'ನಾನೊಬ್ಬ ಟೆರರಿಸ್ಟ್, ಕನ್ನಡಿಗರ ವಿರೋಧಿ, ಮೆಟ್ರೋ ನಿಲ್ದಾಣ ಸ್ಫೋಟಿಸುವುದಾಗಿ ಇಮೇಲ್ ಬೆದರಿಕೆ!

Published : Nov 18, 2025, 09:01 AM IST
Bomb Threat to Bengaluru Namma Metro Station by Unknown Person

ಸಾರಾಂಶ

Bangalore Metro bomb threa: ಬೆಂಗಳೂರು ಮೆಟ್ರೋ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬಿಎಂಆರ್‌ಸಿಎಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ಇಮೇಲ್ ಮೂಲಕ ಬೆದರಿಕೆ ಹಾಕಿದ್ದಾನೆ. ತನ್ನ ವಿಚ್ಛೇದಿತ ಪತ್ನಿಗೆ ಮೆಟ್ರೋ ಸಿಬ್ಬಂದಿ ಕಿರುಕುಳ ನೀಡುತ್ತಿರುವುದೇ ಇದಕ್ಕೆ ಕಾರಣ ಎಂದು ಉಲ್ಲೇಖ. ಈ ಸಂಬಂಧ ಪ್ರಕರಣ ದಾಖಲು

ಬೆಂಗಳೂರು,(ನ.18): ಬೆಂಗಳೂರು ಮೆಟ್ರೋದ ಒಂದು ಸ್ಟೇಷನ್ ಸ್ಫೋಟಿಸಿ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿ ಅಪರಿಚಿತ ವ್ಯಕ್ತಿಯೊಬ್ಬರು ಬಿಎಂಆರ್‌ಸಿಎಲ್‌(BMRCL)ನ ಅಧಿಕೃತ ಇಮೇಲ್‌ಗೆ ಸಂದೇಶ ಕಳುಹಿಸಿದ ಘಟನೆ ನಡೆದಿದೆ. ಈ ಬೆದರಿಕೆ ಇಮೇಲ್ ನವೆಂಬರ್ 14ರ ರಾತ್ರಿ 11.30ರ ಸುಮಾರು ಬಂದಿದೆ.

ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಿನ್ನೆಲೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಬಿಎಂಆರ್‌ಸಿಎಲ್ ಎಫ್‌ಐಆರ್ ದಾಖಲಿಸಿದೆ. ನವೆಂಬರ್ 14ರಂದೇ ಇಮೇಲ್ ಬಂದಿದ್ದರೂ ಇಮೇಲ್ ಪರಿಶೀಲನೆ ನಡೆಸಿ ಬಳಿಕ ಬಿಎಂಆರ್ ಸಿಎಲ್ ಅಧಿಕಾರಿ ದೂರು ನೀಡಿದ್ದಾರೆ.

ಮೆಟ್ರೋ ಸ್ಫೋಟಿಸುವುದಾಗಿ ಬೆದರಿಕೆ, ಇಮೇಲ್‌ನಲ್ಲಿ ಏನಿದೆ?

'If ever I come to know that your metro employees are torturing mentally to my past divorced wife, after duty hours, be careful, one of your metro station gets blasted ... I am also a terrorists liker PATRIOTIC against KANNADIGAS'

(ನನ್ನ ವಿಚ್ಛೇದಿತ ಪತ್ನಿಗೆ ಮೆಟ್ರೋ ಸಿಬ್ಬಂದಿ ಕಿರುಕುಳ ಕೊಡ್ತಿದ್ದಾರೆ. ನಿಮ್ಮ ಒಂದು ಮೆಟ್ರೋ ನಿಲ್ದಾಣ ಬ್ಲಾಸ್ಟ್ ಮಾಡಬೇಕಾಗುತ್ತೆ. ನಾನು ಒಬ್ಬ ಉಗ್ರಗಾಮಿ ಇದ್ದಂತೆ, ಅದರಲ್ಲೂ ಕನ್ನಡಿಗರ ವಿರುದ್ಧ..) ಎಂದು ಇಮೇಲ್ ಬರೆದಿರುವ ಅಪರಿಚಿತ.

ನಮ್ಮ ಮೆಟ್ರೋ ಭದ್ರತೆ :

ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಬೆದರಿಕೆ ಸಂದೇಶ ಕಳುಹಿಸಿದ ವ್ಯಕ್ತಿಯ ಐಪಿ ವಿಳಾಸ, ಇಮೇಲ್ ಖಾತೆಯ ಮಾಹಿತಿ ಹಾಗೂ ಇತರ ತಾಂತ್ರಿಕ ವಿವರಗಳನ್ನು ಪಡೆದು ಸೈಬರ್ ತಜ್ಞರ ತಂಡ ಆಗುಂತಕ ಪತ್ತೆಗೆ ಮುಂದಾಗಿದ್ದಾರೆ. ಬೆದರಿಕೆ ಹಿನ್ನೆಲೆ ಮೆಟ್ರೋ ನಿಲ್ದಾಣಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಮೆಟ್ರೋ ನಿಲ್ದಾಣಕ್ಕೆ ಸ್ಫೋಟದ ಬೆದರಿಕೆ ಬಂದಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ರಿಸ್‌ಮಸ್ ಹಬ್ಬದ ದಿನವೇ ಭೀಕರ ಅಪಘಾತ: ಎತ್ತಿನ ಬಂಡಿಗೆ ಬೈಕ್ ಡಿಕ್ಕಿ, ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ!
Rapido Bike ಬುಕ್ ಮಾಡುವ ಮುನ್ನ ಎಚ್ಚರ! ರೈಡರ್ ಎಡವಟ್ಟಿಗೆ ಹಿಂಬದಿ ಕುಳಿತ ಗ್ರಾಹಕನ ಮಂಡಿ ಚಿಪ್ಪು ಪುಡಿ ಪುಡಿ!