
ಪಾಟ್ನಾ (ಜೂನ್ 16): ಬಿಹಾರ ರಾಜ್ಯದ ಮುಂಗೇರ್ ನಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಯಾದವ್ (BJP OBC Morcha District General Secretary Arun Yadav) ಪತ್ನಿಗೆ ಗುಂಡಿಕ್ಕಿ ಸಾಯಿಸಿದ ಬಳಿಕ, ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರೂ ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅರುಣ್ ಯಾದವ್ ನಗರದ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ (Kotwali police station area) ಲಾಲ್ ದರ್ವಾಜಾ (Lal Darwaza) ಪ್ರದೇಶದ ನಿವಾಸಿಯಾಗಿದ್ದರು. ಮರಣೋತ್ತರ ಪರೀಕ್ಷೆಗಾಗಿ ಎರಡೂ ಶವಗಳೊಂದಿಗೆ ಪೊಲೀಸರು ಸದರ್ ಆಸ್ಪತ್ರೆಗೆ ತಲುಪಿದ್ದಾರೆ.
ನಗರ ರಾಜಕಾರಣದಲ್ಲಿ ದೊಡ್ಡ ಮಟ್ಟದ ಹಿಡಿತವನ್ನು ಅರುಣ್ ಯಾದವ್ ಹೊಂದಿದ್ದರು. ನಗರದ ಪ್ರಬಲ ಒಬಿಸಿ ನಾಯಕರಾಗಿಯೂ 40 ವರ್ಷದ ಅರುಣ್ ಯಾದವ್ ಹೆಸರು ಮಾಡಿದ್ದರು. ಅವರ ಪತ್ನಿ35 ವರ್ಷದ ಪ್ರೀತಿ ಯಾದವ್ ಕೂಡ ಸಕ್ರಿಯ ರಾಜಕಾರಣದಲ್ಲಿದ್ದ ವ್ಯಕ್ತಿಯಾಗಿದ್ದರು. ಮುಂಬರುವ ಮೇಯರ್ ಚುನಾವಣೆಯಲ್ಲಿ (Mayor Election) ಸ್ಪರ್ಧೆ ನಡೆಸುವ ನಿಟ್ಟಿನಲ್ಲಿ ತಯಾರಿಯನ್ನೂ ನಡೆಸುತ್ತಿದ್ದರು. ಸಾಯಂಕಾಲ ಡಯಾರದಿಂದ ಬಂದಿದ್ದ ಅವರು, ಸಾಕಿದ್ದ ಕುದುರೆಗೆ ಮೇವು ಕೊಟ್ಟಿದ್ದರು. ಅದಾದ ಬಳಿಕ ಈ ಘಟನೆ ನಡೆದಿದೆ ಎಂದು ಅಕ್ಕಪಕ್ಕದವರು ಹೇಳಿದ್ದಾರೆ.
ಘಟನೆಯ ಮಾಹಿತಿ ಬಂದ ತಕ್ಷಣ ಕೊತ್ವಾಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ನಗರ ಆಸ್ಪತ್ರೆಗೆ ತಲುಪಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಶ್ ಜೈನ್ ಈ ಕುರಿತಾಗಿ ಮಾತನಾಡಿದ್ದು, "ಘಟನೆ ಬಗ್ಗೆ ಏನೂ ಹೇಳಲಾರೆ, ಹೇಗಾಯ್ತು ಎನ್ನುವ ಬಗ್ಗೆ ಮಾಹಿತಿಯಿಲ್ಲ. ಅರುಣ್ ಯಾದವ್ ಅವರ ನಿರ್ಗಮನದಿಂದ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ಅರುಣ್ ಯಾದವ್ ಅವರ ಪತ್ನಿ ಮುಂಗೇರ್ ಮುನ್ಸಿಪಲ್ ಕಾರ್ಪೊರೇಷನ್ ನಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿದ್ದರು' ಎಂದು ಹೇಳಿದ್ದಾರೆ.
