ಸೀಡಿ ಪ್ರಕರಣ ದಿನದಿಂದ ದಿನಕ್ಕೆ ಹೊರ ತಿರುವು ಪಡೆದುಕೊಳ್ಳುತ್ತಿದ್ದ ಇದೀಗ ಸೀಡಿ ಲೇಡಿ ಗಂಭೀರ ಆರೋಪ ಮಾಡಿದ್ದಾಳೆ. ಸಿಎಂ ಹೇಳಿಕೆಯೊಂದು ಭಾರೀ ಆತಂಕ ಮೂಡಿಸಿದೆ ಎಂದಿದ್ದಾಳೆ.
ಬೆಂಗಳೂರು (ಏ.04): ಸೀಡಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗು ಸಿಗುತ್ತಲೇ ಇದೆ. ಇದೀಗ ಪೊಲೀಸ್ ಕಮಿಷನರ್‌ಗೆ ಸೀಡಿ ಲೇಡಿ ಪತ್ರ ಬರೆದಿದ್ದಾಳೆ.
ರಮೇಶ್ ಜಾರಕಿಹೊಳಿ ವಿರುದ್ಧ ಪೊಲೀಸ್ ಕಮೀಷನರ್ ಕಮಲ್ ಪಂತ್ ಗೆ ಪತ್ರ ಬರೆದ ಸೀಡಿ ಲೇಡಿ SIT ಮೇಲೆ ರಮೇಶ್ ಜಾರಕಿಹೊಳಿ ರಾಜಕೀಯ ಒತ್ತಡ ಹಾಕಿಸುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ.
ಮಾರ್ಚ್ 30ನೇ ತಾರೀಖಿನಿಂದ ಪ್ರತಿದಿನ ನನ್ನನ್ನ SIT ವಿಚಾರಣೆ ಮಾಡುತ್ತಿದೆ. ಕೇಸ್ ನಲ್ಲಿ ನಾನೂ ಸಂತ್ರಸ್ತೆಯೋ ಅಥವಾ ಅಪರಾಧಿಯೋ ಅನ್ನೋ ಅನುಮಾನ ಕಾಡುತ್ತಿದೆ. ನನಗೆ ವಿಚಾರಣೆ ಮಾಡಿದಷ್ಟು ರಮೇಶ್ ಜಾರಕಿಹೊಳಿಗೆ ವಿಚಾರಣೆ ಮಾಡಿಲ್ಲ. ರಮೇಶ್ ಜಾರಕಿಹೊಳಿ ನೀಡಿರುವ ದೂರಿನಲ್ಲಿ ನನ್ನ ಹೆಸರು ಇಲ್ಲದಿದ್ದರೂ ನನ್ನ ಪಿಜಿಗೆ ದಾಳಿ ಮಾಡಿ ಸಾಕ್ಷ್ಯಗಳನ್ನ ನಾಶ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಸೀಡಿ ಲೇಡಿ - ಜಾರಕಿಹೊಳಿ ಏನೆಂದು ಕರೆಯುತ್ತಿದ್ದರು : ಏನೇನ್ ಉಡುಗೊರೆ ಕೊಟ್ಟಿದ್ದರು?
ದೂರಿನಲ್ಲಿ ಜಾರಕಿಹೊಳಿ ಆರೋಪಿಯಾಗಿದ್ದರು. ಅವರನ್ನ ಒಂದು ದಿನ ಮಾತ್ರ ವಿಚಾರಣೆ ನಡೆಸಿ, ತಿರುಗಾಟ ನಡೆಸಲು ಬಿಟ್ಟಿದ್ದಾರೆ. ಮುಖ್ಯಮಂತ್ರಿಗಳು ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗಿ ಹೊರಗಡೆ ಬರುತ್ತಾರೆ ಎಂದಿದ್ದಾರೆ. ಇದು ನನಗೆ ಸಾಕಷ್ಟು ಆಂತಕ ಉಂಟು ಮಾಡಿದೆ. ನನ್ನ ಅನುಮತಿ ಕೇಳದೆ ಗೃಹ ಇಲಾಖೆ ಕೇಸ್ ಗೆ ಪಿಪಿ (ಪಬ್ಲಿಕ್ ಪ್ರಾಸಿಕ್ಯೂಟರ್) ಯನ್ನ ನೇಮಕ ಮಾಡಿದೆ. ಇದಕ್ಕೆ ನನ್ನ ಆಕ್ಷೇಪವಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಕೇಸ್ ನಲ್ಲಿ ನನ್ನನ್ನು ಒಬ್ಬ ಅಸಹಾಯಕ ಮಹಿಳೆಯಾಗಿ ನೋಡಿ. ಸರ್ಕಾರದ ಒತ್ತಡಕ್ಕೆ ಮಣಿಯದೆ ನ್ಯಾಯ ಕೊಡಿಸಬೇಕೆಂದಿ ಸೀಡಿ ಲೇಡಿ ಪತ್ರದಲ್ಲಿ ಮನವಿ ಮಾಡಿದ್ದಾರೆ.