
ಬೆಂಗಳೂರು : ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಬೈಕ್ ಸವಾರನಿಗೆ ಸಹಾಯ ಮಾಡಲು ಹೋಗಿ ಕಾರಿನ ಚಾಲಕರೊಬ್ಬರು ಒಂದು ಸಾವಿರ ರು. ದಂಡ ತೆತ್ತಿದ್ದಾರೆ...!!
ಆವಲಹಳ್ಳಿ ಸಮೀಪದ ಹೊಸಕೋಟೆ ರಸ್ತೆಯಲ್ಲಿ ಈ ಘಟನೆ ಮಂಗಳವಾರ ಬೆಳಗ್ಗೆ ನಡೆದಿದ್ದು, ಕಾರು ಚಾಲಕ ಅಜೀಜ್ ಅವರಿಗೆ ಅಜಾಗರೂಕತೆ ಚಾಲನೆ ಆರೋಪದ ಮೇರೆಗೆ ಕೆ.ಆರ್. ಪುರ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ. ಈ ದಂಡ ಪಾವತಿಸಿ ಅವರು ತೆರಳಿದ್ದಾರೆ.
ಹೊಸಕೋಟೆ ರಸ್ತೆಯಲ್ಲಿ ಬೈಕ್ ಕೆಟ್ಟು ನಿಂತಿದ್ದನ್ನು ಗಮನಿಸಿದ ಅಜೀಜ್ ಅವರು, ಆ ಬೈಕ್ ಸವಾರನ ನೆರವಿಗೆ ಧಾವಿಸಿದ್ದಾರೆ. ತಮ್ಮ ಕಾರಿನ ಡೋರ್ ಹಿಡಿದುಕೊಂಡ ಬೈಕ್ ಸವಾರನನ್ನು ಎಳೆದುಕೊಂಡು ಅವರು ಸಾಗಿದ್ದಾರೆ.
ಈ ವಿಡಿಯೋವನ್ನು ಚಿತ್ರೀಕರಿಸಿದ ಸಾರ್ವಜನಿಕರೊಬ್ಬರು, ಸತ್ಯಾಸತ್ಯತೆ ತಿಳಿಯದೆ ರಸ್ತೆಯಲ್ಲಿ ಬೈಕ್ ಸವಾರನ ಹುಚ್ಚಾಟ ಎಂದು ಹೇಳಿ ವಿಡಿಯೋ ಹರಿಬಿಟ್ಟಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮಾಹಿತಿ ಆಧರಿಸಿ ಕಾರನ್ನು ಪತ್ತೆ ಹಚ್ಚಿದಾಗ ಪೊಲೀಸರಿಗೆ ನಿಜ ಸಂಗತಿ ಗೊತ್ತಾಗಿದೆ. ಆದರೆ ಕಾರು ಬಾಗಿಲನ್ನು ಬೈಕ್ ಸವಾರ ಹಿಡಿದುಕೊಂಡಿದ್ದರೂ ಕಾರು ಚಾಲನೆ ಮಾಡಿದ ತಪ್ಪಿಗೆ ಅಜೀಜ್ ಅವರಿಗೆ ದಂಡ ಬಿದ್ದಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