ಅರುಣ್ ಯಾದವ್ ಮೂವರು ಸಹೋದರರಲ್ಲಿ ಹಿರಿಯರಾಗಿದ್ದರು. ಅರುಣ್ ಯಾದವ್ ತನ್ನ ಪತ್ನಿಯೊಂದಿಗೆ ಲಾಲ್ ದರ್ವಾಜಾದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದರೆ, ಇತರ ಇಬ್ಬರು ಸಹೋದರರು ಹತ್ತಿರದ ಮತ್ತೊಂದು ಮನೆಯಲ್ಲಿ ವಾಸಿಸುತ್ತಿದ್ದರು. ಘಟನೆಗೆ ಕಾರಣಗಳು ಇನ್ನೂ ಪತ್ತೆಯಾಗಿಲ್ಲ.
ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಜನರ ಪ್ರಕಾರ, ಅರುಣ್ ಯಾದವ್ ಸಂಜೆ ಐದು ಗಂಟೆಗೆ ಡಯಾರಾದಲ್ಲಿರುವ ತಮ್ಮ ಜಮೀನಿನಿಂದ ಹಿಂತಿರುಗಿದ್ದರು, ನಂತರ ಅವರು ಕುದುರೆಗೆ ಮೇವು ನೀಡಿ ಕೊಠಡಿಯೊಳಗೆ ಹೋದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಜನರಿಗೆ ಗುಂಡಿನ ಸದ್ದು ಕೇಳಿಸಿದೆ ಎನ್ನಲಾಗಿದೆ.
CRIME NEWS: ಮಗಳ ಮೇಲೆ 32 ವರ್ಷದ ತಂದೆಯಿಂದಲೇ ರೇಪ್: ವಿಕೃತಕಾಮಿ ಬಂಧನ
ಮೇಯರ್ ಚುನಾವಣಾ ಪ್ರಚಾರಕ್ಕೆ ತೆರಳಲು ಪ್ರೀತಿ ಕುಮಾರಿ ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಾಗ್ವಾದ ನಡೆದಿದೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಅಪರಾಧಕ್ಕೆ ಬಳಸಿದ್ದ ಎರಡು ದೇಶ ನಿರ್ಮಿತ ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸಂದರ್ಭದಲ್ಲಿ, ಎಸ್‌ಎಚ್‌ಒ ಡಿ.ಕೆ.ಪಾಂಡೆ ಅವರು ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ತಂಡವು ಸ್ಥಳಕ್ಕೆ ತಲುಪಿದೆ. ಪತಿ ಮತ್ತು ಪತ್ನಿಯ ಮೃತದೇಹಗಳನ್ನು ಕೊಠಡಿಯಿಂದ ಹೊರತೆಗೆಯಲಾಗಿದೆ. ಇಬ್ಬರ ತಲೆಗೂ ಗುಂಡು ತಗುಲಿದೆ.
ಅಂಗಡಿ ಅಂಗಡಿಗೆ ಹೋಗಿ ಪೈಸಾ ವಸೂಲಿ, ನಕಲಿ ಆಫೀಸರ್ ಕಳ್ಳಾಟ CC TVಯಲ್ಲಿ ಸೆರೆ
ಪತಿ-ಪತ್ನಿಯರ ನಡುವಿನ ವೈಚಾರಿಕ ಭಿನ್ನಾಭಿಪ್ರಾಯವೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಅರುಣ್ ಯಾದವ್ ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಪತ್ನಿ ಪ್ರೀತಿ ಕುಮಾರಿ ಅವರನ್ನು ಮೇಯರ್ ಅಭ್ಯರ್ಥಿಯನ್ನಾಗಿ ಕರೆತಂದಿದ್ದು, ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಪತ್ನಿಯನ್ನೇ ಮೇಯರ್ ಅಭ್ಯರ್ಥಿ ಎಂದು ಬಿಂಬಿಸುತ್ತಿರುವುದು ಸ್ಥಳೀಯ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಅರುಣ್ ಯಾದವ್ ನಿರಂತರವಾಗಿ ಸಾರ್ವಜನಿಕರೊಂದಿಗೆ ಸಂವಾದ ನಡೆಸುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