Bengaluru: ಬೆ*ತ್ತಲೆ ವಿಡಿಯೋ ಮುಂದಿಟ್ಟು ಬ್ಲ್ಯಾಕ್‌ಮೇಲ್‌ ಮಾಡಿ ಯುವಕನಿಂದ 1.5 ಲಕ್ಷ ರು. ಸುಲಿಗೆ

Published : Jan 12, 2026, 05:12 AM IST
ಸಾಂದರ್ಭಿಕ ಚಿತ್ರ

ಸಾರಾಂಶ

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯ ಮಾತು ನಂಬಿ ವಿಡಿಯೋ ಕಾಲ್‌ನಲ್ಲಿ ಬೆತ್ತಲಾದ ಯುವಕನಿಗೆ ವಂಚಕರು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಯುವಕನ ಖಾಸಗಿ ದೃಶ್ಯಗಳನ್ನು ಬಳಸಿ, ಬೆದರಿಸಿ ಸುಮಾರು ಒಂದೂವರೆ ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾರೆ. 

ಬೆಂಗಳೂರು:  ಡೇಟಿಂಗ್ ಆ್ಯಪ್‌ನಲ್ಲಿ ನಕಲಿ ಪ್ರೊಫೈಲ್‌ ಸೃಷ್ಟಿಸಿದ ಕಿಡಿಗೇಡಿಗಳು, ಯುವಕನಿಗೆ ವಿಡಿಯೋ ಕಾಲ್‌ ಮಾಡಿ ಬೆತ್ತಲೆಗೊಳಿಸಿ ಬ್ಲ್ಯಾಕ್‌ಮೇಲ್ ಮಾಡಿ ಒಂದೂವರೆ ಲಕ್ಷ ರು. ಸುಲಿಗೆ ಮಾಡಿದ್ದಾರೆ. ಈ ಸಂಬಂಧ 26 ವರ್ಷದ ಯುವಕ ಕೇಂದ್ರ ವಿಭಾಗದ ಸೆನ್‌ ಠಾಣೆಯಲ್ಲಿ ದೂರು ನೀಡಿದ್ದಾನೆ.

ಏಕಾಂತವಾಗಿ ಮಾತನಾಡಲು ಶುರು

ಈಜಿಪುರದಲ್ಲಿ ವಾಸವಾಗಿರುವ ಯುವಕ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಜ.5 ರಂದು ಡೇಟಿಂಗ್ ಆ್ಯಪ್‌ನಲ್ಲಿ ಪ್ರೊಫೈಲ್ ರಚಿಸಿದ ತಕ್ಷಣ ಇಶಾನಿ ಎಂಬ ಯುವತಿಯಿಂದ ರಿಕ್ವೆಸ್ಟ್ ಬಂದಿದೆ. ಬಳಿಕ ಪರಿಚಯ ಮಾಡಿಕೊಂಡು ಇಬ್ಬರು ಕೂಡ ಏಕಾಂತವಾಗಿ ಮಾತನಾಡಲು ಶುರು ಮಾಡಿದ್ದರು. ಖಾಸಗಿ ವಿಚಾರಗಳನ್ನು ಹಂಚಿಕೊಂಡಿದ್ದರು. ನಂತರ ಇಬ್ಬರು ಮೊಬೈಲ್​​ ನಂಬರ್​​ ಶೇರ್​​ ಮಾಡಿಕೊಂಡು ಮಾತನಾಡಿದ್ದರು. ಕೆಲ ದಿನಗಳ ಹಿಂದೆ ಯುವಕನಿಗೆ ಯುವತಿಯಿಂದ ವಿಡಿಯೋ ಕಾಲ್​​ ಬಂದಿದೆ. ಬಟ್ಟೆಯನ್ನು ಬೆಚ್ಚಿ, ಆತನ ಮುಂದೆ ಬೆತ್ತಲೆಯಾಗಿದ್ದಾಳೆ. 

ನೀನು ಬಟ್ಟೆ ಬಿಚ್ಚು ಎಂದು ಹೇಳಿ, ಅವನನ್ನು ಬೆತ್ತಲೆ ಮಾಡಿದ್ದಳು. ಆತ ಕೂಡ ಬಟ್ಟೆಯನ್ನು ಬಿಚ್ಚಿದ್ದ ಎನ್ನಲಾಗಿದೆ. ಈ ದೃಶ್ಯಗಳನ್ನು ಸೆರೆ ಹಿಡಿದುಕೊಂಡಿದ್ದ ಕಿಡಿಗೇಡಿ, ಖಾಸಗಿ ಚಿತ್ರಗಳನ್ನು ವಾಟ್ಸ್‌ಆ್ಯಪ್ ಮಾಡಿ, ಈ ವಿಡಿಯೋವನ್ನು ನಿನ್ನ ಸ್ನೇಹಿತರು, ಕುಟುಂಬಕ್ಕೆ ಕಳುಹಿಸುತ್ತೇನೆ. ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಳ್ಳುವೆ ಎಂದು ಹೇಳಿದ್ದಾನೆ. 

ಎಐ ಯುವತಿಯೇ ಬೆತ್ತಲೆ

ಅದರಿಂದ ಭಯಗೊಂಡ ಯುವಕ ಮೊದಲು 60 ಸಾವಿರ ರು. ಹಾಗೂ ನಂತರ 93 ಸಾವಿರ ರು.ಗಳನ್ನು ಅವರು ನೀಡಿದ್ದ ಖಾತೆಗೆ ಕಳುಹಿಸಿದ್ದಾನೆ. ಆದರೂ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಕೂಡಲೇ ಸೆನ್ ಠಾಣೆಗೆ ಬಂದು ದೂರು ನೀಡಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ಎಐ ಮೂಲಕ ಯುವತಿಯ ಪ್ರೊಫೈಲ್‌ ಸೃಷ್ಟಿಸಿದ್ದು, ಎಐ ಯುವತಿಯೇ ಬೆತ್ತಲೆಯಾಗಿದ್ದಾಳೆ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾತ್ರಿ ಮನೆ ಮುಂದೆ ಬೈಕ್ ನಿಲ್ಲಿಸುವ ಬೆಂಗಳೂರಿಗರೇ ಎಚ್ಚರ! ನೀವು ಮಲಗೋದನ್ನ ಕಾಯ್ತಾರೆ ಕಳ್ಳರು!
ಮಂಗಳೂರು: ಎಡಪದವಿನಲ್ಲಿ ಅಮಾನವೀಯ ಕೃತ್ಯ; ಹಸುವಿನ ಮೂತಿಗೆ ಚೂರಿ ಹಾಕಿದ ವ್ಯಾಪಾರಿ ಉಮರಬ್ಬ!