ಚಲಿಸುತ್ತಿರುವ ಕಾರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್, ಯುವತಿ ಪರಿಸ್ಥಿತಿ ಚಿಂತಾಜನಕ!

Published : May 11, 2023, 04:43 PM IST
ಚಲಿಸುತ್ತಿರುವ ಕಾರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್, ಯುವತಿ ಪರಿಸ್ಥಿತಿ ಚಿಂತಾಜನಕ!

ಸಾರಾಂಶ

ಕಾಲೇಜು ವಿದ್ಯಾರ್ಥಿನಿಗೆ ಲಿಫ್ಟ್ ಕೊಡುವ ನೆಪದಲ್ಲಿ ಕಾರಿನಲ್ಲಿ ಕೂರಿಸಿ ಸಾಮಾಹಿಕ ಅತ್ಯಾಚಾರ ನಡೆಸಿ ಬಳಿಕ ನಡು ದಾರಿಯಲ್ಲಿ ಇಳಿಸಿಹೋದ ಘಟನೆ ನಡೆದಿದೆ. ಯುವತಿ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಪ್ರತಿಭಟನೆ ಆರಂಭಗೊಂಡಿದೆ.

ತ್ರಿಪುರ(ಮೇ.11): ಕಾಲೇಜು ವಿದ್ಯಾರ್ಥಿನಿ ಮೇಲೆ ಮೃಗೀಯವಾಗಿ ಅತ್ಯಾಚಾರ ನಡೆಸಿದ ಘಟನೆ ತ್ರಿಪುರಾದಲ್ಲಿ ನಡೆದಿದೆ. ವಿದ್ಯಾರ್ಥಿನಿಗೆ ಪರಿಚಯಸ್ಥ ಮೂವರು ಯುವಕರು ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಚಲಿಸುತ್ತಿರುವ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ತೀವ್ರ ಅಸ್ವಸ್ಥಗೊಂಡ ವಿದ್ಯಾರ್ಥಿನಿಯನ್ನು ನಡು ರಸ್ತೆಯಲ್ಲೇ ಇಳಿಸಿ ಪರಾರಿಯಾಗಿದ್ದಾರೆ. ಯುವತಿ ತಾಯಿ ನೀಡಿದ ದೂರಿನ ಆಧಾರದಲ್ಲಿ ಇದೀಗ ಪೊಲೀಸರು ಓರ್ವ ಆರೋಪಿಯನ್ನು ಆರೆಸ್ಟ್ ಮಾಡಿದ್ದಾರೆ.

ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಗೆ ಕಾರಿನಲ್ಲಿ ಡ್ರಾಪ್ ಕೊಡಿಸುವುದಾಗಿ ಹೇಳಿ ಹತ್ತಿಸಿಕೊಂಡಿದ್ದಾರೆ. ಪರಿಚಯಸ್ಥ ಯುವಕರಾದ ಕಾರಣ ಕಾರಿಗೆ ಹತ್ತಿದ ಯುವತಿ ಮೇಲೆ ಮೂವರು ಯುವಕರು ಅತ್ಯಾಚಾರ ನಡೆಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಯುವತಿಯನ್ನು ಅಮಾತಲಿ ಬೈಪಾಸ್ ರಸ್ತೆಯಲ್ಲಿ ಇಳಿಸಿದ ಯುವಕರು ಪರಾರಿಯಾಗಿದ್ದಾರೆ. ಇತ್ತ ತೀವ್ರ ಅಸ್ವಸ್ಥಗೊಂಡಿರುವ ಯುವತಿಯನ್ನು ಜಿಬಿ ಪಂತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಅಸ್ವಸ್ಥಗೊಂಡಿರುವ ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಡ್ರಗ್ಸ್ ಸೇವಿಸಿ, ಅಶ್ಲೀಲ ಚಿತ್ರ ವೀಕ್ಷಿಸಿ 30 ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಮಾಡಿದ ಕಾಮಪಿಶಾಚಿ!

