Chitradurga: ಸಾವಿರ ರೂಪಾಯಿಗೆ ಶುರುವಾದ ಸ್ನೇಹಿತರಿಬ್ಬರ ಗಲಾಟೆ ಕೊಲೆಯಲ್ಲಿ ಅಂತ್ಯ!

Published : May 21, 2022, 11:10 PM IST
Chitradurga: ಸಾವಿರ ರೂಪಾಯಿಗೆ ಶುರುವಾದ ಸ್ನೇಹಿತರಿಬ್ಬರ ಗಲಾಟೆ ಕೊಲೆಯಲ್ಲಿ ಅಂತ್ಯ!

ಸಾರಾಂಶ

ಅವರಿಬ್ಬರು ಹೊಟ್ಟೆಪಾಡಿಗಾಗಿ ನಿತ್ಯ ಗಾರೆ ಕೆಲಸ‌ ಮಾಡ್ತಿದ್ದ ಯುವಕರು. ಸುಮಾರು 20 ವರ್ಷಗಳಿಂದಲೂ ಸ್ನೇಹಿತರಾಗಿದ್ದ ಅವರು ಹಣದ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ‌. 

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಮೇ.21): ಅವರಿಬ್ಬರು ಹೊಟ್ಟೆಪಾಡಿಗಾಗಿ ನಿತ್ಯ ಗಾರೆ ಕೆಲಸ‌ ಮಾಡ್ತಿದ್ದ ಯುವಕರು. ಸುಮಾರು 20 ವರ್ಷಗಳಿಂದಲೂ ಸ್ನೇಹಿತರಾಗಿದ್ದ ಅವರು ಹಣದ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ‌. ಈ ಕುರಿತು ಒಂದು ವರದಿ ಇಲ್ಲಿದೆ.  ಹೀಗೆ ತನ್ನ ಮೈದುನನನ್ನು ಕಳೆದುಕೊಂಡು ಕಣ್ಣೀರು ಹಾಕ್ತಿರೋ ಅತ್ತಿಗೆ. ಮತ್ತೊಂದೆಡೆ ತನ್ನ ಸ್ನೇಹಿತನಿಂದಲೇ ಕೊಲೆಯಾಗಿ ಶವವಾಗಿ ಮಲಗಿರೋ ಮೃತ ವ್ಯಕ್ತಿ. ಈ ದೃಶ್ಯಗಳು ಕಂಡು ಬಂದಿದ್ದು, ಕೋಟೆನಾಡು ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆ‌ ಬಳಿ. ನಗರದ ಕಾಮನಬಾವಿ ಬಡಾವಣೆಯ ಮೊಹಮ್ಮದ್ ಆಲಿ (30) ಕೊಲೆಯಾದ ವ್ಯಕ್ತಿ.

ಈತನೂ ಹಾಗೂ ಅದೇ ಏರಿಯಾದ ಖಾದರ್ ಫಾಷಾ ಸುಮಾರು 20 ವರ್ಷಗಳಿಂದ ಆತ್ಮೀಯ ಸ್ನೇಹಿತರು.  ಇಡೀ ಏರಿಯಾದಲ್ಲಿ ಅವರನ್ನು ಕಂಡವರು ಇಬ್ಬರು ಕುಚಿಕು‌ ಗೆಳೆಯರು ಎಂದು ಕರೆಯುತ್ತಿದ್ದರು. ಆದ್ರೆ ಇಬ್ಬರೂ ಹೊಟ್ಟೆಪಾಡಿಗಾಗಿ ಗಾರೆ ಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆಲಿ ಬಳಿ ಖಾದರ್ 1000 ಹಣ ಪಡೆದಿದ್ದನ್ನು ಕೇಳಲು ಹೋದ ಆಲಿಯ ಮೇಲೆ ಆರೋಪಿ ಖಾದರ್ ಮನಸ್ಸೋ ಇಚ್ಚೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಅಲ್ಲದೇ ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ಇಟ್ಟಿಗೆಯಿಂದ ಹೊಡೆಯುವ ಮೂಲಕ ಬರ್ಬರವಾಗಿಯೇ ಹಲ್ಲೆ ನಡೆಸಿದ್ದಾನೆ. 

