ಪ್ರೀತಿ ಬಲೆಯಲ್ಲಿ ಸಿಕ್ಕಿಬಿದ್ದ ಯುವತಿ ದೇವಸ್ಥಾನದಲ್ಲಿ ಮದುವೆ, ಕೆಲ ದಿನಗಳಲ್ಲೇ ಪತ್ನಿಯ ಅಶ್ಲೀಲ ವಿಡಿಯೋ ಲೀಕ್‌!

Published : Jun 29, 2022, 03:27 PM IST
ಪ್ರೀತಿ ಬಲೆಯಲ್ಲಿ ಸಿಕ್ಕಿಬಿದ್ದ ಯುವತಿ ದೇವಸ್ಥಾನದಲ್ಲಿ ಮದುವೆ, ಕೆಲ ದಿನಗಳಲ್ಲೇ ಪತ್ನಿಯ ಅಶ್ಲೀಲ ವಿಡಿಯೋ ಲೀಕ್‌!

ಸಾರಾಂಶ

* ಪ್ರೀತಿಯಲ್ಲಿ ಬಿದ್ದ ಯುವತಿಗೆ ಶಾಕ್ * ಮದುವೆಯಾದ ಬಳಿಕ ಗಂಡನಿಂದ ಕುಕೃತ್ಯ * ಮದುವೆಯಾದ ಕೆಲ ದಿನಗಳಲ್ಲೇ ಪತ್ನಿಯ ಅಶ್ಲೀಲ ವಿಡಿಯೋ ಲೀಕ್‌  

ಚಂದೌಲಿ(ಜೂ.29): ಸಾಮಾನ್ಯವಾಗಿ ಜನರು ಪ್ರೀತಿಯಲ್ಲಿ ಮೋಸ ಹೋಗುತ್ತಾರೆ ಮತ್ತು ಅಂತಹ ಕಥೆಗಳು ಪ್ರತಿದಿನವೂ ಮುನ್ನೆಲೆಗೆ ಬರುತ್ತವೆ. ಪ್ರೀತಿಯಲ್ಲಿ ಮೋಸ ಹೋಗುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಕೆಲವೊಮ್ಮೆ ಜನರು ಪ್ರೀತಿಯಲ್ಲಿ ಮೋಸ ಹೋದ ನಂತರ ದೊಡ್ಡ ಹೆಜ್ಜೆಗಳನ್ನು ಇಡುತ್ತಾರೆ. ಆದರೆ ಚಂದೌಲಿಯ ಇಲಿಯಾ ಪ್ರದೇಶದಿಂದ ವಿಚಿತ್ರ ಕಥೆಯೊಂದು ಹೊರಬಿದ್ದಿದೆ. ಒಬ್ಬ ದುಷ್ಟ ಯುವಕ ಮೊದಲು ಯುವತಿಯನ್ನು ತನ್ನ ಪ್ರೀತಿಯ ಬಲೆಯಲ್ಲಿ ಸಿಲುಕಿಸಿ, ಆ ನಂತರ ಮನೆಯಿಂದ ಓಡಿಹೋಗಿ ಮದುವೆಯಾಗಿದ್ದಾನೆ. ಕಿರಾತಕ ಗಂಡನ ಕುತಂತ್ರ ತಿಳಿಯದ ಯುವತಿ, ಈ ಬಗ್ಗೆ ತಲೆ ಕೆಡಿಸಿಕೊಳ್ಳಲಾರದಷ್ಟು ಹುಚ್ಚು ಪ್ರೀತಿಗೆ ಒಳಗಾಗಿದ್ದಳು.

ವಿರೋಧಿಸಿದ್ದಕ್ಕೆ ಹೆಂಡತಿಯನ್ನು ಥಳಿಸುತ್ತಿದ್ದ

ಮದುವೆಯಾದ ನಂತರ, ಯುವಕ ತನ್ನ ಸ್ವಂತ ಹೆಂಡತಿಯ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾನೆ. ಪ್ರತಿಭಟನೆಗೆ ಮುಂದಾದಾಗ ಪತಿ ತನಗೆ ಥಳಿಸಿ ಮನೆಯಿಂದ ಹೊರ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಈ ಘಟನೆಯಿಂದ ನೊಂದ ಬಾಲಕಿ ಪೊಲೀಸ್ ಠಾಣೆಗೆ ಬಂದು ಯುವಕನ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ತಿಯೇರಿ ಗ್ರಾಮದ ಸುಜಿತ್ ಯಾದವ್ ಎಂಬಾತ ಯುವತಿಯನ್ನು ತನ್ನ ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಮೂರು ತಿಂಗಳ ಹಿಂದೆ ಲಖನೌಗೆ ಕರೆದೊಯ್ದಿದ್ದ. ಅಲ್ಲಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ಬಳಿಕ ಮೇ 20ರಂದು ಆರೋಪಿ ಯುವಕ ಸುಜಿತ್ ತನ್ನೊಂದಿಗೆ ಮನೆಗೆ ಬಂದು, ತನ್ನ ಅಶ್ಲೀಲ ವಿಡಿಯೋ ಹಾಗೂ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ.

ಮನೆಯಿಂದ ಹೊರಹಾಕಿದ ನಂತರ, ದೂರು ಕೊಟ್ಟ ಯುವತಿ

ಹುಡುಗಿಯ ಪ್ರಕಾರ, ವಿಡಿಯೋ ಫೋಟೋ ವೈರಲ್ ಆಗಿರುವ ಬಗ್ಗೆ ತಿಳಿದಾಗ ಆಕೆ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಾರೆ. ನಂತರ ಪತಿ ಸುಜಿತ್ ಆಕೆಯನ್ನು ಥಳಿಸಿ ಮನೆಯಿಂದ ಓಡಿಸಿದ್ದಾನೆ. ಇದಾದ ನಂತರ ಸಂತ್ರಸ್ತ ಯುವತಿ ಇಲಿಯಾ ಪೊಲೀಸ್ ಠಾಣೆಗೆ ಬಂದು ಘಟನೆಯ ಬಗ್ಗೆ ದೂರು ನೀಡಿದ್ದಾಳೆ. ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ಯುವಕನ ವಿರುದ್ಧ ವೈದ್ಯಕೀಯ ಪರೀಕ್ಷೆ ನಡೆಸುವುದರೊಂದಿಗೆ ಐಪಿಸಿ ಸೆಕ್ಷನ್ 376, 354, 323, 504 ಮತ್ತು 67 ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆ ಪ್ರಭಾರಿ ಅಮಿತ್ ಕುಮಾರ್ ಮಾತನಾಡಿ, ಯುವತಿಯ ದೂರಿನ ಆಧಾರದ ಮೇಲೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!