ಹುಲಿಹೈದರ ಘರ್ಷಣೆ: ಪ್ರೇಮ ವಿವಾಹವೇ ಗಲಾಟೆಗೆ ಕಾರಣವಾಯ್ತಾ!

By Govindaraj S  |  First Published Aug 18, 2022, 12:29 AM IST

ಕನಕಗಿರಿ ತಾಲೂಕಿನ ಹುಲಿಹೈದರ್‌ ಘಟನೆಯಲ್ಲಿ ಇಬ್ಬರು ಕೊಲೆಯಾಗಿದ್ದಾರೆ. ಈ ಘಟನೆಗೆ ಪ್ರಮುಖ ಕಾರಣ ಪ್ರೇಮ ವಿವಾಹ ಎಂಬ ವಿಷಯವನ್ನು ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಟಿ ರತ್ನಾಕರ್ ತಿಳಿಸಿದ್ದಾರೆ. 


ಕೊಪ್ಪಳ (ಆ.18): ಕನಕಗಿರಿ ತಾಲೂಕಿನ ಹುಲಿಹೈದರ್‌ ಘಟನೆಯಲ್ಲಿ ಇಬ್ಬರು ಕೊಲೆಯಾಗಿದ್ದಾರೆ. ಈ ಘಟನೆಗೆ ಪ್ರಮುಖ ಕಾರಣ ಪ್ರೇಮ ವಿವಾಹ ಎಂಬ ವಿಷಯವನ್ನು ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಟಿ ರತ್ನಾಕರ್ ತಿಳಿಸಿದ್ದಾರೆ. ವಾಲ್ಮೀಕಿ ಸಮಾಜದ ಹುಡುಗ, ಮುಸ್ಲಿಂ ಸಮಾಜದ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಮೂರು ಪ್ರೇಮ ವಿವಾಹ ಪ್ರಕರಣಗಳು ನಡೆದಿವೆ. ಮೂರು ಪ್ರಕರಣಗಳಲ್ಲಿ ಎಸ್ಟಿ ಸಮಾಜದ ಹುಡುಗರು, ಮುಸ್ಲಿಂ ಸಮಾಜದ ಹುಡುಗಿಯರನ್ನು ಮದುವೆ ಆಗಿದ್ದಾರೆ. ಹಾಗಾಗಿ ಈ ಹಿನ್ನಲೆಯಲ್ಲಿ ಗಲಾಟೆ ಆಗಿದ್ದು, ದುಷ್ಕರ್ಮಿಗಳು ಎರಡು ಕೊಲೆಗಳನ್ನು ಮಾಡಿದ್ದಾರೆ. 

ಯಾರೇ ತಪ್ಪಿಸ್ಥರಿದ್ದರೂ ಅವರಿಗೆ ಶಿಕ್ಷೆ ಆಗಲಿ, ವಾಲ್ಮೀಕಿ ವೃತ್ತದ ವಿವಾದ ನಿನ್ನೆ ಮೊನ್ನೆಯದಲ್ಲ. ಇದು ಬಹಳ ಹಳೆಯದು. ವಾಲ್ಮೀಕಿ ವೃತ್ತದ ವಿಷಯದಿಂದ ಈ ಗಲಾಟೆ ಆಗಿಲ್ಲ. ಗಲಾಟೆಯಲ್ಲಿ ಹನುಮೇಶ್ ನಾಯಕ್ ಪಾತ್ರದ ಆರೋಪ ಹಿನ್ನಲೆಯಲ್ಲಿ ಯಾರು ಯಾರ ಮೇಲೆ ಏನೇ ಆರೋಪ ಮಾಡಬಹುದು. ತನಿಖೆ ಆಗಲಿ, ಅದರಿಂದ ಸತ್ಯ ಹೊರಬರಲಿ. ಗಲಾಟೆ ನಡೆದ ಎರಡು ದಿ‌ನ‌ ಮುಂಚೆ ಬೇರೆ ಬೇರೆ ಸಮಾಜದವರು ಸಭೆ ಮಾಡಿದ್ದಾರೆ. ಅದರ ಕುರಿತೂ ಸಹ ತನಿಖೆ ಆಗಲಿ. ಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಕೊಲೆ‌ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲಿ ಎಂದು ರತ್ನಾಕರ್ ಆಗ್ರಹಿಸಿದ್ದಾರೆ.

