ಸೈಬರ್ ದಾಳಿಕೋರರಿಗೆ ಭಾರತವೇ ಟಾರ್ಗೆಟ್, ಆಗ್ನೇಯ ಏಷ್ಯಾದಲ್ಲಿ ಒಟ್ಟು 1,775 ಕೋಟಿ ರೂ ವಂಚನೆ!

By Chethan Kumar  |  First Published May 24, 2024, 5:07 PM IST

ಸೈಬರ್ ವಂಚನೆ ಪ್ರಕರಣಗಳು ಭಾರತದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಭಾರತವೇ ಟಾರ್ಗೆಟ್ ಆಗುತ್ತಿದ್ದು ಬರೋಬ್ಬರಿ 1,775 ಕೋಟಿ ರೂಪಾಯಿ ವಂಚನೆ ವರದಿಯಾಗಿದೆ. 


ನವದೆಹಲಿ(ಮೇ.24)  ಸೈಬರ್ ಕ್ರೈಂ ಇದೀಗ ಭಾರತ ಸೇರಿದಂತೆ ಎಲ್ಲಾ ದೇಶಕ್ಕೂ ಅತೀ ದೊಡ್ಡ ಸವಾಲಾಗಿದೆ. ಪ್ರತಿ ದಿನ ಒಂದಲ್ಲೂ ಒಂದು ರೀತಿ ಜನರನ್ನು ವಂಚನೆ ಮಾಡಲಾಗುತ್ತಿದೆ. ಸೈಬರ್ ದಾಳಿಕೋರರು ಕೋಟಿ ಕೋಟಿ ರೂಪಾಯಿ ವಂಚಿಸಿ, ಇತ್ತ ಪೊಲೀಸರ ಕೈಗೂ ಸಿಗದೆ ಪರಾರಿಯಾಗುತ್ತಿರುವ ಪ್ರಕರಣಗಳೇ ಹೆಚ್ಚಾಗುತ್ತಿದೆ. ಈ ಪೈಕಿ ಭಾರತ ಸೇರಿದಂತೆ ಅಗ್ನೇಯ ಏಷ್ಯಾ ದೇಶಗಳಲ್ಲಿ ಸೈಬರ್ ಕ್ರೈಂ ತವರಾಗಿ ಮಾರ್ಪಡುತ್ತಿದೆ. ಅದರಲ್ಲೂ ಬಹುತೇಕ ಸೈಬರ್ ದಾಳಿಕೋರರ ಟಾರ್ಗೆಟ್ ಭಾರತ. ಟೈಮ್ಸ್ ಆಫ್ ಇಂಡಿಯಾ ಮಾಧ್ಯಮದ ವರದಿ ಪ್ರಕಾರ ಭಾರತದಲ್ಲಿ ಸೈಬರ್ ಕ್ರೈಂ ಪ್ರಕರಣಗಳಲ್ಲಿ ಶೇಕಡಾ 46ರಷ್ಟು ಏರಿಕೆಯಾಗಿದೆ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಪ್ರಸಕ್ತ ವರ್ಷದಲ್ಲಿ ಜನವರಿಯಿಂದ ಏಪ್ರಿಲ್ ವರೆಗೆ ಕೇವಲ 3 ತಿಂಗಳಲ್ಲಿ ಭಾರತ ಸೇರಿದಂತೆ ಆಗ್ನೇಯ ಏಷ್ಯಾದಲ್ಲಿ ನಡೆದ ಸೈಬರ್ ವಂಚನೆ ಊಹೆಗೂ ನಿಲುಕುತ್ತಿಲ್ಲ.  62,567 ಹೂಡಿಕೆ ವಂಚನೆ ಮೂಲಕ ಬರೋಬ್ಬರಿ 1,420 ಕೋಟಿ ರೂಪಾಯಿ ಹಣವನ್ನು ಸೈಬರ್ ದಾಳಿಕೋರರು ದೋಚಿದ್ದಾರೆ. ಇನ್ನು ಇದೇ 3 ತಿಂಗಳಲ್ಲಿ 20,043 ಟ್ರೇಡಿಂಗ್ ಹಗರಣದ ಮೂಲಕ 222 ಕೋಟಿ ರೂಪಾಯಿ ವಂಚಿಸಲಾಗಿದೆ. ಇನ್ನು 4,600 ಡಿಜಿಟಲ್ ಅರೆಸ್ಟ್ ಹಗರಣದ ಮೂಲಕ 120 ಕೋಟಿ ರೂಪಾಯಿ ವಂಚನೆ ನಡೆದಿದೆ. 1,725 ರೋಮ್ಯಾನ್ಸ್ ಹಾಗೂ ಡೇಟಿಂಗ್ ಪ್ರಕರಣದ ಮೂಲಕ 13 ಕೋಟಿ ರೂಪಾಯಿ ವಂಚನೆ ನಡೆದಿದೆ ಎಂದು ಭಾರತದ ಸೈಬರ್ ಕ್ರೈಂ ಕಾರ್ಡಿನೇಶ್ ಮುಖ್ಯಸ್ಥ ರಾಜೇಶ್ ಕುಮಾರ್ ಹೇಳಿದ್ದಾರೆ.

