ಸೀಡಿ ಲೇಡಿ ಎಸ್‌ಐಟಿಗೆ ಸಂಪೂರ್ಣ ವಾಟ್ಸಾಪ್ ಚಾಟ್ ಹಿಸ್ಟರಿ ನೀಡಿದ್ದು ಇದರಲ್ಲಿ ಇಬ್ಬರ ನಡುವೆ ತೀರಾ ಖಾಸಗಿಯಾಗಿ ನಡೆದ ಚಾಟಿಂಗ್‌ಗಳು ಲಭ್ಯವಾಗಿದೆ.
ಬೆಂಗಳೂರು (ಏ.01): ನಾನು ಕಿರು ಚಿತ್ರ ನಿರ್ಮಾಣ ಸಲುವಾಗಿ ಆಗ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದೆ. ನಂತ‡ರ ನನ್ನೊಂದಿಗೆ ತುಂಬಾ ಸಲುಗೆಯಿಂದ ವರ್ತಿಸಲು ಶುರು ಮಾಡಿದ್ದರು. ಮೊಬೈಲ್ ನಂಬರ್ ಪಡೆದು ಅವರೇ ಕರೆ ಮಾಡುತ್ತಿದ್ದರು. ಕಿರುಚಿತ್ರ ನಿರ್ಮಾಣ ಬೇಡ. ನಿನಗೆ ಸರ್ಕಾರಿ ಉದ್ಯೋಗ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಈ ಮಾತಿನ ಮೇಲೆ ವಿಶ್ವಾಸಗೊಂಡ ನಾನು, ಅವರೊಂದಿಗೆ ಆತ್ಮೀಯವಾಗಿ ನಡೆದುಕೊಂಡೆ. ನಂತರ ನನ್ನನ್ನು ಲೈಂಗಿಕವಾಗಿ ಶೋಷಿಸಿ ವಂಚಿಸಿದ್ದಾರೆ ಎಂದು ಯುವತಿ ಹೇಳಿದ್ದಾಳೆ ಎಂದು ತಿಳಿದು ಬಂದಿದೆ.
ನನಗೆ ಆಗಾಗ್ಗೆ ಮೊಬೈಲ್ ಕರೆ ಹಾಗೂ ವಾಟ್ಸ್ ಆ್ಯಪ್‌ನಲ್ಲಿ ವಿಡಿಯೋ ಕರೆಗಳನ್ನು ಅವರು ಮಾಡುತ್ತಿದ್ದರು. ಈ ವೇಳೆ ಅಶ್ಲೀಲವಾಗಿ ಸಂಭಾಷಣೆ ನಡೆಸುತ್ತಿದ್ದರು. ಇದರಿಂದ ನನಗೆ ತೀರಾ ಮುಜುಗರವಾಗುತ್ತಿತ್ತು ಎಂದು ಆಕೆ ಹೇಳಿರುವುದಾಗಿ ಗೊತ್ತಾಗಿದೆ. ಅಲ್ಲದೆ, ಎಸ್‌ಐಟಿಗೆ ಯುವತಿ ಸಲ್ಲಿಸಿರುವ 300 ಪುಟಗಳ ವಾಟ್ಸ್ ಆ್ಯಪ್ ಚಾಟಿಂಗ್ ಹಿಸ್ಟರಿಯಲ್ಲಿ ಮಾಜಿ ಸಚಿವರು ತೀರಾ ಖಾಸಗಿಯಾಗಿ ಮಾತುಕತೆ ನಡೆಸಿರುವುದು ತಿಳಿದು ಬಂದಿದೆ. ಯುವತಿಗೆ ಪ್ರೀತಿಯಿಂದ ಬೇಬಿ ಎಂದೂ ಮೆಸೇಜ್‌ಗಳಲ್ಲಿ ಸಂಬೋಧಿಸಿದ್ದಾರೆ ಎನ್ನಲಾಗಿದೆ.
ಸೀಡಿ ಲೇಡಿ-ಜಾರಕಿಹೊಳಿಯ 300 ಪುಟ ವಾಟ್ಸಪ್ ಚಾಟ್ ಹಿಸ್ಟರಿ : ಯಾವ ರೀತಿ ನಡೆದಿತ್ತು..?
ಸರ್ಕಾರದ ಕೆಲಸಗಳಲ್ಲಿ ನಿರತರಾಗಿದ್ದಾಗಲೂ, ಅಧಿಕಾರಿಗಳ ಜತೆ ಸಭೆಯಲ್ಲಿದ್ದಾಗಲೂ ಯುವತಿ ಜತೆ ವಾಟ್ಸ್ ಆ್ಯಪ್‌ಗೆ ಸಂದೇಶಗಳು ರವಾನಿಯಾಗಿವೆ. ಬೆಳಗ್ಗೆ ಎದ್ದಾಗ ಗುಡ್ ಮಾರ್ನಿಂಗ್, ರಾತ್ರಿ ಮಲಗುವ ಮುನ್ನ ಗುಡ್ ನೈಟ್ ಸಂದೇಶಗಳು ಕೂಡ ವಿನಿಮಯವಾಗಿವೆ ಎಂದು ಮೂಲಗಳು ತಿಳಿಸಿವೆ.
ಉಡುಗೋರೆ : ಸೀಡಿಲೇಡಿಗೆ ಸಚಿವ ರಮೇಶ್ ಜಾರಕಿಹೊಳಿ ಹಲವು ರೀತಿಯ ಚಿನ್ನಾಭರಣ ಹಾಗೂ ಮೊಬೈಲ್ ಕೊಡಿಸಿದ್ದರು. ದುಬಾರಿ ಉಡುಗೋರೆಗಳನ್ನು ನೀಡಿದ್ದರು. ಸಲುಗೆಯಿಂದ ಇರುತ್ತಿದ್ದರೆಂದು ಆಕೆ ತನಿಖಾ ತಂಡದ ಮುಂದೆ ಹೇಳಿದ್ದಾಳೆ.