ಕ್ಯಾಬ್​ನಲ್ಲಿ ಪರ್ಸನಲ್ ವಿಚಾರ ಮಾತನಾಡುವ ಮುನ್ನ ಎಚ್ಚರ: ಮಾತಾಡೋದು ಕದ್ದು ಕೇಳಿ ಡ್ರೈವರ್ ಬ್ಲ್ಯಾಕ್‌ಮೇಲ್

By Govindaraj S  |  First Published Aug 2, 2023, 9:44 AM IST

ಕ್ಯಾಬ್‌ನಲ್ಲಿ ಪರ್ಸನಲ್ ವಿಚಾರ ಮಾತನಾಡುವ ಮುನ್ನ ಎಚ್ಚರ. ಹೌದು! ಇದೀಗ ಕ್ಯಾಬ್‌ನಲ್ಲಿ ಪರ್ಸನಲ್ ವಿಚಾರ ಮಾತನಾಡಿ  ಮಹಿಳೆ ಲಕ್ಷ ಲಕ್ಷ ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.


ಬೆಂಗಳೂರು (ಆ.02): ಕ್ಯಾಬ್‌ನಲ್ಲಿ ಪರ್ಸನಲ್ ವಿಚಾರ ಮಾತನಾಡುವ ಮುನ್ನ ಎಚ್ಚರ. ಹೌದು! ಇದೀಗ ಕ್ಯಾಬ್‌ನಲ್ಲಿ ಪರ್ಸನಲ್ ವಿಚಾರ ಮಾತನಾಡಿ  ಮಹಿಳೆ ಲಕ್ಷ ಲಕ್ಷ ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ. ಸಿನಿಮೀಯ ಶೈಲಿಯಲ್ಲಿ ಖತರ್ನಾಕ್ ಕ್ಯಾಬ್ ಚಾಲಕ ಮಹಿಳೆಗೆ ವಂಚಿಸಿದ್ದು, 2022ರ ನವೆಂಬರ್‌ನಲ್ಲಿ ಕ್ಯಾಬ್‌ನಲ್ಲಿ ಮಹಿಳೆ. ಪ್ರಯಾಣ ಮಾಡಿದ್ದರು.  ಇಂದಿರಾನಗರದಿಂದ ಬಾಣಸವಾಡಿವರೆಗೆ ಕ್ಯಾಬ್ ಬುಕ್ ಮಾಡಿ ಮಹಿಳೆ ಪ್ರಯಾಣ ಮಾಡಿದ್ದು, ಈ ವೇಳೆ ಮಹಿಳೆಯನ್ನ ಚಾಲಕ ಕಿರಣ್ ಕುಮಾರ್ ಪರಿಚಯಿಸಿಕೊಂಡಿದ್ದ. 

ಇದೇ ವೇಳೆ ಕ್ಲಾಸ್ ಮೇಟ್ ಬಗ್ಗೆ ಮಹಿಳೆ ಮಾತನಾಡಿದ್ದು, ಮಹಿಳೆಯ ಮಾತುಗಳನ್ನ ಅಸಾಮಿ ಚಾಲಕ ಕಳ್ಳ ಕಿವಿಯಿಂದ ಆಲಿಸಿದ್ದ. ಕೆಲ ದಿನಗಳ ನಂತರ ಮಹಿಳೆಗೆ ಕ್ಯಾಬ್ ಚಾಲಕನಿಂದ ನಾನು ನಿಮ್ಮ ಬಾಲ್ಯ ಸ್ನೇಹಿತ ಎಂದು ಮೆಸೇಜ್ ಮಾಡಿ, ಪೋನ್‌ನಲ್ಲಿ ಕಂಟ್ಯಾಕ್ಟ್ ಬೆಳೆಸಿದ್ದ. ನಂತರ ತನಗೆ ಹಣಕಾಸು ತೊಂದರೆ ಇದ್ದು, ಸ್ವಲ್ಪ ಸಹಾಯ ಬೇಕು ಎಂದಿದ್ದ. ಇನ್ನು ಬಾಲ್ಯ ಸ್ನೇಹಿತ ಅಂತಾ ಕನಿಕರ ತೋರಿಸಿ ಮಹಿಳೆ ಹಣ ಕಳಿಸಿದ್ದರು.  ಸುಮಾರು 22 ಲಕ್ಷ ಹಣವನ್ನು ಮಹಿಳೆ ಕ್ಯಾಬ್ ಚಾಲಕನಿಗೆ ಕಳುಹಿಸಿದ್ದು, ಈ ಹಣದಿಂದ ಅಸಾಮಿ ಮೋಜು ಮಸ್ತಿ ಮಾಡಿದ್ದು, ಹಣಕೊಟ್ಟ ಬಳಿಕ ಚಾಲಕನ ಅಸಲಿಯತ್ತು ಬೆಳಕಿಗೆ ಬಂದಿದೆ. 

