ಮಹಿಳಾ ಎಎಸ್ಐ ಯೊಂದಿಗೆ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಮಹಿಳಾ ಎಎಸ್ಐ ಗಂಡ ಪೊಲೀಸ್ ಠಾಣೆಗೆ ದೂರು ದಾಖಲಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ (ಮಾ.13): ಪಿಡಬ್ಲುಡಿ ಕ್ವಾಟರ್ಸ್ ನಲ್ಲೆ ಲವ್ವಿ ಡವ್ವಿ ಆಟ ಆಡಿದ್ದ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಕಾಮಪುರಾಣ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ. ಮಹಿಳಾ ಎಎಸ್ಐ ಯೊಂದಿಗೆ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಮಹಿಳಾ ಎಎಸ್ಐ ಗಂಡ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಅರುಣ್ ರಂಗರಾಜನ್ ಕಲಬುರಗಿ ಐಎಸ್ ಡಿ ವಿಭಾಗದ ಎಸ್ ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಎಎಸ್ಐ ಯೊಂದಿಗೆ ಅರುಣ್ ರಂಗರಾಜನ್ ಅಕ್ರಮ ಸಂಬಂಧ ಹೊಂದಿದ್ದು, ಹೆಡ್ ಕಾನ್ಸಟೇಬಲ್ ಆಗಿರುವ ಮಹಿಳಾ ಎಎಸ್ಐ ಗಂಡ ಈ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.
ಹೆಡ್ ಕಾನ್ಸಟೇಬಲ್ ಕಂಟೆಪ್ಪ ಅವರು ತನ್ನ ಪತ್ನಿ ಮತ್ತು ಹಿರಿಯ ಅಧಿಕಾರಿ ಅರುಣ್ ರಂಗರಾಜನ್ ಅವರಿಗೆ ಅಕ್ರಮ ಸಂಬಂಧವಿದೆ. ಇವರಿಬ್ಬರು ನನ್ನ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಕಲಬುರಗಿ ನಗರದ ಐವಾನ್ ಶಾಹೀ ಬಡವಾಣೆಯ ಪಿಡಬ್ಲುಡಿ ಕ್ವಾಟರ್ಸ್ ನಲ್ಲಿ ಅನೈತಿಕ ಸಂಬಂಧದಲ್ಲಿ ತೊಡಗಿದ್ದ ವೇಳೆ ನನ್ನ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಅರೆ ಬೆತ್ತಲೆಯಾಗಿ ಇಬ್ಬರೂ ಮಲಗಿದ್ದನ್ನು ಕಂಡಿದ್ದೇನೆ. ಅವರ ಅರೆಬೆತ್ತಲೆ ವಿಡಿಯೋ ಕೂಡ ನನ್ನ ಬಳಿ ಇದೆ ಎಂದು ಕಾನ್ಸಟೇಬಲ್ ಕಂಟೆಪ್ಪ ದೂರಿನಲ್ಲಿ ತಿಳಿಸಿದ್ದಾರೆ.
undefined
ನಾನು ಅವರಿಬ್ಬರ ವಿಡಿಯೋ ಮಾಡಿದ ಹಿನ್ನೆಲೆ ನನಗೆ ಹೊಡೆದು ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಕಂಟೆಪ್ಪ ದೂರಿನಲ್ಲಿ ಆರೋಪಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಹಿಳಾ ಎ ಎಸ್ ಐ ಮತ್ತು ಅರುಣ್ ರಂಗರಾಜನ್ ಐ ಎಸ್ ಡಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಇಬ್ಬರು ಅಕ್ರಮ ಸಂಬಂಧದಲ್ಲಿದ್ದಾಗ ಹೆಡ್ ಕಾನ್ಸ್‌ಟೇಬಲ್ ಕಂಟೆಪ್ಪ ಅವರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದರು. ಈ ಹಿಂದೆಯು ಎರಡ್ಮೂರು ಬಾರಿ ಪತ್ನಿ ಮತ್ತು ಐಪಿಎಸ್ ಅಧಿಕಾರಿಗೆ ತಿಳಿ ಹೇಳಿದ್ರು ಬದಲಾಗಿಲ್ಲ.
