13 ವರ್ಷದ ಬಾಲಕಿಗೆ ಹಾಟ್‌ ಎಂದಿದ್ದ 50 ವರ್ಷದ ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ!

By Santosh Naik  |  First Published Dec 17, 2023, 7:11 PM IST

13 ಬಾಲಕಿಗೆ ಹಾಟ್‌ ಎಂದಿದ್ದಲ್ಲದೆ, ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಮುಂಬೈ ಸ್ಪೆಷಲ್‌ ಕೋರ್ಟ್‌ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
 


ಮುಂಬೈ (ಡಿ.17): ಅಪ್ರಾಪ್ತ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿ ಆಕೆಯನ್ನು "ಹಾಟ್" ಎಂದು ಕರೆದಿದ್ದಕ್ಕಾಗಿ 50 ವರ್ಷದ ವ್ಯಕ್ತಿಯೊಬ್ಬನಿಗೆ ಇಲ್ಲಿನ ವಿಶೇಷ ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ, ಈ ಕೃತ್ಯವು ಆರೋಪಿಯು ಲೈಂಗಿಕ ಕ್ರಿಯೆಗೆ ಉದ್ದೇಶಿಸಿದ್ದಾನೆಂದು ತೋರಿಸುತ್ತದೆ ಎಂದು ಕೋರ್ಟ್‌ ಹೇಳಿದೆ. ವಿಶೇಷ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ಎಸ್ ಸಿ ಜಾಧವ್ ಅವರು ಡಿಸೆಂಬರ್ 14 ರಂದು ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಹಿಂಬಾಲಿಸುವುದು ಮತ್ತು ಕಿರುಕುಳ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿದ್ದಾರೆ. ಇದರ ವಿವರವಾದ ಆದೇಶ ಶನಿವಾರ ಲಭ್ಯವಾಗಿದೆ. ಪ್ರಕರಣವು 2016ರ ಮೇ 24 ರಂದು ನಡೆದಿತ್ತು. ಅಂದು ಸಂತ್ರಸ್ಥ ಯುವತಿಗೆ 13 ವರ್ಷ ವಯಸ್ಸಾಗಿತ್ತು.

ಸಂತ್ರಸ್ತೆ ಮತ್ತು ಪ್ರಾಸಿಕ್ಯೂಷನ್ ಸಾಕ್ಷಿಯ ಒಟ್ಟಾರೆ ಸಾಕ್ಷ್ಯವನ್ನು ಪರಿಶೀಲಿಸಿದಾಗ, 2016 ಮೇ 24ರಂದು ಸಂತ್ರಸ್ತೆ ತನ್ನ ಸ್ನೇಹಿತನೊಂದಿಗೆ ಮಸೀದಿಯ ಬಳಿ ನಿಂತಿದ್ದಾಗ ಆರೋಪಿಯು ಅನುಚಿತ ಸ್ಥಳದಲ್ಲಿ ಸ್ಪರ್ಶಿಸಿದಾಗ ಆತನ ಉದ್ದೇಶ ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ. ಈ ವೇಳೆ ಆಕೆಯನ್ನು ಉದ್ದೇಶಿಸಿ, 'ವೆರಿ ಹಾಟ್‌' ಎಂದು ಹೇಳಿದ್ದ. ಅದಲ್ಲದೆ, ನಿನ್ನ ಕೆನ್ನೆಗೆ ಮುತ್ತಿಡುವ ಆಸೆ ಇದೆ, ನಿನ್ನನ್ನು ಎತ್ತಾಕೊಂಡು ಹೋಗುತ್ತೇನೆ ಎಂದು ಹೇಳಿದ್ದ.

ನಟಿಯ ರೇಪ್‌ ಮಾಡಿದ್ರಾ ಜೆಎಸ್‌ಡಬ್ಲ್ಯು ಗ್ರೂಪ್‌ ಸಿಎಂಡಿ ಸಜ್ಜನ್‌ ಜಿಂದಾಲ್‌, ಮುಂಬೈನಲ್ಲಿ ಎಫ್‌ಐಆರ್‌

Tap to resize

Latest Videos

"ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸುವುದು ಮತ್ತು ಅಂತಹ ಪದಗಳನ್ನು ಹೇಳುವುದು ಆತ ಲೈಂಗಿಕ ದೌರ್ಜನ್ಯ ಎಸಗುವ ಲೈಂಗಿಕ ಉದ್ದೇಶದಿಂದ ಮಾತ್ರ ಎನ್ನುವುದ ತೋರುತ್ತದೆ. ಅದರಲ್ಲಿ ಭರೆ ಯಾವುದೇ ಕಾರಣವಿರುವುದು ಕಾಣುತ್ತಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ. ಆರೋಪಿಗಳು ಬಾಲಕಿಯನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂಬುದು ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ. 

370ನೇ ವಿಧಿ ವಾಪಾಸ್‌ ತರುವ ಯಾವ ಶಕ್ತಿ ಕೂಡ ಜಗತ್ತಿನಲ್ಲಿಲ್ಲ, ಸಂಸತ್ತಿನಲ್ಲಾದ ಘಟನೆ ಕಳವಳಕಾರಿ: ಪ್ರಧಾನಿ ಮೋದಿ

click me!