Blackmail : ಒಳಗೆ ಲೇಡಿ ಡಾಕ್ಟರ್ ಜತೆ ವಿದೇಶಿ ಬಾಯ್‌ಫ್ರೆಂಡ್,  ಹೊರಗೆ ಕೇಡಿ ಲೇಡಿ ಕಾಂಪೌಂಡರ್!

By Suvarna News  |  First Published Dec 7, 2021, 8:45 PM IST

* ಈಕೆ ಖತರ್ ನಾಕ್ ಕಾಂಪೌಂಡರ್
* ತಾನು ಕೆಲಸ ಮಾಡುತ್ತಿದ್ದ ಜಾಗದ ವೈದ್ಯೆಯ ಸೆರಸ ಸೆರೆಹಿಡಿದುಕೊಂಡಳು
* ಗೆಳೆಯನ ಮೂಲಕ ಬ್ಲಾಕ್ ಮೇಲ್ ಮಾಡಿಸಿ  ಹಣ ದೋಚಲು ಮುಂದಾಗಿದ್ದಳು
* ಪೊಲೀಸರು ಮಾಡಿದ ಮಾಸ್ಟರ್ ಪ್ಲಾನ್ ಗೆ ಬಲೆಗೆ ಬಿದ್ದಳು


ಮುಂಬೈ (ಡಿ. 07) ಈತ ಖತರ್‌ನಾಕ್ ಕಾಂಪೌಂಡರ್ ಜೋಡಿ. ಹಣ ಮಾಡಲು ಈಕೆ ಮಾಸ್ಟರ್ ಪ್ಲಾನ್ (Blackmail) ಮಾಡಿದ್ದಳು. ತಾನು ಕೆಲಸ ಮಾಡುತ್ತಿದ್ದ  ವೈದ್ಯೆ (Doctor)ಮತ್ತು ಆಕೆಯ ಗೆಳೆಯ ಖಾಸಗಿ ಸ್ಥಿತಿಯಲ್ಲಿ ಇದ್ದಾಗ ವಿಡಿಯೋ ಮಾಡಿ ಇಟ್ಟುಕೊಂಡು ಅದನ್ನೇ ಬ್ಲಾಕ್ ಮೇಲ್ ಮಾಡಲು ಬಳಸಿಕೊಂಡಿದ್ದಾರೆ. . ಐದು ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದಾರೆ. 

ಮಹಾರಾಷ್ಟ್ರದ ರಾಜಧಾನಿ ಮುಂಬೈನಿಂದ (Mumbai)ಪ್ರಕರಣ ವರದಿಯಾಗಿದೆ.  ಲೇಡಿ ಡಾಕ್ಟರ್ ಮತ್ತು ಮತ್ತು ಆಕೆಯ ಗೆಳೆಯ ಖಾಸಗಿ ಕ್ಷಣಗಳನ್ನು ಕಳೆದಿರುವುದನ್ನು ತನ್ನ ಸ್ಪೈ ಕ್ಯಾಮರಾ ಬಳಸಿ ರೆಕಾರ್ಡ್ ಈ ಲೇಡಿ  ಕಾಂಪೌಂಡರ್ ರೆಕಾರ್ಡ್ ಮಾಡಿಕೊಂಡಿದ್ದಾಳೆ.  ರೇಕಾರ್ಡ್ ಮಾಡಿಕೊಂಡಿದ್ದನ್ನು ತನ್ನ ಗೆಳೆಯನಿಗೆ ನೀಡಿದ್ದಾಳೆ. ಕಳೆದ ನವೆಂವರ್ ನಲ್ಲಿ ಈ ಪ್ರಕರಣ ನಡೆದಿದೆ.  

Tap to resize

Latest Videos

undefined

ಕೊಲೆ ಮಾಡಿ ಆಕೆಯ ಶವದೊಂದಿಗೆ ಮಲಗಿದ

ವೈದ್ಯೆಗೆ ಈಗಾಗಲೇ ಮದುವೆ ಆಗಿತ್ತು.  ಹಣ ನೀಡದಿದ್ದರೆ ವಿಡಿಯೋವನ್ನು  ನಿಮ್ಮ ಕುಟುಂಬಕ್ಕೆ ಕಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಪೊಲೀಸರು ಹೇಳುವಂತೆ ವೈದ್ಯೆಗೆ  ಪರಪುರುಷನ ಜತೆ ಸಂಬಂಧ ಇತ್ತು. ಓಮಾನ್ ನಿಂದ ಮುಂಬೈಗೆ ಬಂದು ಈಕೆಯ ಕ್ಲಿನಕ್ ಗೆ  ಗೆಳೆಯ ಆಗಾಗ ಭೇಟಿ ನೀಡುತ್ತಿದ್ದ. ಇಬ್ಬರು ಒಂದೇ ಕೋಣೆಯಲ್ಲಿ ಸೇರುವುದು ಅಲ್ಲೆ ಕೆಲಸ ಮಾಡುತ್ತಿದ್ದ ಮಹಿಳಾ ಕಾಂಪೌಂಡರ್ ಗೆ ತಿಳಿದಿತ್ತು. 

ಹಾಗಾಗಿ ಸ್ಪೈ ಕ್ಯಾಮರಾ ಬಳಸುವ ನಿರ್ಧಾರ ಮಾಡಿದ್ದಾಳೆ.  ಒಂದು ದಿನ ಲೇಡಿ ಡಾಕ್ಟರ್ ಮತ್ತು  ಆಕೆಯ ವಿದೇಶಿ ಗೆಳೆಯ  ಸರಸ ಸಲ್ಲಾಪದಲ್ಲಿ ತೊಡಗಿದ್ದ ದೃಶ್ಯಗಳು ರೆಕಾರ್ಡ್ ಆಗಿವೆ.  ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದನ್ನು ತನ್ನ ಗೆಳೆಯನಿಗೆ ನೀಡಿದ ನಂತರ ಬ್ಲಾಕ್ ಮೇಲ್ ಆರಂಭವಾಗಿದೆ.

