
ಪಣಂತಿಟ್ಟ(ಮಾ.28): ಪವಿತ್ರ ಕ್ಷೇತ್ರ ಶಬರಿಮಲೆಗೆ ತೆರಳಿ ವಾಪಾಸ್ ಆಗುತ್ತಿದ್ದ ಯಾತ್ರಾರ್ಥಿಕರ ಬಸ್ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಘಟನೆ ಕೇರಳದ ಪಣಂತಿಟ್ಟ ಜಿಲ್ಲೆಯ ನೀಲಕ್ಕಲ್ ಬಳಿ ಸಂಭವಿಸಿದೆ. 7 ಮಕ್ಕಳು ಸೇರಿದಂತೆ 68 ಶಬರಿಮಲೆ ಯಾತ್ರಾರ್ಥಿಕರನ್ನು ಹೊತ್ತ ಬಸ್ ತಮಿಳುನಾಡಿನಿಂದ ಶಬರಿಮಲೆ ಯಾತ್ರೆಗೆ ತೆರಳಿತ್ತು. ಇಂದು(ಮಾ.28) ಮಧ್ಯಾಹ್ನ 1.15ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪ್ರಪಾತಕ್ಕೆ ಬಿದ್ದಿದೆ. ಇದರ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆ ಸೇರಿಸುವಲ್ಲಿ ವಿಳಂಬವಾಗಿದೆ. ಹೀಗಾಗಿ ಹಲವರ ಆರೋಗ್ಯ ಸ್ಥಿತಿ ಚಿತಾಂಕಜನಕವಾಗಿದೆ.
68 ಯಾತ್ರಾರ್ಥಿಕರ ಪೈಕಿ 62 ಮಂದಿ ಗಾಯಗೊಂಡಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ. ಅಪಘಾತದ ಬೆನ್ನಲ್ಲೇ ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ. ಆದರೆ ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ಸಿಗದೇ ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸುವಲ್ಲಿ ವಿಳಂಭವಾಗಿದೆ. ಪಣಂತಿಟ್ಟ ಹಾಗೂ ಎರುಮಲೆ ಜಿಲ್ಲಾಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಗಾಯಳುಗಳನ್ನು ದಾಖಲಿಸಲಾಗಿದೆ.
ಶಬರಿಮಲೆ ಕಾಣಿಕೆ ಎಣಿಕೆಯಲ್ಲಿ ಲೋಪ: ವರದಿಗೆ ಹೈಕೋರ್ಟ್ ಸೂಚನೆ
ತೀವ್ರವಾಗಿ ಗಾಯಗೊಂಡಿರುವ 20 ಮಂದಿಯನ್ನು ಕೋಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು, ಅಗ್ನಿಶಾಮಕ ದಳಕ್ಕೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಪವಿತ್ರ ಕ್ಷೇತ್ರ ಸಂದರ್ಶಿಸಿ ಮರಳಿ ಬರುವಾಗ ಈ ಘಟನೆ ಸಂಭವಿಸಿದೆ. ಮಾರ್ಚ್ 26 ರಂದು ಶಬರಿಮಲೆ ಕ್ಷೇತ್ರದ ಬಾಗಿಲು ಭಕ್ತರಿಗೆ ತೆರೆದಿದೆ. ಉತ್ತರಂ ಉತ್ಸವ ಹಿನ್ನಲೆಯಲ್ಲಿ ಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದಾರೆ.
ತಮಿಳುನಾಡಿನಿಂದ 68 ಮಂದಿ ಶಬರಿಮಲೆ ಮಾಲೆ ಧರಿಸಿ, ವೃತ ಸ್ವೀಕರಿಸಿ ಕ್ಷೇತ್ರಕ್ಕೆ ತೆರಳಿದ್ದರು. ಯಾವುದೇ ಅಡೆ ತಡೆ ಇಲ್ಲದೇ ಶಬರಿಮಲೆ ಯಾತ್ರೆ ಮುಗಿಸಿದ ಯಾತ್ರಾರ್ಥಿಕರು ಹಿಂತಿರುಗುವ ವೇಳೆ ಈ ಘಟನೆ ಸಂಭವಿಸಿದೆ. ಆ್ಯಂಬುಲೆನ್ಸ್ ಸೇವೆ ವ್ಯತ್ಯಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿಡಿದ್ದಾರೆ.
ಶಬರಿಮಲೆಗೆ ತೆರಳಿದ್ದ ಕೊಡಗು ಯುವಕ ಸಮುದ್ರ ಪಾಲು: ಕಣ್ಣೂರು ಬೀಚ್‌ನಲ್ಲಿ ಕಣ್ಮರೆ
ಕಡಿದಾದ ರಸ್ತೆ ಮೂಲಕ ಸಾಗುತ್ತಿದ್ದ ವೇಳೆ ಎರುಮೇಲಿ ರಸ್ತೆಯ ಮೂರನೇ ತಿರುವಿನ ಬಳಿ ಬಸ್ ನಿಯಂತ್ರಣ ತಪ್ಪಿದೆ. ಇದರ ಪರಿಣಾಮ ನೇರವಾಗಿ ಪ್ರಪಾತಕ್ಕೆ ಉರುಳಿದೆ. ಇನ್ನೂ ರಕ್ಷಣಾ ಕಾರ್ಯಗಳು ನಡೆಯುತ್ತಿದೆ. ಹೀಗಾಗಿ ಬಸ್‌ನಲ್ಲಿದ್ದ 7 ಮಕ್ಕಳ ಕುರಿತು ಮಾಹಿತಿ ಇನ್ನಷ್ಟ ಲಭ್ಯವಾಗಬೇಕಿದೆ. ಇತ್ತ ಮಾಹಿತಿ ತಿಳಿದ ಯಾತ್ರಾರ್ಥಿಕ ಸಂಬಂಧಿಕರು ಇದೀಗ ಪಣಂತಿಟ್ಟದತ್ತ ಧಾವಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