ವಿದ್ಯಾರ್ಥಿನಿ ತಾಯಿ ದೂರು ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನಿಬ್ಬರಿಗಾಗಿ ಹುಡುಕಾಟ ಆರಂಭಗೊಂಡಿದೆ. ಮಹಿಳೆ ವಿರುದ್ಧ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲ.ಹೀಗಾಗಿ ಎಲ್ಲಾ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದು ತ್ರಿಪುರಾ ಸಿಎಂ ಹೇಳಿದ್ದಾರೆ.

ರೇಪ್‌ ಮಾಡಲು ಬಂದವನ ಜನನಾಂಗವನ್ನೇ ಕತ್ತರಿಸಿದ ಮಹಿಳೆ
ಮಹಿಳೆಯೊಬ್ಬಳು ಅತ್ಯಾಚಾರ ಎಸಗಲು ಬಂದ ವ್ಯಕ್ತಿಯ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ಅಸ್ಸಾಂನ ಮೋರಿಗಾಂವ್‌ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಉಸ್ಮಾನ್‌ ಅಲಿ ಡರ್ರಾಂಗ್‌ ಜಿಲ್ಲೆಯವನಾಗಿದ್ದು ಮೋರಿಗಾಂವ್‌ ಜಿಲ್ಲೆಯ ಬರಲಿಮಾರಿ ಗ್ರಾಮಕ್ಕೆ ಬಂದಿದ್ದ. ಮಗು ಇಲ್ಲದ ದಂಪತಿಗೆ ಮಗು ಪಡೆಯಲು ಸಹಾಯ ಮಾಡಲು ಆಗಮಿಸಿದ್ದ. ಈ ವೇಳೆ ಮಹಿಳೆಯ ಮನೆಗೆ ನುಗ್ಗಿ ಆಕೆಯನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದ. ಇದರಿಂದ ಎಚ್ಚೆತ್ತ ಮಹಿಳೆ, ಚಾಕುವಿನಿಂದ ಆತನ ಗುಪ್ತಾಂಗವನ್ನು ಕತ್ತರಿಸಿದ್ದಾರೆ. ಈ ಘಟನೆ ಬಳಿಕ ಆತನನ್ನು ಮೋರಿಗಾಂವ್‌ ಆಸ್ಪತ್ರೆಗೆ ದಾಖಲಿಸಿ ಬಳಿಕ ಗುವಾಹಟಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಇದೇ ರೀತಿಯ ಘಟನೆ ರೀತಿಯ ಘಟನೆ ಮಾ.3ರಂದು ನಡೆದಿತ್ತು. 

ಹಾಲು ಮಾರುವ ವ್ಯಕ್ತಿಯಿಂದ 7 ವರ್ಷದ ಬಾಲಕಿಯ ಮೇಲೆ ರೇಪ್‌!

ಕೊಲೆ ದೋಷಿಯ ಕ್ಷಮಾ ಅರ್ಜಿ ತಿರಸ್ಕರಿಸಿದ ಮುರ್ಮು
4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಕಲ್ಲಿನಿಂದ ಚಚ್ಚಿ ಕೊಂದು ಹಾಕಿ ವಿಕೃತಿ ಮೆರೆದಿದ್ದ ಅತ್ಯಾಚಾರಿಯ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ತಿರಸ್ಕರಿಸಿದ್ದಾರೆ. ಮುರ್ಮು ರಾಷ್ಟ್ರಪತಿ ಹುದ್ದೆಗೇರಿದ ಬಳಿಕ ತಿರಸ್ಕರಿಸುತ್ತಿರುವ ಮೊದಲ ಕ್ಷಮಾದಾನ ಅರ್ಜಿ ಇದಾಗಿದೆ. 2008ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಈ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ವಸಂತ ಸಂಪತ್‌ ದುಪಾರೆ ಎಂಬ ವ್ಯಕ್ತಿಗೆ 2014 ರಲ್ಲಿ ಬಾಂಬೆ ಹೈಕೋರ್ಚ್‌ ಗಲ್ಲು ಶಿಕ್ಷೆ ವಿಧಿಸಿತ್ತು. ಬಳಿಕ ಅಪರಾಧಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಚ್‌ ತಿರಸ್ಕರಿಸಿತ್ತು. ಇದೀಗ ಮುರ್ಮು ಸಹ ಅಪರಾಧಿಗೆ ಗಲ್ಲು ಕಾಯಂಗೊಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!