ಬೆಳಗಾವಿ: ಪೊಲೀಸರ ಮೇಲೆಯೇ ಹಲ್ಲೆ, ಐವರ ವಿರುದ್ಧ ಕೇಸ್‌

By Kannadaprabha News  |  First Published Jun 16, 2021, 1:54 PM IST

* ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ 
* ಬೆಳಗಾವಿಯ ದರ್ಬಾರ್‌ ಗಲ್ಲಿಯಲ್ಲಿ ನಡೆದ ಘಟನೆ
* ಪೊಲೀಸರ ಮೇಲಿನ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ


ಬೆಳಗಾವಿ(ಜೂ.16):  ಕೊರೋನಾ ವೈರಸ್‌ ತಡೆಗೆ ಜಾರಿಗೊಳಿಸಿದ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಗುಂಪಾಗಿ ಜಮಾಯಿಸಿದ ಯುವಕರಿಗೆ ಮನೆಗೆ ತೆರಳುವಂತೆ ಸೂಚಿಸಿದ ಕರ್ತವ್ಯನಿರತ ಪೊಲೀಸರ ಮೇಲೆಯೇ ನಡೆಸಿರುವ ಘಟನೆ ಬೆಳಗಾವಿಯ ದರ್ಬಾರ್‌ ಗಲ್ಲಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಈ ಪ್ರಕರಣ ಸಂಬಂಧ ಐವರು ಯುವಕರ ವಿರುದ್ಧ ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೋನಾ ವೈರಸ್‌ ಸೋಂಕು ತಡೆಗೆ ಜಿಲ್ಲೆಯಲ್ಲಿ ಲಾಕ್‌ಡೌನ್‌ ನಿಯಮ ಜಾರಿಗೊಳಿಸಲಾಗಿದೆ. ಆದರೆ, ಕೋವಿಡ್‌ ನಿಯಮ ಉಲ್ಲಂಘಿಸಿ, ದರ್ಬಾರ ಗಲ್ಲಿಯಲ್ಲಿ ಯುವಕ ಗುಂಪೊಂದು ಹರಟೆ ಹೊಡೆಯುತ್ತ ನಿಂತಿತ್ತು. ಇದನ್ನು ಗಮನಿಸಿದ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು, ಲಾಕ್‌ಡೌನ್‌ ಆದೇಶ ಜಾರಿಯಲ್ಲಿದೆ. ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳುವಂತೆ ಸೂಚನೆ ನೀಡಿದರು. 

Latest Videos

undefined

'ಪಬ್ಲಿಕ್‌ನಲ್ಲಿ ಮೂತ್ರಮಾಡಬೇಡಿ'  ಬುದ್ಧಿ ಹೇಳಿದ್ದಕ್ಕೆ ಜಜ್ಜಿ ಕೊಂದರು

ಕೆಲವರು ಅಲ್ಲಿಂದ ತೆರಳಿದರೆ, ಮತ್ತೆ ಕೆಲ ಯುವಕರು ಅಲ್ಲಿಂದ ತೆರಳಲಿಲ್ಲ. ತಮಗೆ ಬುದ್ಧಿವಾದ ಹೇಳಿದ ಪೊಲೀಸರ ಜೊತೆಗೆ ವಾಗ್ವಾದಕ್ಕಿಳಿದರು. ಅಲ್ಲದೇ ಪೊಲೀಸರನ್ನು ನಿಂದಿಸಿದ್ದಲ್ಲದೇ ಅವರ ಮೇಲೆ ಹಲ್ಲೆಯನ್ನೂ ನಡೆಸಿದರು. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ವ್ಯಾಪಕ ಜಾಲಬೀಸಿದ್ದಾರೆ. ಪೊಲೀಸರ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿರುವ ದೃಶ್ಯಗಳು ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
 

click me!