ಕೈಯಲ್ಲಿ ಮದರಂಗಿ, ಪ್ರೀತಿಸಿದವನೊಂದಿಗೆ ಮದುವೆ ಫಿಕ್ಸ್; ಆದ್ರೂ ನೇಣಿಗೆ ಕೊರಳೊಡ್ಡಿದ ವಧು

By Mahmad Rafik  |  First Published Jul 6, 2024, 1:25 PM IST

ಮದುವೆಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದರು, ಎರಡು ದಿನ ಕಳೆದಿದ್ದರೆ ಪ್ರೀತಿಸಿದವನ ಜೊತೆ ಸಪ್ತಪದಿ ತುಳಿಯಬೇಕಿತ್ತು. ಆದ್ರೆ ಈಗ ಮದುವೆ ಮನೆಯಲ್ಲಿ ಸೂತಕ ಆವರಿಸಿದೆ.


ಚಂಡೀಗಢ: ಪ್ರೀತಿಸಿದ ಯುವಕನನ್ನ ಮದುವೆಯಾಗುತ್ತಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹರಿಯಾಣದ ಕರ್ನಾಲ್ ಎಂಬಲ್ಲಿ  ಈ ಘಟನೆ ನಡೆದಿದ್ದು, ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಲವ್ ಮ್ಯಾರೇಜ್ ಆಗುತ್ತಿರುವ ಕಾರಣ ಯುವತಿಯ ಪೋಷಕರು ಈ ಮದುವೆಯಿಂದ ಖುಷಿಯಾಗಿರಲಿಲ್ಲ. ಆದರೂ ಮದುವೆ ದಿನಾಂಕ ನಿಗದಿ ಮಾಡಿದ್ದರು. ಪೋಷಕರು ತನ್ನ ಮದುವೆಗೆ ಸಂಪೂರ್ಣವಾಗಿ ಸಮ್ಮತಿ ಸೂಚಿಸದ ಹಿನ್ನೆಲೆ ನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರ್ನಾಲ್ ಸೆಕ್ಟರ್ 32ರಲ್ಲಿ ಈ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಶರಣಾಗಿರುವ 19 ವರ್ಷದ ಯುವತಿ ಸುಮನ್ ಝಗ್ಗಿ ಜೋಪಡಿಯಲ್ಲಿ ವಾಸವಾಗಿದ್ದಳು. ಸುಮನ್ ಪಕ್ಕ  ಏರಿಯಾದಲ್ಲಿ ವಾಸಿಸುತ್ತಿದ್ದ ಯುವಕನನ್ನು ಪ್ರೀತಿಸುತ್ತಿದ್ದಳು. ಯುವತಿಯ ತಾಯಿ ಇಬ್ಬರ ಮದುವೆಗೆ ಒಪ್ಪಿ ಮಗಳ ಮದುವೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಯುವಕ ಬೇರೆ ಜಾತಿಯವ ಎಂದು ಯುವತಿಯ ತಂದೆ ಮದುವೆಗೆ ಒಪ್ಪಿರಲಿಲ್ಲ. ಮದುವೆ ಸಂಬಂಧ ತಂದೆ -ಮಗಳ ನಡುವೆ ಮನಸ್ತಾಪ ಉಂಟಾಗಿ ಜಗಳ ನಡೆದಿತ್ತು. ಜಗಳದಲ್ಲಿ ಮಗಳ ಮೇಲೆ ತಂದೆ ಹಲ್ಲೆ ಮಾಡಿದ್ದರು. ಇದರಿಂದ ನೊಂದ ಸುಮನ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. 

Tap to resize

Latest Videos

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿಜಯನಗರ ಮೂಲದ ವಿವಾಹಿತೆ ಟೆಕ್ಕಿ ಬೆಂಗಳೂರಿನಲ್ಲಿ ಆತ್ಮಹತ್ಯೆ!

ಈ ಸಂಬಂಧ ಯುವಕನ ತಾಯಿ ಪ್ರತಿಕ್ರಿಸಿದ್ದಾರೆ. ಪ್ರೀತಿಯನ್ನು ಒಪ್ಪದಿದ್ದರೆ ಮಕ್ಕಳು ಏನಾದ್ರೂ ದುಡುಕಿನ ನಿರ್ಧಾರ ತೆಗೆದುಕೊಳ್ತಾರೆ ಎಂಬ ಭಯವಿತ್ತು. ಹಾಗಾಗಿ ನಾನು ಮದುವೆಗೆ ಒಪ್ಪಿಗೆ ನೀಡಿದ್ದೆ. ತಡರಾತ್ರಿ ಸುಮನ್ ನನಗೆ ಫೋನ್ ಮಾಡಿದ್ದಳು. ಆಕೆಯ ತಂದೆ ಹಲ್ಲೆ ನಡೆಸಿ ಬೆದರಿಕೆ ಹಾಕುತ್ತಿದ್ದರು. ನಾವು ಮದುವೆಗೆ ಯಾವುದೇ ವರದಕ್ಷಿಣೆ ಸಹ ಕೇಳಿರಲಿಲ್ಲ ಎಂದು ಹೇಳಿದ್ದಾರೆ. ಸುಮನ್ ಕೊಲೆಗೆ ಆಕೆಯ ತಂದೆ ಜನರನ್ನು ಕರೆಸಿದ್ದ ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

ತಡರಾತ್ರಿ ಸ್ನೇಹಿತೆಯ ಕೋಣೆಗೆ ನುಗ್ಗಿದ್ದ 15ರ ಬಾಲಕನ ಪ್ರಾಣ ಹೋಗಿದ್ದೇಗೆ? ಇಬ್ಬರ ಬಂಧನ

click me!