Latest Videos

undefined

ತಮ್ಮನ ಮದುವೆಗೆ ಯತ್ನಿಸಿದ ಅಕ್ಕನಿಗೆ ವಿವಾಹ ಆ್ಯಪ್‌ನಲ್ಲಿ 45000 ವಂಚನೆ

ಭಾರತ, ಕಾಂಬೋಡಿಯಾ, ಮಯನ್ಮಾರ್ ದೇಶವೇ ಈ ಆಗ್ನೇಯ ಏಷ್ಯಾದ ಪ್ರಮುಖ ರಾಷ್ಟ್ರಗಳು. ಈ ಮೂರು ರಾಷ್ಟ್ರಗಳ ಪೈಕಿ ಸೈಬರ್ ವಂಚಕರು ಭಾರತವನ್ನೇ ಟಾರ್ಗೆಟ್ ಮಾಡಿದ್ದಾರೆ. ಕಳೆದ ವರ್ಷ ಭಾರತದಲ್ಲಿ ಸೈಬರ್ ಕ್ರೈಂ ಅಡಿಯಲ್ಲಿ 10,000ಕ್ಕೂ ಹೆಚ್ಚು ಎಫ್ಐಆರ್ ದಾಖಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಚೀನಾ ಮೂಲದ ಸೈಬರ್ ಕ್ರೈಂ ಪ್ರಕರಣಗಳೇ ಹೆಚ್ಚಾಗಿದೆ. ಇಷ್ಟೇ ಅಲ್ಲ ಹೊಸ ಹೊಸ ವಿಧಾನದಲ್ಲಿ ಚೀನಾ ಮೂಲದ ಸೈಬರ್ ಕ್ರೈಂ ಜನರನ್ನು ವಂಚಿಸುತ್ತಿದೆ ಎಂದು ರಾಜೇಶ್ ಕುಮಾರ್ ಹೇಳಿದ್ದಾರೆ.

2024ರಲ್ಲಿ ಭಾರತದಲ್ಲಿ ಬರೋಬ್ಬರಿ 6 ಲಕ್ಷ ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿದೆ. ಒಟ್ಟು 7,061 ಕೋಟಿ ರೂಪಾಯಿ ವಂಚನೆ ಪ್ರಕರಣ ದಾಖಲಾಗಿದೆ. ಈ ಪೈಕಿ 812 ಕೋಟಿ ರೂಪಾಯಿ ಹಣವನ್ನು ವಂಚಕರಿಂದ ವಸೂಲಿ ಮಾಡಲಾಗಿದೆ.   ಕಳೆದ ನಾಲ್ಕು ತಿಂಗಳಲ್ಲಿ ಬರೋಬ್ಬರಿ 3.2 ಲಕ್ಷ ನಕಲಿ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ. 3,000 URL, 595 ಆ್ಯಪ್, 5.3 ಲಕ್ಷ ಸಿಮ್ ಕಾರ್ಡ್, 80,000  IMEI ನಂಬರ್ ಬ್ಲಾಕ್ ಮಾಡಲಾಗಿದೆ. 

ಪ್ರಾಡಕ್ಟ್ ಕೊರಿಯರ್‌ ಹೆಸರಲ್ಲಿ ಟೆಕ್ಕಿಗೆ ವಂಚನೆ, ನಿಮಗೂ ಕಾಲ್ ಮಾಡಬಹುದು ಖದೀಮರು!

click me!