ಅಫಜಲ್ಪುರ: ಅನೈತಿಕ ಸಂಬಂಧ ಶಂಕೆ, ಯುವಕನ ಕೊಲೆ
ಅಧಿಕಾರ ದುರುಪಯೋಗ ಪಡಿಸಿಕೊಂಡು ನನ್ನ ಪತ್ನಿ ಜೊತೆ ನಿರಂತರವಾಗಿ ಅರುಣ್ ರಂಗರಾಜನ್ ಅನೈತಿಕ ಸಂಬಂಧ ಹೊಂದಿದ್ದಾನೆ. ನಿನ್ನೆಯು ಕೂಡ ಐಪಿಎಸ್ ಅಧಿಕಾರಿ ಮನೆಯಲ್ಲಿ ಅನೈತಿಕ ಸಂಬಂಧದಲ್ಲಿ ತೊಡಗಿದ್ದಾಗ ಹೆಡ್ ಕಾನ್ಸಟೇಬಲ್ ಗಂಡ ಎಂಟ್ರಿ ಕೊಡ್ಡಿದ್ದ ಆದ್ರೆ ಒಳಗೆ ಬಂದರೆ ನೋಡು ಎಂದು ಐಪಿಎಸ್ ಅಧಿಕಾರಿ ಬೆದರಿಕೆ ಒಡ್ಡಿದ ಕಾರಣ ಒಳನುಗ್ಗಲು ಧೈರ್ಯ ಮಾಡದೇ ಕಾನ್ಸಟೇಬಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾನೆ.
ಕಲಬುರಗಿ: ಕಪ್ಪಗಿದ್ದಿಯಾ ಎಂದು ಹೆಂಡತಿಯ ಕೊಲೆ ಮಾಡಿದ ಗಂಡ
ಐಪಿಎಸ್ ಅಧಿಕಾರಿ ಬೆದರಿಕೆ ಹಿನ್ನೆಲೆ ಮನೆಯ ಸುತ್ತಲೂ ಅಡ್ಡಾಡಿ ವಿಡಿಯೋ ಮಾಡಿದ ಕಾನ್ಸಟೇಬಲ್ ಕಂಟೆಪ್ಪ, ಕೊನೆಗೆ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಮತ್ತು ಪತ್ನಿ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಐಪಿಎಸ್ ಸೆಕ್ಷನ್ 323 , 324 , 498 , 376(2)(b) , 342 , 504 , 506(2)507,420,406,500,201,109,457, ಅಡಿಯಲ್ಲಿ ಎಫ ಐ ಆರ್ ದಾಖಲಾಗಿದೆ.
2020ರಲ್ಲಿ ಮಕ್ಕಳಿಗಾಗಿ ವಿಚ್ಛೇಧಿತ ಪತ್ನಿ ವಿರುದ್ಧ ಧರಣಿ ಕೂತಿದ್ದ ಅರುಣ್ ರಂಗರಾಜನ್:
ಈ ಹಿಂದೆ 2020 ಫೆಬ್ರವರಿಯಲ್ಲಿ ಕಲಬುರಗಿಯ ಐಎಸ್ಡಿಯಲ್ಲಿ ಎಸ್ಪಿಯಾಗಿದ್ದಾಗ ಅರುಣ್ ರಂಗರಾಜನ್ ತನ್ನ ಮಕ್ಕಳಿಗಾಗಿ ವಿಚ್ಚೇಧಿತ ಪತ್ನಿ ಇಲಕಿಯಾ ಕರುಣಾಕರನ್ ಅವರು ವಾಸವಿದ್ದ ಬೆಂಗಳೂರಿನ ಸರಕಾರಿ ನಿವಾಸದೆದುರು ಅಹೋರಾತ್ರಿ ಧರಣಿ ಕೂತು ಸುದ್ದಿಯಾಗಿದ್ದರು. ಇಲಕಿಯಾ ಕರುಣಾಕರನ್ ಬೆಂಗಳೂರಿನಲ್ಲಿ ವಿವಿಐಪಿ ಭದ್ರತಾ ಡಿಸಿಪಿಯಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದ ಇವರ ನಡುವೆ ಮಗುವಾದ ನಂತರ ಭಿನ್ನಾಭಿಪ್ರಾಯಗಳು ಉಂಟಾಗಿತ್ತು. ಹೀಗಾಗಿ ಇಬ್ಬರೂ ಕೂಡ ಡಿವೋರ್ಸ್ ಪಡೆದುಕೊಂಡಿದ್ದರು. ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಈಗ ಅನೈತಿಕ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಸುದ್ದಿಯಾಗಿದ್ದಾರೆ.