ಭಿಕ್ಷೆ ಬೇಡುವವಳಿಗೆ ಮಗು ಕೊಟ್ಟ ತಾಯಿ, ಕಂದಮ್ಮನ ಜೊತೆ ಅಪರಿಚಿತ ಮಹಿಳೆ ಪರಾರಿ!

By Ravi Janekal  |  First Published Nov 16, 2024, 4:51 PM IST

ಬಿಕ್ಷುಕಿಯೊಬ್ಬಳು ಎರಡೂವರೆ ವರ್ಷದ ಮಗುವನ್ನು ಹೊತ್ತೊಯ್ದ ಘಟನೆ ಚಾಮನರಾಜನಗರ ಬಸ್ ನಿಲ್ದಾಣದಲ್ಲಿ ನಡೆದಿದೆ. ದಕ್ಷಾ(2.5 ವರ್ಷ) ಮಗು ಅಪಹರಣಕ್ಕೊಳಗಾದ ಮಗು. ಅನಿತಾ(26) ಎಂಬಾಕೆಯ ಮಗು ಕಳೆದುಕೊಂಡ ತಾಯಿ. ರಾಮನಗರ ಜಿಲ್ಲೆಯವರಾದ ಅನಿತಾ.


ಚಾಮರಾಜನಗರ (ನ.16): ಬಿಕ್ಷುಕಿಯೊಬ್ಬಳು ಎರಡೂವರೆ ವರ್ಷದ ಮಗುವನ್ನು ಹೊತ್ತೊಯ್ದ ಘಟನೆ ಚಾಮನರಾಜನಗರ ಬಸ್ ನಿಲ್ದಾಣದಲ್ಲಿ ನಡೆದಿದೆ. ದಕ್ಷಾ(2.5 ವರ್ಷ) ಮಗು ಅಪಹರಣಕ್ಕೊಳಗಾದ ಮಗು. ಅನಿತಾ(26) ಎಂಬಾಕೆಯ ಮಗು ಕಳೆದುಕೊಂಡ ತಾಯಿ. ರಾಮನಗರ ಜಿಲ್ಲೆಯವರಾದ ಅನಿತಾ.

ಮನೆಯವರಿಗೆ ಹೇಳದೆ ಮಹದೇವಶ್ವರ ಬೆಟ್ಟಕ್ಕೆ ದರ್ಶನ ಪಡೆಯಲು ಮಗುವಿನೊಂದಿಗೆ ಹೊರಟಿದ್ದ ಅನಿತಾ. ಈ ವೇಳೆ ಆಕೆಯ ಜೊತೆಗೆ ರಾಮನಗರದಿಂದ ಚಾಮರಾಜನಗರಕ್ಕೆ ಬಸ್‌ನಲ್ಲಿ ಜೊತೆಯಾಗಿ ಬಂದಿದ್ದ ಭಿಕ್ಷೆ ಬೇಡುವ ಅಪರಿಚಿತ ಮಹಿಳೆ. ಪ್ರಯಾಣದ ವೇಳೆ ಬಸ್‌ನಲ್ಲಿ ಪರಿಚಯವಾಗಿದ್ದಾರೆ. ಚಾಮರಾಜನಗರಕ್ಕೆ ಬಂದ ಬಳಿಕ ಮಗುವನ್ನ ಎತ್ತಿಕೊಂಡು ಅಪರಿಚಿತ ಮಹಿಳೆಯೊಂದಿಗೆ ಇಳಿದಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

Tap to resize

Latest Videos

undefined

ಕಲಘಟಗಿಯಲ್ಲಿ ವಕ್ಫ್ ವಿರುದ್ಡ ಪ್ರತಿಭಟನೆ:'ಆಸ್ತಿ ನಿಮ್ಮಪ್ಪಂದ' ಎಂದ ಅನ್ಯಕೋಮಿನ ವ್ಯಕ್ತಿಗೆ ಬಿತ್ತು ಧರ್ಮದೇಟು!

ಬಸ್‌ ನಿಲ್ದಾಣದಲ್ಲಿ ಬಸ್‌ಗೆ ಕಾಯುವ ವೇಳೆ ಇಲ್ಲೇ ಸ್ವಲ್ಪ ಭಿಕ್ಷೆ ಬೇಡಿಕೊಂಡು ಬರುತ್ತೇನೆ ಮಗು ಕೊಡು ಎಂದಿರುವ ಅಪರಿಚಿತ ಮಹಿಳೆ. ಆಕೆಯನ್ನ ನಂಬಿದ ಅನಿತಾ ಎಂಬಾಕೆ ತನ್ನ ಮಗುವನ್ನ ಕೊಟ್ಟಿದ್ದಾಳೆ. ಮಗುವನ್ನು ಎತ್ತಿಕೊಂಡು ಭಿಕ್ಷೆ ಬೇಡಲು ಹೋದವಳು ಮರಳಿ ಬಾರದೆ ಮಗುವಿನೊಂದಿಗೆ ಪರಾರಿಯಾಗಿದ್ದಾಳೆ. ಮಗುವಿಗಾಗಿ ಬಸ್‌ ನಿಲ್ದಾಣದಲ್ಲಿ ಕಾದು ಕಾದು ಸುಸ್ತಾದ ತಾಯಿ ಅನಿತಾ. ಅಪರಿಚಿತ ಮಹಿಳೆಯಿಂದ ಮೋಸ ಹೋಗಿರುವುದು ಕಣ್ಣೀರು ಸುರಿಸುತ್ತಿದ್ದಾಳೆ. ಮಗುವನ್ನು ಹುಡುಕಿಕೊಡುವಂತೆ ದುಃಖಿಸುತ್ತಿರುವ ತಾಯಿ ಅನಿತಾ.

ಸದ್ಯ ಮಗು ಅಪಹರಣ ಸಂಬಂಧ ಚಾಮನರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂವಿಡಿರುವ ಪೊಲೀಸರು ಅಪರಿಚಿತ ಮಹಿಳೆ, ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಬಸ್ ನಿಲ್ದಾಣದ ಸುತ್ತಮುತ್ತ ಮಗುವನ್ನು ಎತ್ತಿಕೊಂಡು ಓಡಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಅಪರಿಚಿತ ಮಹಿಳೆಯ ಪತ್ತೆ ಕಾರ್ಯ ನಡೆಸಿರುವ ಪೊಲೀಸರು

ವೇಶ್ಯಾವಾಟಿಕೆ ಆರೋಪ, ಬೆಳಗಾವಿಯಲ್ಲಿ ಮಹಿಳೆಯ ಬಟ್ಟೆ ಹರಿದು ಹಲ್ಲೆ

click me!