Latest Videos

undefined

ಹುಲಿಹೈದರ ಇನ್ನೂ ಬೂದಿ ಮುಚ್ಚಿದ ಕೆಂಡ: ಗ್ರಾಮದಲ್ಲಿ ಸ್ಮಶಾನ ಮೌನ

ನಿಷ್ಪಕ್ಷಪಾತ ತನಿಖೆಯಾಗಲಿ: ಕನಕಗಿರಿ ತಾಲೂಕಿನ ಹುಲಿಹೈದರ್‌ ಘಟನೆಯಲ್ಲಿ ಇಬ್ಬರು ಕೊಲೆಯಾಗಿದ್ದಾರೆ. ಈ ಘಟನೆಯು ನಿಷ್ಪಕ್ಷಪಾತವಾಗಿ ತನಿಖೆಯಾಗಲಿ. ತನಿಖೆ ದಾರಿ ತಪ್ಪದಿರಲಿ. ಹುಲಿಹೈದರ್‌ನಲ್ಲಿ ಇತ್ತೀಚೆಗೆ ನಡೆದ ಘಟನೆಯು ನಿಜಕ್ಕೂ ನೋವು ತರಿಸಿದೆ. ಯಾವುದೇ ಸಮಾಜಕ್ಕೆ ಹಾನಿ ಆದರೂ ಅದು ಮಾನವ ಹಾನಿಯೇ ಆಗಿದೆ. ಮಾನವೀಯತೆ ಮರೆಯಬಾರದು. ಆದರೂ ಘಟನೆಯು ನಡೆದು ಹೋಗಿದೆ. ಈಗಾಗಲೇ ಎರಡು ಪ್ರಕರಣ ದಾಖಲಾಗಿದ್ದು, ಎರಡೂ ಕಡೆಯಿಂದಲೂ ಆರೋಪಿಗಳ ಬಂಧಿಸುವ ಕಾರ್ಯ ನಡೆದಿದೆ. ಈಗಾಗಲೇ ಪೊಲೀಸ್‌ ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. 

ಈ ಮೊದಲು ಪೊಲೀಸ್‌ ಇಲಾಖೆಯ ವೈಫಲ್ಯವೂ ಇದರಲ್ಲಿ ಕಾಣುತ್ತದೆ. ಘಟನೆ ಸಂಬಂಧ ಹನುಮೇಶ ನಾಯಕ್‌ ಹಾಗೂ ಅವರ ಕುಟುಂಬವನ್ನು ರಾಜಕೀಯ ದುರುದ್ದೇಶದಿಂದ ಇದರಲ್ಲಿ ಎಳೆದು ತರಲಾಗುತ್ತಿದೆ ಎಂದರು. ಕೆಲವೊಂದು ಸಂಘಟನೆಗಳು ವ್ಯತಿರಿಕ್ತವಾಗಿ ಹೇಳಿಕೆ ನೀಡಿವೆ. ಈ ಪ್ರಕರಣ ದಾರಿ ತಪ್ಪುವುದು ಬೇಡ. ಈಗಾಗಲೇ ಪೊಲೀಸ್‌ ಇಲಾಖೆಯು ಗ್ರಾಮದಲ್ಲಿ ಇಲ್ಲದವರನ್ನು ಬೇರೆಡೆ ಬಂಧಿಸಿ ಕರೆತರುತ್ತಿದ್ದಾರೆ. ಅಂತಹ ವ್ಯಕ್ತಿಗಳ ಮೇಲೆ ಅನುಮಾನ ಬಂದಿರಬಹುದು. ಹಾಗಾಗಿ ಬಂಧಿಸಿರಬಹುದು. ಇದು ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕಿದೆ ಎಂದರಲ್ಲದೇ, ಸಣ್ಣ ಹನುಮಂತ ಸೇರಿ ಇತರರು ಪ್ರಕರಣದಲ್ಲಿ ಆರೋಪಿಯ ಸ್ಥಾನದಲ್ಲಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದರು.

ಹುಲಿಹೈದರ ಘಟನೆ: ಡಿಸಿ ನೇತೃತ್ವದ ತಂಡ ಭೇಟಿ, ಸಾಂತ್ವನ

ಗ್ರಾಮದಲ್ಲಿ ಎಲ್ಲ ಸಮಾಜದ ಸ್ವಾಮಿಗಳ ನೇತೃತ್ವದಲ್ಲಿ ಶಾಂತಿ ಸಭೆ ನಡೆಸುವ ಕುರಿತು ಚರ್ಚಿಸಿದೆ. ಶೀಘ್ರದಲ್ಲಿಯೇ ಈ ಕೆಲಸ ಮಾಡಲಿದ್ದೇವೆ. ಕೊಲೆ ನಡೆದ ಘಟನೆ ಬೆನ್ನಲ್ಲೆ ಹಲವರು ಗ್ರಾಮವನ್ನು ತೊರೆದಿದ್ದಾರೆ. ಶೇ. 90ರಷ್ಟುಜನರು ಊರಿನಲ್ಲೇ ಇಲ್ಲ. ಪೊಲೀಸ್‌ ತಂಡವೇ ಗ್ರಾಮದಲ್ಲಿ ಠಿಕಾಣಿ ಹೂಡಿದೆ. ಜನತೆ ಮತ್ತೆ ಊರಿಗೆ ಆಗಮಿಸಿ ಇಲ್ಲಿ ನೆಲೆಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ರಾಮಣ್ಣ ಕಲ್ಲಣ್ಣವರ, ಶಿವಮೂರ್ತಿ ಗುತ್ತೂರು, ಯಮನೂರಪ್ಪ ಜಿ. ಸೇರಿದಂತೆ ಇತರರು ಉಪಸ್ಥಿತರಿದ್ದರು.

click me!