ಭಾರೀ ವಂಚನೆ, ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಪಿಎ ಅರೆಸ್ಟ್!

By Suvarna News  |  First Published Jul 1, 2021, 8:59 PM IST

* ಕೆಲಸ ಕೊಡಿಸುತ್ತೇನೆ ಎಂದು ಸಚಿವರ ಹೆಸರಿನಲ್ಲಿ ವಂಚನೆ
* ಸಚಿವ ಶ್ರೀರಾಮುಲು ಪಿಎ ಬಂಧನ
* ಸಿಸಿಬಿ ಅಧಿಕಾರಿಗಳಿಂದ ಪಿಎ ರಾಜು ಅರೆಸ್ಟ್


ಬೆಂಗಳೂರು(ಜು. 01) ಬಹುಕೋಟಿ ವಂಚನೆ ಆರೋಪದ ಮೇಲೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಪಿಎ ಬಂಧನವಾಗಿದೆ.  ಸಚಿವರ ಹೆಸರಲ್ಲಿ ಕೋಟ್ಯಂತರ ರೂ. ವಸೂಲಿ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಶ್ರೀರಾಮುಲು ಪಿಎ ರಾಜು ವಿರುದ್ದ ಸಿಸಿಬಿಗೆ ದೂರುಗಳು ಬಂದಿದ್ದವು. ದೂರುಗಳ ಹಿನ್ನೆಲೆ ಅಧಿಕಾರಿಗಳಿಂದ ಸಚಿವರ ಪಿಎ ಬಂಧನವಾಗಿದೆ. ವಂಚನೆ ಸಂಬಂಧಿಸಿದ ಸಾಕ್ಷಿಗಳನ್ನ ಕಲೆ ಹಾಕಿ ಬಂಧಿಸಲಾಗಿದೆ.

Tap to resize

Latest Videos

undefined

ಯುವಕರೇ ಹುಷಾರ್, ಬಣ್ಣದ ಮಾತಿಗೆ ಮರುಳಾದರೆ ಟೋಪಿ

ಸಿಎಂ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ  ವಿಜಯೇಂದ್ರ ಹಾಗೂ ಶ್ರೀರಾಮುಲು ಹೆಸರು ಹೇಳಿಕೊಂಡು ವಂಚನೆ ಮಾಡಿದ್ದಾರೆ ಎನ್ನುವುದು ಆರೋಪ. ಕೆಲಸ ಕೊಡಿಸುತ್ತೇನೆ ಎಂದು ಹೇಳಿ ವಂಚಿಸಿದ್ದರು ಎನ್ನಲಾಗಿದೆ.

ಗುರುವಾರ ಸಂಜೆ ಸಚಿವ ಶ್ರೀರಾಮುಲು ಮನೆಯ ಬಳಿ ಪಿಎ ರಾಜುವನ್ನು ವಶಕ್ಕೆ ಪಡೆಯಲಾಗಿದೆ. ಹಲವು ವರ್ಷಗಳಿಂದ ಶ್ರೀರಾಮುಲು ಜತೆಗಿದ್ದು ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಜನಾರ್ದನ ರೆಡ್ಡಿ ಅವವರಿಗೂ ಆಪ್ತವಾಗಿದ್ದರು. 

 

click me!