Tap to resize

Latest Videos

ಹನಿಟ್ರ್ಯಾಪ್‌ ಮಾಡಿ 30 ಜನರಿಗೆ 30 ಲಕ್ಷ ಟೋಪಿ: ಮೂವರ ಬಂಧನ

ಇಷ್ಟು ದಿನ ಪೋನ್‌ನಲ್ಲಿ ಮಾತನಾಡಿದ್ದು, ಬಾಲ್ಯ ಸ್ನೇಹಿತ ಅಲ್ಲ ಅನ್ನೋದು ಪತ್ತೆಯಾಗಿದ್ದು, ಮಹಿಳೆಗೆ ವಿಚಾರ ತಿಳಿಯುತ್ತಿದ್ದಂತೆ ಕ್ಯಾಬ್ ಚಾಲಕನಿಂದ ಬ್ಲಾಕ್ ಮೇಲ್ ಶುರುವಾಗಿದೆ.  ನಿನ್ನ ಮತ್ತು ನಿನ್ನ ಸ್ನೇಹಿತನ ವಿಚಾರ ಹೊರ ಬಿಡ್ತೀನಿ, ಅಲ್ಲದೇ ನಿನ್ನ ಗಂಡನಿಗೆ ವಿಚಾರ ತಿಳಿಸಿ ಸಂಸಾರ ಹಾಳು ಮಾಡುತ್ತೇನೆ ಎಂದು ಕ್ಯಾಬ್ ಚಾಲಕ ಬೆದರಿಕೆ ತನ್ನ ಬಳಿಯಿರುವ ಚಿನ್ನಾಭರಣ ನೀಡುವಂತೆ ಬೇಡಿಕೆಯಿಟದ್ಟಿದ್ದಾನೆ. ಮಹಿಳೆಗೆ ಬೆದರಿಸಿ ಸುಮಾರು 750 ಗ್ರಾಂ ಚಿನ್ನಾಭರಣವನ್ನು ಕ್ಯಾಬ್ ಚಾಲಕ ಸುಲಿದಿದ್ದಾನೆ. 

ಮನೆ ಮಾಲೀಕನ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ವೇಳೆ ಸಿಲಿಂಡರ್ ಸ್ಪೋಟ: ಮನೆ ಧ್ವಂಸ

ಬಳಿಕ ಈ ಬಗ್ಗೆ ರಾಮಮೂರ್ತಿನಗರ ಠಾಣೆಯಲ್ಲಿ ಉಬರ್ ಕ್ಯಾಬ್ ಚಾಲಕ ಕಿರಣ್ ಕುಮಾರ್ ವಿರುದ್ದ ಮಹಿಳೆ ದೂರು ದಾಖಲಿಸಿದ್ದು, ಹೆಸರಘಟ್ಟ ಮೂಲದ ಕ್ಯಾಬ್ ಚಾಲಕನನ್ನ ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಬಳಿ ಪಡೆದಿದ್ದ ಚಿನ್ನಾಭರಣವನ್ನು ಅಸಾಮಿ ಬೇರೆ ಬೇರೆ ಕಡೆ ಆಡಮಾನ ಇಟ್ಟು ಹಣ ಪಡೆದಿದ್ದಾನೆ. ಇನ್ನು ಆಡಮಾನ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಸೂಲಿ ಮಾಡಿದ್ದಾರೆ. ಸದ್ಯ ಕ್ಯಾಬ್‌ನಲ್ಲಿ ಪರ್ಸನಲ್ ವಿಚಾರ ಮಾತಾಡೋ ಮುನ್ನ ಸ್ವಲ್ಪ ಹುಷಾರಾಗಿರಿ. ಇಲ್ಲಂದ್ರೆ ನಿಮ್ಮ ವೈಯಕ್ತಿಕ ಮಾತುಕತೆ, ನಿಮ್ಮ ಜೀವನವನ್ನ ಬೀದಿಗೆ ತರೋದು ಗ್ಯಾರೆಂಟಿ.

click me!