
ಭೋಪಾಲ್(ಮಾ.26): ಏಕಾಏಕಿ ಮಿಷನರಿ ಇಂಗ್ಲೀಷ್ ಮಾಧ್ಯಮ ಶಾಲೆಗೆ ಮಕ್ಕಳ ಹಕ್ಕುಗಳ ಆಯೋಗ ದಾಳಿ ಮಾಡಿದೆ. ಈ ದಾಳಿಯಲ್ಲಿ ಪತ್ತೆಯಾದ ವಸ್ತುಗಳು ಆಯೋಗ ಮಾತ್ರವಲ್ಲ, ವಿದ್ಯಾರ್ಥಿಗಳ ಪೋಷಕರನ್ನು ಬೆಚ್ಚಿ ಬೀಳಿಸಿದೆ. ಮಧ್ಯ ಪ್ರದೇಶದ ಮೊರೆನಾ ಜಿಲ್ಲಿಯಲ್ಲಿರುವ ಪ್ರತಿಷ್ಠಿತ ಮಿಷನರಿ ಆಡಳಿತದ ಇಂಗ್ಲೀಂಷ್ ಮಾಧ್ಯಮ ಶಾಲೆಗೆ ಮಧ್ಯ ಪ್ರದೇಶದ ಮಕ್ಕಳ ಹಕ್ಕುಗಳ ಆಯೋಗದ ಮುಖ್ಯಸ್ಥ ಡಾ. ನಿವೇದಿತಾ ಶರ್ಮಾ ದಾಳಿ ಮಾಡಿದ್ದಾರೆ. ಈ ವೇಳೆ ಶಾಲಾ ಪ್ರಿನ್ಸಿಪಲ್ ಕೊಠಡಿಯಲ್ಲಿ ಪ್ಯಾಕೇಟ್ ಪ್ಯಾಕೇಟ್ ಕಾಂಡೋಮ್ ಪತ್ತೆಯಾಗಿದೆ. ಇಷ್ಟೇ ಅಲ್ಲ ವಿದೇಶಿ ಮದ್ಯಗಳು, ಹಲವು ಧಾರ್ಮಿಕ ಪಡ್ಯಂತ್ರದ ಪುಸ್ತಕಗಳು ಪತ್ತೆಯಾಗಿದೆ.
ಮೊರೆನಾ ಜಿಲ್ಲಿಯಲ್ಲಿರುವ ಈ ಶಾಲೆ ಮೇಲಿನ ದಾಳಿ ಮಧ್ಯ ಪ್ರದೇಶ ಮಾತ್ರವಲ್ಲ, ಭಾರತವನ್ನೇ ಬೆಚ್ಚಿ ಬೀಳಿಸಿದೆ. ಶಾಲೆ, ಪ್ರಿನ್ಸಿಪಲ್, ಆಡಳಿತ ಮಂಡಳಿ ಕುರಿತು ಕೆಲ ರಹಸ್ಯ ಮಾಹಿತಿ ಪಡೆದ ಮಹಿಳಾ ಹಕ್ಕುಗಳ ಆಯೋಗ, ಯಾವುದೇ ಸೂಚನೆ ನೀಡಿದ ದಿಢೀರ್ ಶಾಲೆ ಮೇಲೆ ದಾಳಿ ಮಾಡಿದೆ. ಅಧಿಕಾರಿಗಳು, ಪೊಲೀಸರ ತಂಡದ ಜೊತೆ ದಾಳಿ ಮಾಡಲಾಗಿದೆ.
Delhi horror 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಾಲಾ ಸಿಬ್ಬಂದಿ ಸೇರಿ ನಾಲ್ವರಿಂದ ಸಾಮೂಹಿಕ ಅತ್ಯಾಚಾರ!
