ಮಧ್ಯರಾತ್ರಿ ಮಹಿಳೆ ಮತ್ತು ಮಕ್ಕಳಿದ್ದ ಮೆನೆಗೆ ನುಗ್ಗಿದ ಆರೋಪದಡಿ ಇನ್ಸ್ಪೆಕ್ಟರ್ ವಿರುದ್ದ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ಬೆಂಗಳೂರು (ಏ.30): ಮಧ್ಯರಾತ್ರಿ ಮಹಿಳೆ ಮತ್ತು ಮಕ್ಕಳಿದ್ದ ಮೆನೆಗೆ ನುಗ್ಗಿದ ಆರೋಪದಡಿ ಇನ್ಸ್ಪೆಕ್ಟರ್ ವಿರುದ್ದ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಸುಬ್ರಮಣ್ಯ ನಗರ ಠಾಣೆ ಇನ್ಸ್ಪೆಕ್ಟರ್ ಶರಣಗೌಡ ವಿರುದ್ದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ದೂರು ಕೊಡಲಾಗಿದೆ. ರಾಜಕುಮಾರ್ ಎಂಬುವರ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಮನೆಯಲ್ಲಿದ್ದ ಹೆಂಡತಿ ಹಾಗೂ ಮಗಳ ಜೊತೆ ಪೊಲೀಸರು ಅಸಭ್ಯ ವರ್ತನೆ ಮಾಡಿದ ಆರೋಪವಿದೆ. ಇದನ್ನ ಪ್ರಶ್ನೆ ಮಾಡಲು ರಾಜಕುಮಾರ್ ಇನ್ಸ್ಪೆಕ್ಟರ್ ಗೆ ಕರೆ ಮಾಡಿದ್ದ. ಈ ವೇಳೆ ರಾಜಕುಮಾರ್ ಗೆ ಯಾವುದರ ಬಗ್ಗೆ ಕಪ್ಲೆಂಟ್ ಆಗಿದೆ ಎಂದು ಇನ್ಸ್ಪೆಕ್ಟರ್ ಮಾಹಿತಿ ನೀಡಿಲ್ಲ. ಮಾತ್ರವಲ್ಲ ಯಾರಿಗೆ ಬೇಕಾದ್ರು ದೂರು ಕೊಡು ಎಂದು ಅವಾಜ್ ಹಾಕಿದ್ದ. ಇದೀಗ ಇನ್ಸ್ಪೆಕ್ಟರ್ ಶರಣಗೌಡ ಹಾಗೂ ರಾಜಕುಮಾರ್ ನಡುವಿನ ಸಂಭಾಷಣೆ ವೈರಲ್ ಆಗಿದೆ.
ತಮ್ಮನ ಪತ್ನಿ-ಪುತ್ರನ ಹತ್ಯೆ: ಆರೋಪಿಗೆ ಜೀವಾವಧಿ ಶಿಕ್ಷೆ
ಕಾರವಾರ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮನ ಪತ್ನಿ ಹಾಗೂ ಪುತ್ರನನ್ನು ಹತ್ಯೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ, 5 ಲಕ್ಷ ರುಪಾಯಿ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ಆದೇಶಿಸಿದೆ.
ಮಗಳ ಕತ್ತು ಹಿಸುಕಿ ಬಾಯಿಗೆ ಟಾಯ್ಲೆಟ್ ಕ್ಲೀನರ್ ಸುರಿದ ಪಾಪಿ ತಂದೆ: ಸಾವು ಬದುಕಿನ ನಡುವೆ
ಅಂಕೋಲಾ ಪಟ್ಟಣದ ಮಠಾಕೇರಿ ನಿವಾಸಿ ಸುಬ್ರಾಯ (ಅಜಯ) ಅಚ್ಯುತ್ ಪ್ರಭುಗೆ ಶಿಕ್ಷೆಯಾಗಿದ್ದು, ಈತ ಪಿತ್ರಾರ್ಜಿತ ಆಸ್ತಿ ಹಂಚಿಕೆ ಸಂಬಂಧ ತಮ್ಮ ಅಮಿತ ಪ್ರಭು ಅವರೊಂದಿಗೆ ಜಗಳವಾಡುತ್ತಿದ್ದನು. ಜು. 27, 2019ರಂದು ತಮ್ಮನ ಪತ್ನಿ ಆಸ್ತಿ ಪಾಲಿಗೆ ಅಡ್ಡಿ ಮಾಡುತ್ತಿದ್ದಾಳೆ ಎಂದು ನೆಲಮಹಡಿಯಲ್ಲಿದ್ದ ತಮ್ಮನ ಮನೆಗೆ ನುಗ್ಗಿ ಓದುತ್ತಿದ್ದ ಪುಟ್ಟಮಗು ಅನೂಜ ಹಾಗೂ ತಮ್ಮನ ಪತ್ನಿ ಮೇದಾ ಎಂಬವರನ್ನು ಬಂದೂಕಿನಿಂದ ಗುಂಡಿಟ್ಟು ಹತ್ಯೆ ಮಾಡಿದ್ದನು. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ದೋಷಾರೋಪ ಪಟ್ಟಿನ್ಯಾಯಾಲಯಕ್ಕೆ ಸಲ್ಲಿಕೆಯಾಗಿತ್ತು.
Bengaluru: ಕಲ್ಲಿನಿಂದ ಹೊಡೆದು ಯುವಕನ ಕೊಲೆ, ಮೊಬೈಲ್ ಸ್ನಾಚ್ ಮಾಡಲು ಹೋಗಿ ನಡೀ
ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರು. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಅಭಿಯೋಜಕ ರಾಜೇಶ ಮಳ್ಗಿಕರ ವಾದ ಮಂಡಿಸಿದ್ದರು. ಮೃತ ಮೇದಾ ಅವರ ಪತಿ ಅಮಿತ ಪರ ನಾಗರಾಜ ನಾಯಕ ವಾದ ಮಂಡಿಸಿದ್ದರು.