ವಿದ್ಯಾರ್ಥಿನಿ ಮೇಲೆ ಮೈಸೂರು ವಿವಿ ಪ್ರಾಧ್ಯಾಪಕನಿಂದ ರೇಪ್‌

By Kannadaprabha News  |  First Published Aug 6, 2021, 7:50 AM IST

*  ವಿದ್ಯಾರ್ಥಿನಿ ಪರ ನಿಂತ ಪ್ರಾಧ್ಯಾಪಕನ ಪತ್ನಿ
*  ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರ ಅತಿಥಿಯಾದ ಪ್ರಾಧ್ಯಾಪಕ
*  ತಪ್ಪಿತಸ್ಥ ಪತಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ ಪತ್ನಿ 
 


ಮೈಸೂರು(ಆ.06): ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿರುವ ಕ್ವಾಟ್ರಸ್‌ನಲ್ಲಿ ಸಂಶೋಧನಾ ವಿದ್ಯಾರ್ಥಿನಿಯ ಮೇಲೆ ಪ್ರಾಧ್ಯಾಪಕರೊಬ್ಬರು ಗುರುವಾರ ಮಧ್ಯಾಹ್ನ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಸಂತ್ರಸ್ತ ಮಹಿಳೆಯ ಪರ ಪ್ರಾಧ್ಯಾಪಕನ ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ತಪ್ಪಿತಸ್ಥ ಪತಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ರಾಮಚಂದ್ರಪ್ಪ ಎಂಬುವರೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರ ಅತಿಥಿಯಾಗಿದ್ದಾರೆ. ಮಂಡ್ಯದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂಶೋಧನಾಯನ್ನು ಪಿಎಚ್‌ಡಿಗೆ ಸಹಾಯ ಮಾಡುವುದಾಗಿ ಕರೆಯಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

Latest Videos

undefined

9ರ ಬಾಲಕಿ ಮೇಲೆ ಸ್ಮಶಾನದಲ್ಲಿ ಅತ್ಯಾಚಾರ, ಶವ ಸುಟ್ಟುಹಾಕಿ ಪ್ರಕರಣ ಮುಚ್ಚಿಹಾಕಲು ಯತ್ನ!

ಗುರುವಾರ ಮಧ್ಯಾಹ್ನ 3.45ರ ಹೊತ್ತಿಗೆ ಪಿಎಚ್‌ಡಿಗೆ ಸಹಾಯ ಮಾಡುವುದಾಗಿ ಸಂಶೋಧನಾ ವಿದ್ಯಾರ್ಥಿನಿಯನ್ನು ಮನೆಗೆ ಕರೆಯಿಸಿಕೊಂಡ ರಾಮಚಂದ್ರಪ್ಪ, ಈ ಕೃತ್ಯ ಎಸಗಿದ್ದಾರೆ ಎಂದು ದೂರಲಾಗಿದೆ. ಈ ವೇಳೆ ಕರ್ತವ್ಯ ನಿಮಿತ್ತ ಸ್ಟಡಿ ಮೇಟಿರಿಯಲ್‌ ತರಲು ವಿವಿಗೆ ತೆರಳಿದ್ದ ರಾಮಚಂದ್ರಪ್ಪ ಅವರ ಪತ್ನಿ (ಮೈಸೂರು ವಿವಿ ಪ್ರಾಧ್ಯಾಪಕಿ) ವಾಪಸ್‌ ಮನೆಗೆ ಬಂದಿದ್ದು, ಮಹಿಳೆಯನ್ನು ರಕ್ಷಿಸಿದ್ದು, ಆಕೆಯಿಂದ ದೂರು ಕೊಡಿಸುವ ಮೂಲಕ ಪೊಲೀಸರು ಪತಿ ವಿರುದ್ಧ ಕ್ರಮ ಕೈಗೊಳ್ಳಲು ಪತ್ನಿ ನೆರವಾಗಿದ್ದಾರೆ.

ಈ ಸಂಬಂಧ ರಾಮಚಂದ್ರಪ್ಪ ವಿರುದ್ಧ ಪ್ರಕರಣ ದಾಖಲಿಸಿ ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಸಂತ್ರಸ್ತ ಮಹಿಳೆ ಜಯಲಕ್ಷ್ಮೀಪುರಂ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ದೂರು ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
 

click me!