ಈ ದಾಳಿಯಲ್ಲಿ ಸಂಪೂರ್ಣ ಶಾಲೆಯನ್ನು ತಪಾಸಣೆ ನಡೆಸಲಾಗಿದೆ. ಪ್ರಿನ್ಸಿಪಲ್ ಕೊಠಡಿ ಪರಿಶೀಲನೆ ವೇಳೆ ಹಲವು ಕಾಂಡೋಮ್ ಪ್ಯಾಕೇಟ್, ದುಬಾರಿ ಬೆಲೆಯ ವಿದೇಶಿ ಮದ್ಯಗಳು ಪತ್ತೆಯಾಗಿದೆ. ಪ್ರಾಂಶುಪಾಲರ ಕೊಠಡಿಯಲ್ಲಿ 15ಕ್ಕೂ ಹೆಚ್ಚು ಹಾಸಿಗೆಗಳು, ಮದ್ಯದ ಬಾಟಲಿಗಳು ಹಾಗೂ ಕಾಂಡೋಮ್ ಪತ್ತೆ ಆಗಿವೆ. ಅಲ್ಲದೇ ಪ್ರಾಂಶುಪಾಲರ ಕೊಠಡಿಗೆ ನೇರವಾಗಿ ಬಾಲಕಿಯರ ಶಾಲಾ ಕೊಠಡಿ ಸಂಪರ್ಕಗೊಂಡಿರುವುದು ಕಂಡುಬಂದಿದೆ. ಇನ್ನು ಪ್ರಿನ್ಸಿಪಲ್ ಕೊಠಡಿಯಲ್ಲಿ ಧಾರ್ಮಿಕ ಮತಾಂತರ ಸೇರಿದಂತೆ ಹಲವು ಷಡ್ಯಂತ್ರದ ಪುಸ್ತಕಗಳು ಪತ್ತೆಯಾಗಿದೆ. ಈ ಪುಸ್ತಕಗಳ ಪ್ರತಿಗಳು ಶಾಲಾ ಲೈಬ್ರರಿಯಲ್ಲೂ ಪತ್ತೆಯಾಗಿದೆ.
ಘಟನೆ ಮಾಹಿತಿ ಪಡೆಗ ಜಿಲ್ಲಾಡಳಿತ ಸ್ಥಳಕ್ಕೆ ಆಗಮಿಸಿ ಸಂಪೂರ್ಣ ಶಾಲೆಯನ್ನು ವಶಕ್ಕೆ ಪಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇತ್ತ ಅಬಕಾರಿ ಇಲಾಖೆ ಪ್ರಿನ್ಸಿಪಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ವಿದೇಶಿ ಮದ್ಯಗಳು ಪತ್ತೆಯಾಗಿರುವ ಕಾರಣ ಅಬಕಾರಿ ಇಲಾಖೆ ಕೇಸ್ ದಾಖಲಿಸಿಕೊಂಡಿದೆ.
ಪರೀಕ್ಷೆ ಮುಗಿಸಿ ಶಾಲೆಯಿಂದ ಹೊರಬಂದ ವಿದ್ಯಾರ್ಥಿಗಳ ಮೇಲೆ ಹರಿದ ಕಾರು, ಮೂವರು ಸಾವು!
ಇತ್ತ ಪ್ರಿನ್ಸಿಪಲ್ ನಾಪತ್ತೆಯಾಗಿದ್ದಾರೆ. ಶಾಲಾ ಆಡಳಿತ ಮಂಡಳಿ ಸದಸ್ಯರು ಸಮಪರ್ಕ ಉತ್ತರ ನೀಡಲು ವಿಫಲರಾಗಿದ್ದಾರೆ. ಭಾನುವಾರ ದಾಳಿ ಮಾಡುವ ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ಮಕ್ಕಳ ಆಯೋಗ ನೋಡಿಕೊಂಡಿದೆ. ಇದೀಗ ಪೋಷಕರು ಆತಂಕ ವ್ಯಕ್ತಪಡಿಸಿದ್ದು, ಮುಂದಿನ ಶೈಕ್ಷಣಿಕೆ ವರ್ಷದಲ್ಲಿ ಬೇರೆ ಶಾಲೆಯಲ್ಲಿ ಮಕ್ಕಳನ್ನು ದಾಖಲಾತಿ ಮಾಡಲು ಅವಕಾಶ ನೀಡಬೇಕು ಎಂದು ಜಿಲ್ಲಾಡಳಿತವನ್ನು ಮನವಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