ಲೇಡಿ ಡಾಕ್ಟರ್ ಅನಿವಾರ್ಯವಾಗಿ ಪೊಲೀಸರನ್ನು ಸಂಪರ್ಕ ಮಾಡಿದ್ದಾಳೆ. ಪೊಲೀಸರು ಸಹ ಮಾಸ್ಟರ್ ಪ್ಲಾನ್ ಮಾಡಿದ್ದು ಹಣ ಕೊಡುತ್ತೇವೆ ಬನ್ನಿ ಎಂದು  ಕರೆಸಿಕೊಂಡಿದ್ದಾರೆ. ಟ್ರಾಪ್ ಮಾಡಿದಾಗ  ಬ್ಲಾಕ್ ಮೇಲ್ ಮಾಡುತ್ತಿದ್ದವ ಸಿಕ್ಕಿಹಾಕೊಕೊಂಡಿದ್ದಾನೆ.  ಮೂಲ ಪತ್ತೆಬ ಹಚ್ಚಿದಾಗ ತನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಲೇಡಿಯೇ ಕೇಡಿ ಎನ್ನುವುದು ಗೊತ್ತಾದೆ.  ದೂರಿನ ಆಧಾರದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.

ಅಮ್ಮನ ಅನೈತಿಕ ಸಂಬಂಧ ಮಗಳ ಬಂಡವಾಳ:  21 ವರ್ಷದ ಮಗಳಿಗೆ ಅಮ್ಮನ ಅನೈತಿಕ ಸಂಬಂಧದ ವಿಚಾರ ಗೊತ್ತಾಗಿದೆ.  ಆದರೆ ಮಗಳು ಇದನ್ನು ದೊಡ್ಡದು ಮಾಡಲು ಹೋಗಿಲ್ಲ. ಬದಲಾಗಿ ಅಮ್ಮನ ಜತೆ ಸಂಬಂಧ ಹೊಂದಿದ್ದ ವ್ಯಕ್ತಿಯ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿಕೊಂಡಿದ್ದಳು.

ತಾಯಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಮಗಳಿಗೆ ಅನುಮಾನ ಬಂದಿದೆ. ತಾಯಿಯ ವಾಟ್ಸಪ್ ಹ್ಯಾಕ್ ಮಾಡಿಕೊಂಡಿದ್ದಾಳೆ. ಅಲ್ಲಿ ರವಾನೆಯಾಗುತ್ತಿದ್ದ ಸಂದೇಶಗಳು ಅನುಮಾನವನ್ನು ಗಟ್ಟಿ ಮಾಡಿದೆ.  ತಾಯಿಯ ವಾಟ್ಸಪ್ ಚಾಟ್ ನಲ್ಲಿ ನಗ್ನ ವಿಡಿಯೋ ಮತ್ತು ಅಶ್ಲೀಲ್ ಚಾಟ್ ಸಿಕ್ಕಿದೆ. ಇದನ್ನೇ ಬಳಸಿಕೊಂಡು ತನ್ನ ಪ್ರಿಯಕರನ ಜತೆಗೂಡಿ ಅಮ್ಮನ ಪ್ರಿಯಕರಿನಗೆ ಬ್ಲಾಕ್ ಮೇಲ್ ಮಾಡಿದ್ದು  15  ಲಕ್ಷ ರೂ. ಗೆ ಬೇಡಿಕೆ  ಇಟ್ಟಿದ್ದಾಳೆ. 

ತನ್ನ ಪ್ರಿಯಕರನ ಮೂಲಕ ಯುವತಿ ಕಾರ್ಯಾಚರಣೆ ನಡೆಸಿದ್ದಾಳೆ. ಈಗ ಹದಿನೈದು ಲಕ್ಷ ನಂತರ ತಿಂಗಳಿಗೆ ಒಂದು ಲಕ್ಷ ರೂ. ನೀಡಬೇಕು ಎಂದು ಮಾತುಕತೆಯನ್ನು ಮಾಡಿಸಿದ್ದಾಳೆ. ಇಲ್ಲವಾದರೆ ವಿಡಿಯೋ ಮತ್ತು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತೇನೆ ಎಂದು ಭಯ ಹುಟ್ಟಿಸಲು ಹೇಳಿದ್ದಾಳೆ.

ಮೊದಲಿಗೆ ಹೆದರಿದ ವ್ಯಕ್ತಿ ತನ್ನ ಕಾರು ಬೈಕ್ ಅಡ ಇಟ್ಟು ಹಣ ತಂದುಕೊಟ್ಟಿದ್ದ. ಇವರ ಬೇಡಿಕೆ ಮುಗಿಯುವ ತರಹ ಕಾಣಲಿಲ್ಲ. ನಂತರ ಆತ ಅನಿವಾರ್ಯವಾಗಿ ಪೊಲೀಸರ ಮೊರೆ ಹೋಗಿದ್ದ. ನಂತರ ತನ್ನ ಗೆಳತಿಯ ಮಗಳೆ ಬ್ಲಾಕ್ ಮೇಲ್ ಮಾಡುತ್ತಿದ್ದುದು ಗೊತ್ತಾಗಿದೆ. 

 

click me!