ಅಜ್ಜಿಯನ್ನ ಕೊಂದು ಆಕೆಯ ರಕ್ತದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿದ ಮೊಮ್ಮಗ!

By Ravi Janekal  |  First Published Oct 20, 2024, 7:05 PM IST

ವ್ಯಕ್ತಿಯೊಬ್ಬ ತನ್ನ ಅಜ್ಜಿಯನ್ನು ಕೊಂದು ಆಕೆಯ ರಕ್ತದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿ ತಾನೂ ತ್ರಿಶೂಲ ಇರಿದುಕೊಂಡು ಆತ್ಮಹತ್ಯೆಗೆ  ಮಾಡಿಕೊಂಡ ಭೀಕರ ಘಟನೆ ನಡೆದಿದೆ.


ಛತ್ತೀಸ್‌ಗಢ (ಅ.20): ದೇಶ ಆಧುನಿಕವಾಗಿ ಎಷ್ಟೇ ಮುಂದುವರಿದಿದ್ದರೂ ಕೆಲವು ಸ್ಥಳಗಳಲ್ಲಿ ನರಬಲಿಯಂತಹ ಮೂಢನಂಬಿಕೆಗಳು ಇನ್ನೂ ನಿಂತಿಲ್ಲ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಛತ್ತೀಸ್‌ಗಢದಲ್ಲಿ ವ್ಯಕ್ತಿಯೊಬ್ಬ ತನ್ನ ಅಜ್ಜಿಯನ್ನು ಕೊಂದು ಆಕೆಯ ರಕ್ತದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿ ತಾನೂ ತ್ರಿಶೂಲ ಇರಿದುಕೊಂಡು ಆತ್ಮಹತ್ಯೆಗೆ  ಮಾಡಿಕೊಂಡ ಭೀಕರ ಘಟನೆ ನಡೆದಿದೆ.

ಗುಲ್ಶನ್ ಗೋಸ್ವಾಮಿ(30) ಆರೋಪಿ, ರುಕ್ಮಿಣಿ ಗೋಸ್ವಾಮಿ (70) ಕೊಲೆಯಾದ ಅಜ್ಜಿ.  ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ನಂಕಟ್ಟಿ ಗ್ರಾಮದವರಾದ ಗುಲ್ಶನ್ ಗೋಸ್ವಾಮಿ. ಅಜ್ಜಿಯೊಂದಿಗೆ ಶಿವ ದೇವಾಲಯದ ಬಳಿಯ ಮನೆಯಲ್ಲಿ ವಾಸಿಸುತ್ತಿದ್ದರು. ಶಿವ ಭಕ್ತನಾಗಿದ್ದ ಗುಲ್ಶನ್ ಗೋಸ್ವಾಮಿ ಪ್ರತಿದಿನ ಶಿವ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದ.

Latest Videos

undefined

ಸವದತ್ತಿ ರೇಣುಕಾದೇವಿ ದೇಗುಲ: ಮೂಢನಂಬಿಕೆ ವಿರೋಧಿಸುವ ಸಚಿವ ಜಾರಕಿಹೊಳಿಗೆ ನಿಂಬೆ ಹಣ್ಣು ನೀಡಿದ ಅರ್ಚಕ!

ಕಳೆದ ಶನಿವಾರ ಸಂಜೆ ಗುಲ್ಶನ್ ತನ್ನ ಅಜ್ಜಿಯನ್ನ ಶಿವನ ತ್ರಿಶೂಲದಿಂದ ಇರಿದು ಕೊಂದಿದ್ದಾನೆ. ಬಳಿಕ ವ್ಯಕ್ತಿ ಶಿವ ದೇವಾಲಯಕ್ಕೆ ಹೋಗಿ ಆಕೆಯ ರಕ್ತವನ್ನು ಶಿವಲಿಂಗಕ್ಕೆ ಅರ್ಪಿಸಿದ್ದಾನೆ. ನಂತರ ಮನೆಗೆ ಮರಳಿ ಅದೇ ತ್ರಿಶೂಲದಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳು ಗುಲ್ಶನ್ ನನ್ನು ಚಿಕಿತ್ಸೆಗಾಗಿ ರಾಯಪುರ ಏಮ್ಸ್ ಗೆ ರವಾನಿಸಿದ್ದಾರೆ. ವೃದ್ಧೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂಢನಂಬಿಕೆಗಳಿಂದಾಗಿ ಗುಲ್ಶನ್ ತನ್ನ ಅಜ್ಜಿಯನ್ನು ಬಲಿಕೊಟ್ಟಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಘಟನೆಯಿಂದ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿದೆ. 

click me!