೀಡಿದ ಎರಡು ಬ್ಯಾಂಕ್ ಖಾತೆಗಳು ಮತ್ತು ನಾಲ್ಕು ಮೊಬೈಲ್ ಸಂಖ್ಯೆಗಳಿಗೆ 1,14,00,000 ರೂ. ಹಣ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಆಕೆಯ ಖಾತೆಗೆ ಹಣ ಪಾವತಿಸಲು ಆರಂಭಿಸಿದ ನಂತರವೇ ಆಕೆಯ ನಿಜವಾದ ಹೆಸರು ತಿಳಿಯಿತು ಎಂದೂ ಟೆಕ್ಕಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಹೆಚ್ಚಿನ ಹಣಕ್ಕಾಗಿ ಆಕೆ ಬ್ಲ್ಯಾಕ್‌ಮೇಲ್‌ ಮಾಡುವುದನ್ನು ಮುಂದುವರಿಸಿದ್ದರಿಂದ ಆತ ಪೊಲೀಸ್ ದೂರು ದಾಖಲಿಸಿದ್ದಾನೆ ಎಂದು ವರದಿಯಾಗಿದೆ. ಇನ್ನು, ಈ ಸಂಬಂಧ ಬೆಂಗಳೂರು ಪೊಲೀಸ್‌ ಅಧಿಕಾರಿಗಳು ಮಾತನಾಡಿದ್ದು, "ನಾವು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ ಮತ್ತು ಆರೋಪಿಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಅವಳು ಜನರಿಂದ ಹಣ ವಸೂಲಿ ಮಾಡುವ ಏಕೈಕ ಉದ್ದೇಶದಿಂದ ನಕಲಿ ಹೆಸರಿನೊಂದಿಗೆ ಪ್ರೊಫೈಲ್ ಅನ್ನು ರಚಿಸಿರಬೇಕು" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: 90 ದೇಶಗಳ ಜೈಲಿನಲ್ಲಿದ್ದಾರೆ 8,330 ಭಾರತೀಯ ಕೈದಿಗಳು: ಗಲ್ಫ್‌ ದೇಶಗಳ ಜೈಲಲ್ಲಿ ಹೆಚ್ಚು ಕೈದಿಗಳು

ಅಲ್ಲದೆ, "ನಾವು ಫಲಾನುಭವಿಗಳ ಖಾತೆಗಳಲ್ಲಿ ಸುಮಾರು 84 ಲಕ್ಷ ರೂ.ಗಳನ್ನು ಫ್ರೀಜ್ ಮಾಡಿದ್ದೇವೆ. ಅವಳು 30 ಲಕ್ಷ ರೂ. ಹಣ ಬಳಸಿದ್ದಾಳೆ. ಜನರು ಆನ್‌ಲೈನ್‌ನಲ್ಲಿ ಯಾವುದೇ ವ್ಯಕ್ತಿಯೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಬೇಕು. ಯಾರನ್ನಾದರೂ ಭೇಟಿ ಮಾಡುವ ಮೊದಲು, ಅಂತಹ ಕರೆಗಳನ್ನು ಮನರಂಜನೆ ಮಾಡಬಾರದು. ಕರೆ ಮಾಡಿದವರು ಅನುಚಿತವಾಗಿ ವರ್ತಿಸಿದ ಕ್ಷಣದಲ್ಲಿ ಅವರು ಸಂಪರ್ಕ ಕಡಿತಗೊಳಿಸಬೇಕು ಎಂದೂ ಉಪ ಪೊಲೀಸ್ ಆಯುಕ್ತ (ವೈಟ್‌ಫೀಲ್ಡ್) ಎಸ್. ಗಿರೀಶ್ ಹೇಳಿದ್ದಾರೆ. 
ಇದನ್ನೂ ಓದಿ: ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್‌ ಅವರ ಆಧಾರ್‌ ಕಾರ್ಡ್‌ಗಳನ್ನೇ ತಿರುಚಿ ದುರುಪಯೋಗ ಮಾಡ್ಕೊಂಡ ಭೂಪ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