ಬ್ರಾಹ್ಮಣರಿಗೆ ಅವಹೇಳನ ಪ್ರಕರಣ;  ಪೊಲೀಸರ ಮುಂದೆ ಚೇತನ್ ಹೇಳಿಕೆ ದಾಖಲು

By Suvarna NewsFirst Published Jun 16, 2021, 3:40 PM IST
Highlights

* ನಟ ಚೇತನ್ ರಿಂದ ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ.
* ಬಸವನಗುಡಿ ಪೊಲೀಸರಿಂದ ಮುಂದುವರಿದ ವಿಚಾರಣೆ..
* ಜಯನಗರ ಎಸಿಪಿ ಶ್ರೀನಿವಾಸ್ ರಿಂದ ವಿಚಾರಣೆ
* ಸಂಪೂರ್ಣ ಹೇಳಿಕೆ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿರುವ ಪೊಲೀಸರು

ಬೆಂಗಳೂರು(ಜೂ. 16) ಬ್ರಾಹ್ಮಣರು ಮತ್ತು ಬ್ರಾಹ್ಮಣ್ಯದ ಬಗ್ಗೆ ವಿವಾದಕಾರಿ ಹೇಳಿಕೆ ನೀಡಿದ್ದ  ಆರೋಪ ಎದುರಿಸುತ್ತಿರುವ ನಟ  ಚೇತನ್  ಅಹಿಂಸಾ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದರು. ಬಸವನಗುಡಿ ಪೊಲೀಸ್ ಠಾಣೆಗೆ ಚೇತನ್ ಬಂದಿದ್ದಾರೆ.

ನೋಟೀಸ್ ಗೆ ಉತ್ತರ ನೀಡಲು ಚೇತನ್ ಅಹಿಂಸಾ ಬಂದಿದ್ದಾರೆ. ಸ್ನೇಹಿತರು ಹಾಗೂ ತನ್ನ ವಕೀಲರ ಜೊತೆ ನಟ ಪೊಲೀಸ್ ಠಾಣಗೆ ಬಂದಿದ್ದಾರೆ.  ಬಸವನಗುಡಿ ಇನ್ಸ್ ಪೆಕ್ಟರ್ ಮುಂದೆ ಹಾಜರ್ ಆದ ನಟ ಚೇತನ್ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ.

ನಟನ ವಿರುದ್ಧ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ದೂರು

ವಿಪ್ರ ಯುವ ವೇದಿಕೆಯ ಪವನ್ ಕುಮಾರ್ ಶರ್ಮಾ ದೂರು ನೀಡಿದ್ದ ಆಧಾರದ ಬಸವನಗುಡಿ ಪೊಲೀಸರು  ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಚೇತನ್ ಹೇಳಿಕೆಯನ್ನು ಲಿಖಿತವಾಗಿ ಮತ್ತು ವಿಡಿಯೋ  ರೆಕಾರ್ಡ್ ಮಾದರಿಯಲ್ಲಿ ದಾಖಲಿಸಿಕೊಳ್ಳಲಾಗುತ್ತಿದೆ. ಮೂರು ಗಂಟೆಗೂ ಅಧಿಕ ಕಾಲದಿಂದ ಹೇಳಿಕೆ ಪಡೆದುಕೊಳ್ಳಲಾಗಿದೆ.

ಬ್ರಾಹ್ಮಣರ ಬಗ್ಗೆ ನಟ ಚೇತನ್ ಅವಹೇಳನಕಾರಿ ಹೇಳಿಕೆ  ನೀಡಿದ್ದ ಆರೋಪದ ಮೇಲೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಬ್ರಾಹ್ಮಣಿಕೆ ಮತ್ತು ಬ್ರಾಹ್ಮಣತ್ವ ಭಯೋತ್ಪಾದನೆ ಎಂಬ ರೀತಿಯಲ್ಲಿ ಚೇತನ್  ಮಾತನಾಡಿದ್ದರು ಎಂದು ಆರೋಪಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿಯೂ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. 

 

click me!