ಶ್ರೀರಾಮುಲು ವಿರುದ್ದ ಅಕ್ರಮ ಭೂ ಕಬಳಿಕೆ ಆರೋಪ, ಸಂಪುಟದಿಂದ ಕೈಬಿಡುವಂತೆ ಆಗ್ರಹ

ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಿದ್ರು ಏನೂ ಪ್ರಯೋಜನ ಆಗದೆ ಕೊನೆಯುಸಿರೆಳೆದಿದ್ದು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ 20 ವರ್ಷದ ಸ್ನೇಹಿತರಾಗಿದ್ದರು ಕೇವಲ ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿರೋ ಖಾದರ್ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ‌. ಆಲಿಯ ಬಳಿಯೇ 1000 ರೂ ಹಣ ಪಡೆದು ಆತನಿಗೆ ಹಿಂದಿರುಗಿಸದೇ ಆತನ‌ ಮೇಲೆಯೇ ದರ್ಪ ತೋರಿರೋದಕ್ಕೆ ಸಂಬಂಧಿಕರು ಆಕ್ರೋಶ ಹೊರಹಾಕಿದರು. ಅಲ್ಲದೇ ತನ್ನ ಭಾಮೈದ ಸಾಯುವ ಮುನ್ನ ಖಾದರ್ ನನ್ನ ಮೇಲೆ ತುಂಬಾ ಹಲ್ಲೆ ನಡೆಸಿದ, ಕೂಡಲೇ ಆತನ ಮೇಲೆ ದೂರು ದಾಖಲಿಸಬೇಕು ಎಂದು ತನ್ನ ಅತ್ತಿಗೆ ಬಳಿ ಅಳಲು ತೋಡಿಕೊಂಡಿದ್ದನು. 

ಸಿನಿಮೀಯ ರೀತಿಯಲ್ಲಿ ದರೋಡೆ, ಸಹಾಯ ಕೇಳುವ ನೆಪದಲ್ಲಿ ಬಂದವರಿಂದ ಕೃತ್ಯ

ಪೊಲೀಸರಿಗೆ ಘಟನೆಯ ಮಾಹಿತಿ ನೀಡುವಾಗಲೇ ಅತೀವ ನೋವಿನಿಂದ ಸಾವನ್ನಪ್ಪಿದ್ದಾನೆ. ಅಲ್ಲದೇ ಆತನಿಗೆ ಇಬ್ಬರು ಮಕ್ಕಳಿದ್ದು ಒಂದು ತಿಂಗಳ ಮಗು ಕೂಡ ಇದೆ. ಇಡೀ ಕುಟುಂಬಕ್ಕೆ ಆತನೇ ಆಸರೆ ಆಗಿದ್ದ ಇನ್ಮುಂದೆ ಆ ಕುಟುಂಬಕ್ಕೆ ಯಾರು ಗತಿ. ಆರೋಪಿಗೆ ಉಗ್ರ ಶಿಕ್ಷೆ ವಿಧಿಸಿ ಎಂದು ಮೃತನ ಅತ್ತಿಗೆ ಆಗ್ರಹಿಸಿದರು. ಒಟ್ಟಾರೆ ಪ್ರಾಣ ಸ್ನೇಹಿತರಂತೆ ಊರಿಂದ ಊರು ಸುತ್ತಿ ಗಾರೆ ಕೆಲಸ ಮಾಡ್ತಿದ್ದ ಯುವಕರು ಕೇವಲ ಹಣದ ವಿಚಾರಕ್ಕೆ ನಡೆದ ಗಲಾಟೆ ಓರ್ವನ ಕೊನೆಯಲ್ಲಿ ಮುಗಿದಿರೋದು ದುರಂತವೇ ಸರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!